ಚಾಮರಾಜನಗರ –
ಗ್ರಾ.ಪಂ.ಚುನಾವಣೆ ವ್ಯಷಮ್ಯದಿಂದಾಗಿ ಗೆದ್ದ ಅಭ್ಯರ್ಥಿಯೊಬ್ಬರು ಸೋತವರ ಮೇಲೆ ಚಾಕುವಿನಿಂದ ಇರಿದ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಚಿಲಕವಾಡಿ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ.

ಗೆದ್ದ ಅಭ್ಯಥಿ೯ಯಿಂದ ಸೋತವರ ಮೇಲೆ ಹಲ್ಲೆಯಾಗಿದೆ.ಚಾಕುವಿನಿಂದ ಇಬ್ಬರು ಯುವಕರಿಗೆ ಇರಿದಿದ್ದಾರೆ ಅಪ್ಪ ಮಕ್ಕಳು.

ಮಹೇಶ್ ಹಾಗೂ ಶಿವು ಎಂಬ ಯುವಕರಿಗೆ ಕತ್ತು ಹಾಗೂ ಬೆನ್ನಿಗೆ ಇರಿದಿದ್ದಾರೆ ಗ್ರಾ.ಪಂ.ಸದಸ್ಯರು. ಗಾಯಾಳುಗಳು ಕೊಳ್ಳೇಗಾಲ ಸಕಾ೯ರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ಚಾಕುವಿನಿಂದ ಹಲ್ಲೆ ಮಾಡಿದ ಷಣ್ಮುಖ ಸ್ವಾಮಿ ಹಾಗೂ ಸಂದೇಶ್ ಪರಾರಿಯಾಗಿದ್ದಾರೆ.

ಜನರಲ್ ವಾಡಿ೯ ನಿಂದ ಸ್ಪಧಿ೯ಸಿದ್ದಕ್ಕೆ ಹಲ್ಲೆ ಮಾಡಲಾಗಿದೆ.ಷಣ್ಮುಖ ಸ್ವಾಮಿ ಹಾಗೂ ಸಂದೇಶ್ ವಿರುದ್ಧ ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು.ಹಲ್ಲೆ ಮಾಡಿ ಪರಾರಿಯಾಗಿರುವ ಆರೋಪಿಗಳ ಬಂಧನಕ್ಕೆ ಬಲೆ ಬೀಸಿರುವ ಪೋಲಿಸರು.





















