ಚಾಮರಾಜನಗರ –
ಶಿಕ್ಷಕ ಅರುಣಕುಮಾರ್ ಬಂಧನ – ಬಂಧನದ ಹಿಂದಿನ ಕಾರಣ ಕೇಳಿದ್ರೆ ಶಾಕ್ ಆಗತೀರಾ…..
ವಿದ್ಯಾರ್ಥಿಯೊಬ್ಬನನ್ನು ಲೈಂಗಿಕ ದೌರ್ಜನ್ಯ ನೀಡಿದ ಆರೋಪದ ಮೇಲೆ ಶಿಕ್ಷಕರೊಬ್ಬರನ್ನು ಬಂಧನ ಮಾಡಿದ ಘಟನೆ ಚಾಮರಾಜನಗರದಲ್ಲಿ ನಡೆದಿದೆ.ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕಿನ ಶಾಲೆಯೊಂದರ ವಿಧ್ಯಾರ್ಥಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪದ ಮೇಲೆ ಅದೇ ಶಾಲೆಯ ಶಿಕ್ಷಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದ್ದು
ಈ ಒಂದು ಕಾಯ್ದೆಯಡಿ ಪ್ರಕರಣ ದಾಖಲಿಸಿ ಕೊಂಡಿರುವ ಪೊಲೀಸರು ಬಂಧಿಸಿದ್ದಾರೆ.ಇನ್ನೂ ಅರುಣ್ ಕುಮಾರ್ ಬಂಧಿತ ಆರೋಪಿ ಶಿಕ್ಷಕ ನಾಗಿದ್ದು ವಿದ್ಯಾರ್ಥಿಯನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ ಅರುಣ್ ಕುಮಾರ್ ಬಗ್ಗೆ ಈ ಹಿಂದೆಯೇ ವಿಚಾರ ಬೆಳಕಿಗೆ ಬಂದು ಸಂಧಾನ ಮಾಡಲಾಗಿತ್ತು ಆದರೂ ಅದೇ ಚಾಳಿಯನ್ನು ಮತ್ತೆ ಮುಂದುವರೆಸಿದ್ದನು.
ಹೀಗಾಗಿ ಬಾಲಕ ನೇರವಾಗಿ ಜಿಲ್ಲಾಡಳಿತಕ್ಕೆ ದೂರು ನೀಡಿದ್ದು ಕೂಡಲೇ ಸ್ಪಂದಿಸಿದ ಜಿಲ್ಲಾಡಳಿತ ಶಿಕ್ಷಕನ ವಿರುದ್ಧ ಪೋಕ್ಸೊ ಕಾಯ್ದೆ ಯಡಿ ದೂರು ದಾಖಲಿಸಿ ಬಂಧಿಸಲಾಗಿದೆ.ಸಧ್ಯ ನ್ಯಾಯಾಂಗ ವಶಕ್ಕೆ ಶಿಕ್ಷಕನನ್ನು ಒಪ್ಪಿಸಲಾಗಿದೆ. ಇತ್ತ ಬಾಲಕನನ್ನು ಸದ್ಯ ಬಾಲಮಂದಿರದ ಆಶ್ರಯದಲ್ಲಿ ಇಡಲಾಗಿದೆ.
ಸುದ್ದಿ ಸಂತೆ ನ್ಯೂಸ್ ಚಾಮರಾಜನಗರ…..