ಹುಬ್ಬಳ್ಳಿ –
ನೇಹಾ ಹಿರೇಮಠ ಕೊಲೆ ಪ್ರಕರಣ ಖಂಡಿಸಿ ಹುಬ್ಬಳ್ಳಿಯಲ್ಲಿ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ವೇದಿಕೆಯಿಂದ ಪ್ರತಿಭಟನೆ – ಸುರೇಶ ಗೋಕಾಕ ನೇತ್ರತ್ವದಲ್ಲಿ ನೇಹಾ ಸಾವಿಗೆ ನ್ಯಾಯ ಕೇಳಿದ ಹೋರಾಟಗಾರರು ಕಾನೂನು ಬದಲಾವಣೆಗೆ ಒತ್ತಾಯ ಹೌದು
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸದಸ್ಯ ನಿರಂಜನಯ್ಯ ಹಿರೇಮಠ ಪುತ್ರಿಯ ಕೊಲೆಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.ಈ ಒಂದು ಘಟನೆಯನ್ನು ಖಂಡಿಸಿ ಎಲ್ಲೇಡೆ ಹೋರಾಟಗಳು ಪ್ರತಿಭಟನೆಗಳು ನಡೆಯುತ್ತಿವೆ. ಇನ್ನೂ ಈ ಒಂದು ಘನಘೋರ ಕೃತ್ಯವನ್ನು ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಅಭಿಮಾನಿ ಬಳಗದವರು ಕೂಡಾ ಖಂಡಿಸಿ ಹುಬ್ಬಳ್ಳಿಯಲ್ಲಿ ಪ್ರತಿಭಟನೆ ಮಾಡಿದರು.
ನಗರದ ಉಪನಗರ ಪೊಲೀಸ್ ಠಾಣೆಯ ಮುಂದೆ ಈ ಒಂದು ಕೃತ್ಯಕ್ಕೆ ರಾಯಣ್ಣ ಅಭಿಮಾನಿ ಬಳಗದವರು ಆಕ್ರೋಶವನ್ನು ವ್ಯಕ್ತಪಡಿಸಿ ಪ್ರತಿಭಟನೆ ಮಾಡಿದರು.ನೇಹಾ ಹಿರೇಮಠ ಕೊಲೆ ಪ್ರಕರಣದಲ್ಲಿ ನ್ಯಾಯವನ್ನು ನೀಡುವಂತೆ ಒತ್ತಾ ಯಿಸಿದರು.ವಿದ್ಯಾರ್ಥಿನಿಯ ಕೊಲೆ ಖಂಡಿಸಿ ನಗರದಲ್ಲಿ ಸಂಘಟನೆಯಿಂದ ಪ್ರತಿಭಟನೆಯನ್ನು ಮಾಡಲಾಯಿತು.
ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಅಭಿಮಾನಿ ಬಳಗದವರು ಆಕ್ರೋಶವನ್ನು ವ್ಯಕ್ತಪಡಿಸಿದರು.ನಗರದ ಉಪನಗರ ಪೊಲೀಸ್ ಠಾಣೆ ಮುಂದೆ ಕುಳಿತು ಪ್ರತಿಭಟನೆ ಮಾಡಿದ್ದು ಕಂಡು ಬಂದಿತು.ಸಂಘಟನೆಯ ಅಧ್ಯಕ್ಷ ಸುರೇಶ ಗೋಕಾಕ ನೇತ್ರತ್ವದಲ್ಲಿ ಈ ಒಂದು ಪ್ರತಿಭಟನೆ ನಡೆಯಿತು.
ಠಾಣೆಯ ಮುಂದೆ ಕುಳಿತುಕೊಂಡು ಪ್ರತಿಭಟನೆ ಮಾಡಿ ನ್ಯಾಯಕ್ಕಾಗಿ ಹೋರಾಟವನ್ನು ಮಾಡಿದರು ಸರ್ಕಾರಂತೆ ಸರ್ಕಾರ ಇವರಪ್ಪದಂತ ಸರ್ಕಾರ ಕಾನೂನಂತೆ ಕಾನೂನು ಇವರಪ್ಪದಂತೆ ಕಾನೂನು ಘೋಷಣೆ ಕೂಗಿ ಆಕ್ರೋಶವನ್ನು ವ್ಯಕ್ತಪಡಿಸಿದರು.ಕೊಲೆಯಾದ ನೇಹಾ ಸಾವಿಗೆ ನ್ಯಾಯ ನೀಡುವಂತೆ ಒತ್ತಾಯ ಮಾಡಿ ಈ ಕೂಡಲೇ ಪ್ರಕರಣದಲ್ಲಿ ರಾಜಕೀಯವನ್ನು ಯಾರು ಮಾಡದಂತೆ ತಾಕೀತು ಮಾಡಿದರು.
ಆರೋಪಿಯನ್ನು ಈ ಕೂಡಲೇ ಗಡಿಪಾರು ಮಾಡಿ ಉಗ್ರ ಶಿಕ್ಷೆ ನೀಡುವಂತೆ ಒತ್ತಾಯವನ್ನು ಮಾಡಿದರು ಎಸಿಪಿಯವರಿಗೆ ಮನವಿ ನೀಡಿ ನೇಹಾ ಸಾವಿಗೆ ನ್ಯಾಯ ನೀಡುವಂತೆ ಒತ್ತಾಯ ಮಾಡಿ ಮನವಿಯನ್ನು ನೀಡಿದರು.ಸುರೇಶ ಗೋಕಾಕ ಅವರೊಂದಿಗೆ ಈ ಒಂದು ಪ್ರತಿಭಟನೆ ಯಲ್ಲಿ ಕಿರಣ ಉಪ್ಪಾರ,ಅಶೋಕ ಹಾದಿಮನಿ, ರಾಮಚಂದ್ರ ಧಳವಿ,ದೀಪಕ ಕಲಾಲ,ಬಸವರಾಜ ಮುಳಗುಂದ,ವಿರೇಶ ಗೋಕಾಕ,ದುರ್ಗೇಶ ಪೂಜಾರಿ,ಗಣೇಶ ಅಂಬಿಗೇರ,ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……