ಧಾರವಾಡ –
ಧಾರವಾಡ ಲೋಕಸಭೆ ಸಾರ್ವತ್ರಿಕ ಚುನಾವಣೆ
ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿ ಗಳು ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ ಉಳಿದ 17 ಅಭ್ಯರ್ಥಿಗಳು ಚುನಾವಣಾಧಿಕಾರಿ ದಿವ್ಯ ಪ್ರಭು ಹೌದು
11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕ ಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ಅಭ್ಯರ್ಥಿ ಗಳಲ್ಲಿ ಎಂಟು ಅಭ್ಯರ್ಥಿಗಳು ಇಂದು ನಾಮಪತ್ರ ಹಿಂಪಡೆಯಲು ನೀಡಿದ್ದ ಸಮಯದಲ್ಲಿ ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದಾರೆ
ಅಂತಿಮವಾಗಿ ಧಾರವಾಡ ಲೋಕಸಭಾ ಚುನಾ ವಣಾ ಸ್ಪರ್ಧೆಯಲ್ಲಿ 17 ಜನ ಅಭ್ಯರ್ಥಿಗಳು ಉಳಿದಿದ್ದಾರೆ ಎಂದು ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಕ್ರಮ ಬದ್ದವಾಗಿ ನಾಮನಿರ್ದೇಶನಗೊಂಡಿದ್ದ ಅಭ್ಯರ್ಥಿ ಗಳು ತಮ್ಮ ನಾಮಪತ್ರ ಹಿಂಪಡೆಯಲು ಇಚ್ಚಿಸಿ ದ್ದಲ್ಲಿ ಅವರಿಗೆ ಗಂಟೆಯಿಂದ ಮಧ್ಯಾಹ್ನ 3 ಗಂಟೆ ಯವರೆಗೆ ನಾಮಪತ್ರ ಹಿಂಪಡೆಯಲು ಅವಕಾಶ ನೀಡಲಾಗಿತ್ತು. ಅದರಂತೆ ಒಟ್ಟು ಎಂಟು ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ವಾಪಸ್ಸು ಪಡೆದಿದ್ದಾರೆ.
ಕ್ರಮಬದ್ದವಾಗಿ ನಾಮನಿರ್ದೇಶನಗೊಂಡಿದ್ದ ವೀಣಾ ಜನಗಿ, ಪ್ರವೀಣಕುಮಾರ ಮಾದರ, ರವಿ ಪಟ್ಟಣಶೆಟ್ಟಿ, ರಿಯಾಜ ಶೇಖ, ದಿಂಗಾಲೇಶ್ವರ ಮಹಾಸ್ವಾಮಿಗಳು, ಶಿವಾನಂದ ಮುತ್ತಣ್ಣವರ, ರಾಜಶೇಖರಯ್ಯ ಕಂತಿಮಠ ಮತ್ತು ವೆಂಕಟೇಶ ಆಚಾರ್ಯ ಮಣ್ಣೂರ ಅವರು ತಮ್ಮ ಉಮೇ ದುವಾರಿಕೆ ವಾಪಸ್ಸು ಪಡೆದಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಅಂತಿಮವಾಗಿ 11- ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳಾದ ಭಾರತೀಯ ಜನತಾ ಪಾರ್ಟಿಯಿಂದ ಪ್ರಲ್ಹಾದ ಜೋಶಿ, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದಿಂದ ವಿನೋದ ಅಸೂಟಿ ಮತ್ತು ನೋಂದಾಯಿತ ರಾಜಕೀಯ ಪಕ್ಷಗಳ ಅಭ್ಯರ್ಥಿ ಗಳಾಗಿ ನಾಕಿ ಭಾರತೀಯ ಏಕತಾ ಪಾರ್ಟಿಯಿಂದ
ಜಾವೀದ ಅಹಮದ್ ಬೆಳಗಾಂವಕರ್, ಪ್ರಹಾರ ಜನಶಕ್ತಿ ಪಾರ್ಟಿಯಿಂದ ಟಾಕಪ್ಪ ಯಲ್ಲಪ್ಪ ಕಲಾಲ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ನಾಗರಾಜ ಕರೆಣ್ಣವರ, ಉತ್ತಮ ಪ್ರಜಾಕೀಯ ಪಾರ್ಟಿಯಿಂದ ಬುಗಡಿ ಬಸವಲಿಂಗಪ್ಪ ಈರಪ್ಪ, ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷದಿಂದ ಮಹಮ್ಮದ ಇಸ್ಮಾಯಿಲ್ ಮುಕ್ತಿ,
ಪ್ರೌಟೀಸ್ಟ್ ಬ್ಲಾಕ್ ಇಂಡಿಯಾ ಪಕ್ಷದಿಂದ ವಿನೋದ ದಶರಥ ಘೋಡಕೆ, ಇಂಡಿಯನ್ ಲೇಬರ್ ಪಾರ್ಟಿ (ಅಂಬೇಡ್ಕರ, ಪುಲೆ)ಯಿಂದ ವೆಂಕಟೇಶ ಪ್ರಸಾದ ಎಚ್., ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಸ್ಟ್) ಪಕ್ಷದಿಂದ ಶರಣಬಸವ ಗೋನ ವಾರ ಮತ್ತು ಟಿಪ್ಪು ಸುಲ್ತಾನ ಪಾರ್ಟಿಯಿಂದ ಬಂಕಾಪುರ ಶೌಖತ್ ಅಲಿ ಅವರು ಸ್ಪರ್ಧಿಸಿದ್ದಾರೆ.
ಪಕ್ಷೇತರ ಅಭ್ಯರ್ಥಿಗಳಾಗಿ ಡಾ. ಗುರಪ್ಪ ಹೆಚ್.ಇಮ್ರಾಪೂರ, ಪ್ರವೀಣ ಹ.ಹತ್ತೆನವರ, ಬಾಳನಗೌಡ್ರ ಮಲ್ಲಿಕಾರ್ಜುನಗೌಡ, ರಾಜು ಅನಂತಸಾ ನಾಯಕವಾಡಿ, ಶಕೀಲ ಅಹ್ಮದ ಡಿ ಮುಲ್ಲಾ ಮತ್ತು ಎಸ್.ಎಸ್.ಪಾಟೀಲ್ ಸ್ಪರ್ಧಿ ಸಿದ್ದಾರೆ.
ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ ಉಳಿದಿರುವ ಅಭ್ಯರ್ಥಿಗಳಿಗೆ ಭಾರತ ಚುನಾವಣಾ ಆಯೋಗದ ನಿಯಮಗಳ ಅನುಸಾರ ಚಿಹ್ನೆಗಳ ಹಂಚಿಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ದಿವ್ಯ ಪ್ರಭು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ……