ಬೆಂಗಳೂರು –
ಬಿಸಿಯೂಟಕ್ಕೆ ಸಿಗದ ಸ್ಪಂದನೆ ಶಾಲೆಗಳತ್ತ ಬಾರದ ವಿದ್ಯಾರ್ಥಿಗಳು ಶಿಕ್ಷಕರಿಗೆ ಪೇಚಾಟ ಕೆಡುತ್ತಿದೆ ಆಹಾರ ಶಾಲೆಗಳತ್ತ ಮುಖ ಮಾಡದ ವಿದ್ಯಾರ್ಥಿಗಳು ಹೌದು
ಏಪ್ರಿಲ್ ಮತ್ತು ಮೇ 2024ರ ಬೇಸಿಗೆ ರಜಾ ಅವಧಿಯಲ್ಲಿ 41 ದಿನಗಳವರೆಗೆ 1 ರಿಂದ 10ನೇ ತರಗತಿ ಸರಕಾರಿ ಹಾಗೂ ಅನುದಾನಿತ ಶಾಲಾ ವಿದ್ಯಾರ್ಥಿಗಳಿಗೆ ಬಿಸಿಊಟವನ್ನು ವಿತರಿಸುವಂತೆ ಈಗಾಗಲೇ ರಾಜ್ಯ ಸರ್ಕಾರ ಆದೇಶವನ್ನು ಮಾಡಿದೆ
ಈ ಒಂದು ಆದೇಶದಂತೆ ರಾಜ್ಯದಲ್ಲಿ ಕಾರ್ಯ ಕ್ರಮಗಳನ್ನು ಮಾಡಿ ಮಕ್ಕಳಿಗೆ ಊಟ ಬಡಿ ಸುವುದರೊಂದಿಗೆ ಉದ್ಘಾಟಿಸಿ ಆರಂಭ ವನ್ನು ಮಾಡಲಾಗಿದೆ
ರಾಜ್ಯದ ಜಿಲ್ಲೆಯ ಎಲ್ಲಾ ಸರಕಾರಿ ಮತ್ತು ಅನು ದಾನಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಮಧ್ಯಾಹ್ನ ಉಪಹಾರ ಯೋಜನೆ ಕಾರ್ಯಕ್ರಮ ಬೇಸಿಗೆ ರಜಾ ಅವಧಿಯಲ್ಲಿ 41 ದಿನಗಳವರೆಗೆ ಏಪ್ರಿಲ್ ಮತ್ತು ಮೇ ರಜಾ ಅವಧಿಯಲ್ಲಿ ನಡೆ ಯುತ್ತಿದ್ದು ಎಲ್ಲಾ ಮಕ್ಕಳು ಕಾರ್ಯಕ್ರಮದ ಸದು ಪಯೋಗ ಪಡೆದು ರುಚಿಯಾದ ಊಟವನ್ನು ಸೇವಿಸಬೇಕೆಂದು ಮಕ್ಕಳಿಗೆ ಹೇಳಲಾಗಿದೆ
ಆದರೂ ಕೂಡಾ ಬಿಸಿಯೂಟದತ್ತ ಯಾರು ಮುಖ ಮಾಡುತ್ತಿಲ್ಕ ನೋಡುತ್ತಿಲ್ಲ ಅದ್ಯಾಕೋ ಏನೋ ಗೊತ್ತಿಲ್ಲ ಬಿಸಿ ಬಿಸಿಯಾಗಿ ಶಾಲೆ ಗಳಲ್ಲಿ ಊಟವನ್ನು ನೀಡುತ್ತಿದ್ದರು ಕೂಡಾ ಈ ಒಂದು ಯೋಜನೆ ಗೆ ನೀರಸವಾದ ಪ್ರಕ್ರಿಯೆ ಕಂಡು ಬರುತ್ತಿದೆ ಪ್ರತಿದಿನ ಶಾಲೆಗಳಲ್ಲಿ ಊಟದ ವ್ಯವಸ್ಥೆ ಮಾಡಿದ್ದರು ಕೂಡಾ ಮಕ್ಕಳು ಅಂದುಕೊಂಡಂತೆ ಬರುತ್ತಿಲ್ಲ
ಹೀಗಾಗಿ ಶಿಕ್ಷಕರು ಪರದಾಡುತ್ತಿದ್ದು ಸಾಕಷ್ಟು ಪ್ರಮಾಣದಲ್ಲಿ ಪ್ರತಿದಿನ ಊಟ ಉಳಿಯುತ್ತಿದ್ದು ಶಿಕ್ಷಕರು ಪೇಚಾಡುತ್ತಿದ್ದಾರೆ
ಸುದ್ದಿ ಸಂತೆ ನ್ಯೂಸ್ ಬೆಂಗಳೂರು……