ಬ್ಯಾಟರಿ ಕಳ್ಳನ ಬಂಧನ – ಕಸ ಸಂಗ್ರಹಿಸುವ ವಾಹನದ ಚಾಲಕನೇ ಕಳ್ಳ – ಎಂಟು ಘಂಟೆಗಳಲ್ಲಿ ಪ್ರಕರಣ ಪತ್ತೆ ಹಚ್ಚಿದರು ಕಸಬಾ ಠಾಣೆ ಪೊಲೀಸರು

Suddi Sante Desk

ಹುಬ್ಬಳ್ಳಿ –

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಕಸ ಸಂಗ್ರಹದ ವಾಹನಗಳ ಬ್ಯಾಟರಿ ಕಳ್ಳತನ ಪ್ರಕರಣವನ್ನು ಕಸಬಾ ಠಾಣೆ ಪೊಲೀಸರು ಬೇಧಿಸಿದ್ದಾರೆ.

ಇಂದು ಪಾಲಿಕೆಯ ವಲಯ ಕಚೇರಿ 11 ರಲ್ಲಿ ಬರುವ 09 ಆಟೋ ಟಿಪ್ಪರ್ ಗಾಡಿಗಳ ಬ್ಯಾಟರಿಗಳನ್ನು ಕಳ್ಳತನ ಮಾಡಿರುವ ಪ್ರಕರಣವೊಂದು ಬೆಳಕಿಗೆ ಬಂದಿತ್ತು.

ಈ ಕುರಿತು ವಲಯ ಸಹಾಯಕ ಆಯುಕ್ತರಾದ ಆನಂದ ಕಾಂಬಳೆ ಅವರು ಕಸಬಾ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದರು. ದೂರು ದಾಖಲು ಮಾಡಿಕೊಂಡು ಆರೇಳು ಘಂಟೆಗಳಲ್ಲಿ ಪೊಲೀಸರು ಕಾರ್ಯಾಚರಣೆ ಮಾಡಿ ಬ್ಯಾಟರಿ ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧನ ಮಾಡಿದ್ದಾರೆ.

ಕಳ್ಳತನ ಮಾಡಿದ ಆರೋಪಿಯನ್ನು ಬಂಧನ ಮಾಡಿದ ಪೊಲೀಸರಿಗೆ ಶಾಕ್ ಆಗಿದೆ. ಕಸದ ವಾಹನವನ್ನು ಓಡಿಸುವ ಚಾಲಕನೇ ಕಳ್ಳತನ ಮಾಡಿದ್ದಾನೆ.ಪ್ರಭು ಹನಮಂತ ಕ್ಯಾರಕಟ್ಟಿ ಬಂಧಿತನಾಗಿದ್ದಾನೆ.ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಮನೆ ಮನೆಯ ಕಸ ಸಂಗ್ರಹಣೆ ಮಾಡುವ ವಾಹನಗಳ‌ ಚಾಲನೆ ಮಾಡುತ್ತಿದ್ದ ಹನುಮಂತ.

ಕೆಲ ಸಮಸ್ಯೆಯಿಂದ 9 ಆಟೋ ಟಿಪ್ಪರಗಳ ಬ್ಯಾಟರಿಗಳನ್ನು ಕಳ್ಳತನ ಮಾಡಿದ್ದನು. ವಲಯ ಕಚೇರಿ 11ರ ಕಂಪ್ಯಾಕ್ಟರ ಸ್ಟೇಷನ್ ನಲ್ಲಿ ನಿಲ್ಲಿಸಿದ್ದ 09 ಗಾಡಿಗಳ ಬ್ಯಾಟರಿಗಳನ್ನು ಕಳ್ಳತನ ಮಾಡಿದ್ದನು. ಬ್ಯಾಟರಿಗಳನ್ನು ಕಳ್ಳತನ ಮಾಡಿದ ಆರೋಪಿಗೆ ಕಸಬಾ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ರತನಕುಮಾರ್ ಜಿರಗ್ಯಾಳ ನೇತೃತ್ವದಲ್ಲಿ ತಂಡ ಆರೇಳು ಘಂಟೆಗಳಲ್ಲಿ ಬಂಧನ ಮಾಡಿ ಕಳ್ಳತನ ಮಾಡಿದ್ದ ಒಂಬತ್ತು ಬ್ಯಾಟರಿ ಹಾಗೂ ಒಂದು ವಾಹನವನ್ನು ವಶಪಡಿಸಿಕೊಂಡಿದ್ದಾರೆ‌.

ಇನ್ನೂ ಈ ಒಂದು ಕಾರ್ಯಾಚರಣೆಯಲ್ಲಿ ಕಸಬಾ ಪೊಲೀಸ್ ಠಾಣೆ ಸಿಬ್ಬಂದಿ ಗಳಾದ Asi R V ಕಮತರ, ಸಿಬ್ಬಂದಿ ಗಳಾದ ಆರ್ ಡಿ ಪಾಟೀಲ್, ಬಸವರಾಜ ಕುರಿ,ಐ ಕೆ ಧಾರವಾಡ, ಮಂಜು ಹೊಸಮನಿ,ರಾಜು ರಾಠೋಡ,ಫಕೀರೇಶ ತಳವಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.