ಹುಬ್ಬಳ್ಳಿ –
ವಾರ್ಡ್ ಗಳಲ್ಲಿ ಠಿಕಾಣೆ ಹೂಡಿ ಭರ್ಜರಿ ಮತದಾನ ಮಾಡಿಸಿದ ಅಣ್ಣಪ್ಪ ಗೋಕಾಕ್ ಶಶಿಕಾಂತ್ ಬೀಜವಾಡ್,ವಿಜಯ ಗುಂಟರಾಳ್,ನೇತ್ರತ್ವದಲ್ಲಿ ಅಣ್ಣಪ್ಪ ಗೋಕಾಕ್ ಆಂಡ್ ಟೀಮ್ ಕೆಲಸ ಪ್ರಹ್ಲಾದ್ ಜೋಶಿಯವರಿಗೆ ನೀಡಲಿದೆ ಭರ್ಜರಿ ಸ್ಟ್ರೋಕ್
ಹೌದು ನನ್ನ ದಾರಿ ನೋಡಬೇಡಿ ನಿಮ್ಮ ಕೆಲಸ ವನ್ನು ನೀವು ಮಾಡಿ ಎಂಬ ಸಂದೇಶವನ್ನು ಬಿಜೆಪಿಯ ಯುವ ಮುಖಂಡ ಅಣ್ಣಪ್ಪ ಗೋಕಾಕ್ ಅವರಿಗೆ ಪ್ರಹ್ಲಾದ್ ಜೋಶಿ ಯವರು ಹೇಳುತ್ತಿದ್ದಂತೆ ಇತ್ತ ಮಿಂಚಿನ ಸಂಚಾರದೊಂದಿಗೆ ಮತದಾನವನ್ನು ಮಾಡಿಸಿದರು
ಅಣ್ಣಪ್ಪ ಗೋಕಾಕ ಮತ್ತು ಟೀಮ್.ಎರಡನೇಯ ಹಂತ ದಲ್ಲಿನ ಧಾರವಾಡ ಜಿಲ್ಲೆಯಲ್ಲೂ ಕೂಡಾ ಮತದಾನ ಚನ್ನಾಗಿ ನಡೆಯಿತು.ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲೂ ಕೂಡಾ ಕೆಲ ಸಣ್ಣಪುಟ್ಟ ಲೋಪದೋಷಗಳನ್ನು ಬಿಟ್ಟರೆ ಭರ್ಜರಿಯಾಗಿ ಮತದಾನ ನಡೆದಿದೆ.ಇನ್ನೂ ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನ ಸಭಾ ಕ್ಷೇತ್ರದಲ್ಲೂ ಕೂಡಾ ಮತದಾರರು ತಮ್ಮ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.ಈ ಒಂದು ಕ್ಷೇತ್ರದ ಬೂತ್ 69 ಮತ್ತು 87 ರಲ್ಲಿ ಬಿಜೆಪಿ ಯುವಕ ಮುಖಂಡ ಅಣ್ಣಪ್ಪ ಗೋಕಾಕ ಬೆಳಿಗ್ಗೆಯಿಂದಲೇ ಠಿಕಾಣೆ ಹೂಡಿ ಮತದಾನವನ್ನು ಮಾಡಿಸಿದರು.
ಬಿಜೆಪಿ ಪಕ್ಷದ ಅಭ್ಯರ್ಥಿ ಪ್ರಹ್ಲಾದ್ ಜೋಶಿಯ ವರ ಕಟ್ಟಾ ಅಭಿಮಾನಿಯಾಗಿರುವ ಇವರು ಶಶಿಕಾಂತ ಬಿಜವಾಡ ಮತ್ತು ವಿಜಯ್ ಗುಂಟರಾಳ್ ಸೇರಿದಂತೆ ತಮ್ಮ ಬೆಂಬಲಿಗ ರೊಂದಿಗೆ ನಿಂತುಕೊಂಡು ಮತದಾನವನ್ನು ಮಾಡಿಸಿದರು.ಲೋಕಸಭಾ ಕ್ಷೇತ್ರದಲ್ಲಿ ಪ್ರಹ್ಲಾದ್ ಜೋಶಿ ಪರವಾಗಿ ಅಲೆ ಜೋರಾಗಿದ್ದು ಇದರ ನಡುವೆಯೂ ಕೂಡಾ ಪಕ್ಷ ಮತ್ತು ವರಿಷ್ಠರು ನೀಡಿದ ಸೂಚನೆ ಹಿನ್ನಲೆಯಲ್ಲಿ ನಿಂತುಕೊಂಡು ಮತದಾನ ಪ್ರಕ್ರಿಯೆಯನ್ನು ಮಾಡಿದ್ದು ಕಂಡು ಬಂದಿತು.
ಈ ಎರಡು ವಾರ್ಡ್ ಗಳಲ್ಲಿನ ವೀರಾಪೂರ ಓಣಿ,ಕೆಬಿ ನಗರ,ಗೋಲ್ಲರ ಕಾಲೋನಿ ಸೇರಿದಂತೆ ಹಲವೆಡೆ ಸಂಚಾರವನ್ನು ಮಾಡಿ ಮತದಾನವನ್ನು ಮಾಡಿಸಿದ್ದು ಕಂಡು ಬಂದಿತು.ಇನ್ನೂ ಶಶಿಕಾಂತ ಬೀಜವಾಡ,ವಿಜಯ್ ಗುಂಟರಾಳ್,ಅಣ್ಣಪ್ಪ ಗೋಕಾಕ್ ಇವರೊಂದಿಗೆ ಬಸಪ್ಪ ಮಾದರ,ಗುರು ರೋಣದ,ಶಿವು ತಾಳಿಕೋಟಿ,ಮಾರುತಿ ಚಾಕಲಬ್ಬಿ ಪ್ರವೀಣ್ ಕುಬಸದ,ಶಿವಾನಂದ ಅಂಬಿಗೇರ,ಹನಮಂತಗೌಡ ಪಾಟೀಲ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……