ಹುಬ್ಬಳ್ಳಿ –
ಹಾಸನ ಸಂಸದ ಪ್ರಜ್ವಲ್ ರೇವಣ್ಣಾ ಅಶ್ಲೀಲ ವಿಡಿಯೊ ವಿಚಾರದಲ್ಲಿ ಡಿಕೆ ಶಿವಕುಮಾರ್ ವಿರುದ್ಧ ಆಕ್ರೋಶ ಕಂಡು ಬರುತ್ತಿದೆ ಹೌದು ಹಾಸನದ ಸಂಸದ ರೇವಣ್ಣ ಪ್ರಜ್ವಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೆನ್ ಡ್ರೈವ್ ಹಾಗೂ ಅಶ್ಲೀಲ ವಿಡಿಯೋ ಮೂಲಕ ಹೆಣ್ಣು ಮಕ್ಕಳ ಮಾನ ಹರಾಜು ಹಾಕುವವರ ವಿರುದ್ಧ ಇಂತಹ ನೀಚ ಕೃತ್ಯಕ್ಕೆ ಮುಂದಾಗಿರುವ ಡಿಸಿಎಂ ಡಿಕೆಶಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲದೇ ಪ್ರಕರಣವನ್ನು ಸಿಬಿಐ ತನಿಖೆ ವಹಿಸಬೇಕು ಆಗ್ರಹಿಸಿ ನಗರದ ರಾಣಿ ಚೆನ್ನಮ್ಮ ವೃತ್ತದಲ್ಲಿಂದು ಧಾರವಾಡ ಜೆಡಿಎಸ್ ಘಟಕದಿಂದ ಪ್ರತಿಭಟನೆ ನಡೆಸಲಾಯಿತು.
ಈ ಪ್ರಕರಣದಲ್ಲಿ ಸಂಪೂರ್ಣ ವಿಚಾರಣೆ ಬಳಿಕ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು.ಅಶ್ಲೀಲ ವಿಡಿಯೋ ಮೂಲಕ ಇಡೀ ರಾಜ್ಯಾದ್ಯಂತ ಹರಿಬಿಟ್ಟಿರುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಇಂತಹ ನೀಚ ಕೃತ್ಯ ಎಸಗಿದ್ದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು..
ಅಶ್ಲೀಲ ವಿಡಿಯೋ ವೈರಲ್ ವಿಚಾರವಾಗಿ ಡಿಕೆಶಿ ವಿರುದ್ಧ ಹೆಸರು ಕೇಳಿ ಬಂದಿರುವ ಆರೋಪ ವ್ಯಕ್ತಿಪಡಿಸಿ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕೆಂದಮಾಡಬೇಕು ಹಾಗೂ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಜೆಡಿಎಸ್ ಕಾರ್ಯಕರ್ತರು ಆಗ್ರಹಿಸಿದರು
ರಾಜ್ಯ ಸರ್ಕಾರದ ವಿರುದ್ಧ ಹಾಗೂ ಅಶ್ಲೀಲ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಪೆನ್ ಡ್ರೈವ್ ಗಳಲ್ಲಿ ನಕಲಿ ಮಾಡಿ ಸುಳ್ಳು ಆರೋಪಗಳನ್ನು ಹೊರಿಸಿ ನಮ್ಮ ಪಕ್ಷದ ನಾಯಕರುಗಳನ್ನು ಬೆದರಿಸುವ ತಂತ್ರದ ವಿರುದ್ಧ ಪ್ರತಿಭಟನೆ ಮಾಡಿ ಈ ಒಂದು ಪ್ರಕರಣವನ್ನು ಸಿಬಿಐ ತನಿಖೆಗೆ ನೀಡುವಂತೆ ಹಾಗೂ ಪೇನ್ ಡ್ರೈವ್ ಗಳನ್ನು ಬಿಡುಗಡೆ ಮಾಡಿದವರನ್ನು ಬಂಧಿಸಬೇಕು ಹಾಗೂ ಸಚಿವ ಡಿ ಕೆ ಶಿವಕುಮಾರ ಅವರ ಹೆಸರು ಈ ಪ್ರಕರಣದಲ್ಲಿ ಬಂದಿರುವ ಹಿನ್ನೆಲೆಯಲ್ಲಿ ರಾಜಿನಾಮೆ ಪಡೆಯಬೇಕು ಎಂದು ಸರ್ಕಾರಕ್ಕೆ ಗುರುರಾಜ ಹುಣಸಿಮರದ ಒತ್ತಾಯಿಸಿದ್ದಾರೆ.
ಈ ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾ ಅದ್ಯಕ್ಷರಾದ ಬಿ. ಬಿ. ಗಂಗಾಧರಮಠ ಮುಖಂಡರಾದ ನವೀನಕುಮಾರ, ಬಾಷಾಸಾಬ್ ಮುದಗಲ್, ಮಾರುತಿ ಹಿಂಡಸಗೇರಿ,ವಿನಾಯಕ ಗಾಡಿವಡ್ಡರ, ಪೂರ್ಣಿಮಾ ಸವದತ್ತಿ,ಪೂಜಾ ಮೆಣಸಿನಕಾಯಿ, ಗೀತಾ ಸುನಿತಾ, ಮಹಾದೇವಿ ಪಾಟೀಲ, ಶಂಕರ ಗೌಡ ದೊಡ್ಡಮನಿ, ಬೀಮರಾಯ ಗುಡೆನಕಟ್ಟಿ, ಬಸವರಾಜ ದನಿಗೊಂಡ,
ಪ್ರಭು ಚೌಟಾ, ಸಿದ್ದು ಮರಗಲ್ , ಅಹ್ಮದ್ ಅರಸೀಕೆರೆ,ಪುನಿತ್ ಅಡಗಲ್ಲ, ಶಾಬಾಜ ಮುದ್ಗಲ್,ಅಲಿ ಸಂದಿಮನಿ,ಕರೇಪ್ಪಾ ಪೂಜಾರ, ಮಂಜುನಾಥ ಹಗೇದಾರ, ಚಿದಂಬರ ನಾಡಗೌಡ, ಸಿದ್ದು ಮಹಾಂತಒಡೆಯರ,ಶಂಕರ ಪವಾರ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……