ಧಾರವಾಡ –
ಧಾರವಾಡದ ಐಐಐಟಿ ನಿರ್ದೇಶಕರಾಗಿ ಪ್ರೋ ಮಹಾದೇವ ಪ್ರಸನ್ನ ಅವರನ್ನು ನೇಮಕ ಮಾಡಿ ಆದೇಶವನ್ನು ಮಾಡಲಾಗಿದೆ ಹೌದು 2023 ರಲ್ಲಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವ ರಿಂದ ಉತ್ತಮ ಶಿಕ್ಷಕರ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದ್ದು ಸಾಕಷ್ಟು ಪ್ರಮಾಣದಲ್ಲಿ ಸಾಧನೆ ಯನ್ನು ಮಾಡಿದ್ದಾರೆ.
ಈ ಹಿಂದೆ ಅವರು ಐಐಟಿ ಧಾರವಾಡದಲ್ಲಿ ಎಲೆಕ್ಟ್ರಿಕಲ್,ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿ ಕೇಷನ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಮತ್ತು ಡೀನ್ ಹಾಗೂ ಗುವಾಹಟಿಯ ಐಐಟಿಯ ಡೀನ್ (ಸಂಶೋಧನೆ ಮತ್ತು ಅಭಿವೃದ್ಧಿ) ಆಗಿದ್ದರು.
2004 ರಲ್ಲಿ ಐಐಟಿ ಮದ್ರಾಸ್‍ನಿಂದ ಪಿಎಚ್‍ಡಿ ಪಡೆದಿರುವ ಇವರಿಗೆ ಸದ್ಯ ಧಾರವಾಡ ಐಐಐಟಿ ಜವಾಬ್ದಾರಿ ಯನ್ನು ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ…..