ಬೆಂಗಳೂರು –
ಸವಾಲಾಗಿದೆ ಶಾಲಾ ಸ್ವಚ್ಚತೆ ದೊಡ್ಡ ಕಾರ್ಯ ಎರಡು ತಿಂಗಳಿನಿಂದ ಮುಚ್ಚಿರುವ ಸರ್ಕಾರಿ ಶಾಲೆಗಳನ್ನು ಸ್ವಚ್ಚಗೊಳಿಸೊದು ಶಿಕ್ಷಕರಿಗೆ ದೊಡ್ಡ ಸವಾಲು
ಮೇ 29 ರಿಂದ ರಾಜ್ಯದಲ್ಲಿ ಶಾಲೆಗಳು ಬಾಗಿಲು ತೆರೆಯುತ್ತಿವೆ.ಈಗಾಗಲೇ ಹೊಸ ಶೈಕ್ಷಣಿಕ ವರ್ಷವನ್ನು ಬರಮಾಡಿಕೊಳ್ಳಲು ಶಿಕ್ಷಣ ಇಲಾಖೆ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದ್ದು ಇತ್ತ ಶಿಕ್ಷಕರು ಕೂಡಾ ಸಿದ್ದರಾಗಿದ್ದು ಈ ನಡುವೆ ಶಿಕ್ಷಕರಿಗೆ ಶಾಲೆಯ ಸ್ವಚ್ಛತೆ ಕಾರ್ಯ ದೊಡ್ಡ ಸವಾಲಾಗಿದೆ.ಹೌದು ಎರಡು ತಿಂಗಳಿನಿಂದ ಮುಚ್ಚಿರುವ ಸರ್ಕಾರಿ ಶಾಲೆಗಳ ಆವರಣಗಳನ್ನು ಮತ್ತು ಕೊಠಡಿಗಳನ್ನು ಸ್ವಚ್ಛಗೊಳಿಸುವ ಕಾರ್ಯ ಸಧ್ಯ ಶಿಕ್ಷಕರಿಗೆ ದೊಡ್ಡ ಸವಾಲಾಗಿದೆ.
ಈಗ ಶಿಕ್ಷಕರಿಗೆ ಇದು ಎದುರಾಗಿದೆ. ವಿದ್ಯಾರ್ಥಿ ಗಳನ್ನು ಸ್ವಚ್ಛತೆ ಕಾರ್ಯಕ್ಕೆ ಬಳಸಿದರೆ ಸಮಸ್ಯೆ ಎದುರಾಗಲಿದೆ ಎಂಬೊದು ಶಿಕ್ಷಕ ಬಂಧುಗಳೇ ನೆನಪಿರಲಿ.ಈ ಕಾರ್ಯಕ್ಕೆ ಪಾಲಕರೂ ಕೈಜೋ ಡಿಸುತ್ತಿಲ್ಲ. ಕಾರ್ಮಿಕರಿಂದ ಸ್ವಚ್ಛಗೊಳಿಸಲು ಹಣ ಇಲ್ಲ ಅಥವಾ ದುಬಾರಿ ಹಣ ತೆರಬೇಕಾದ ಕ್ಲಿಷ್ಟ ವಾತಾವರಣ ನಿರ್ಮಾಣವಾಗಿದೆ.
ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳ ಮನ ವೊಲಿಸಿ ಶಾಲೆಗೆ ಕರೆತರುವ ಪ್ರಯತ್ನವೂ ನಡೆಯುತ್ತಿರುವುದರಿಂದ ಭಿನ್ನ ಸವಾಲು ನಿರ್ವಹಿಸುವ ಗೊಂದಲ ಏರ್ಪಟ್ಟಿದೆ ಎಂದು ಶಿಕ್ಷಕರೊಬ್ಬರು ಅಳಲು ತೋಡಿಕೊಂಡರು.ಇನ್ನೂ ಇಂತಹ ಸಣ್ಣ ಪುಟ್ಟ ಕಾರ್ಯಕ್ಕೆ ಶಿಕ್ಷಣ ಇಲಾಖೆ ಗಮನ ಕೊಡಬೇಕು.ಶಿಕ್ಷಕರನ್ನು ಡೆಪ್ಯೂಟೇಷನ್ ಮೇಲೆ ಕಳುಹಿಸಿದರೆ ಸಮಸ್ಯೆ ಇತ್ಯರ್ಥವಾಗದು.
ಬೋಧನೆಗೆ ತೊಂದರೆಯಾಗಲಿದೆ ಎಂಬೊದನ್ನು ಕೂಡಾ ಅರಿತುಕೊಳ್ಳಬೇಕಿದೆ. 29ರಂದು ಪ್ರಾರಂ ಭೋತ್ಸವ ಎನೋ ಅದ್ದೂರಿಯಾಗಿ ನಡೆಯಲಿದೆ ಆದರೆ ಸಧ್ಯ ಶಿಕ್ಷಕರಿಗೆ ಶಾಲಾ ಸ್ವಚ್ಚತೆ ದೊಡ್ಡ ಸವಾಲಾಗಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..
 
			

 
		 
			



















