This is the title of the web page
This is the title of the web page

Live Stream

[ytplayer id=’1198′]

December 2024
T F S S M T W
 1234
567891011
12131415161718
19202122232425
262728293031  

| Latest Version 8.0.1 |

ಧಾರವಾಡ

ಶಾಲಾ ಮಕ್ಕಳಿಗೆ ಪಾಠ ಮಾಡಿದ DC ದಿವ್ಯ ಪ್ರಭು – ಶಾಲಾ ಪ್ರಾರಂಭೋತ್ಸವಕ್ಕೆ ವಿಶೇಷವಾಗಿ ಚಾಲನೆ…..

ಶಾಲಾ ಮಕ್ಕಳಿಗೆ ಪಾಠ ಮಾಡಿದ DC ದಿವ್ಯ ಪ್ರಭು – ಶಾಲಾ ಪ್ರಾರಂಭೋತ್ಸವಕ್ಕೆ ವಿಶೇಷವಾಗಿ ಚಾಲನೆ…..
WhatsApp Group Join Now
Telegram Group Join Now

ಧಾರವಾಡ

ಶಾಲಾ ಮಕ್ಕಳಿಗೆ ಪಾಠ ಮಾಡುವ ಮೂಲಕ ಶಾಲಾ ಪ್ರಾರಂಭೋತ್ಸವಕ್ಕೆ ವಿಶಿಷ್ಟವಾಗಿ ಚಾಲನೆ ನೀಡಿದ ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಹೌದು ಪ್ರಸಕ್ತ ಸಾಲಿನ ಶಾಲಾ ಪ್ರಾರಂಭೋತ್ಸವ. ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು  ಮಹಿಳಾ ಶಿಕ್ಷಣ ಮಹಾವಿದ್ಯಾಲಯದ ಸರಕಾರಿ ಉರ್ದು ಮತ್ತು ಕನ್ನಡ ಪ್ರಾಥಮಿಕ, ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ 8 ನೇ ತರಗತಿ ಇಂಗ್ಲೀಷ ಭಾಷಾ ವಿಷಯ ಪಾಠ ಬೋಧಿಸುವ ಮೂಲಕ ಶಾಲಾ ಪ್ರಾರಂಭೋತ್ಸವಕ್ಕೆ ವಿಶಿಷ್ಟವಾಗಿ ಚಾಲನೆ ನೀಡಿದರು.

ಆರಂಭದಲ್ಲಿ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ ಮೆದಳು, ಮನಸ್ಸು ಮತ್ತು ದೇಹ ಸಶಕ್ತ, ಸದೃಡವಾಗಿದ್ದರೆ ಉತ್ತಮ ಶಿಕ್ಷಣದ ಮೂಲಕ ಕಂಡ ಕನಸು ಸಾಧಿಸಬಹುದು. ಕಲಿಕೆಯ ಆಸಕ್ತಿ ವಿದ್ಯಾರ್ಥಿಗಳಲ್ಲಿ ಮತ್ತು ಕಲಿಸುವ ಅಭಿರುಚಿ ಶಿಕ್ಷಕರಲ್ಲಿ ಇದ್ದರೆ ಮಾತ್ರ ಅದು ಒಂದು ಕೌಶಲ್ಯಯುತವಾಗಿ ಕೂಡಿ ಬರುತ್ತದೆ.

ವಿದ್ಯಾರ್ಥಿಗಳಿಗೆ ಶಿಕ್ಷಕರೇ ಆದರ್ಶ ಅವರ ಜೀವನ ನಿರೂಪಣೆ ಪಾಲಕರ ಜೊತೆಗೆ ಶಿಕ್ಷಕರಿಗೂ ಸೇರಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.ಧಾರವಾಡ ಜಿಲ್ಲೆಗೆ ಇರುವ ವಿದ್ಯಾಕಾಶಿ ಹೆಸರು ಉಳಿಸುವ ಅಗತ್ಯವಿದೆ.2023-24 ನೇ ಸಾಲಿನ SSLC ಫಲಿ ತಾಂಶ ಶೇ. 74 ಆಗಿದೆ. ರಾಜ್ಯದಲ್ಲಿ 24 ನೇ ಸ್ಥಾನದಿಂದ 22 ನೇ ಸ್ಥಾನಕ್ಕೆ ನಮ್ಮ ಜಿಲ್ಲೆ ಬಂದಿದೆ.

ಇದು ನಾವು ಹೆಮ್ಮೆ ಪಡುವ ವಿಷಯವಲ್ಲ. ಪ್ರಸಕ್ತ ಸಾಲಿನಲ್ಲಿ ಇಡಿ ಜಿಲ್ಲೆ ಶೇ. 100 ರಷ್ಟು ಫಲಿತಾಂಶ ಪಡೆಯಬೇಕು. ಇದಕ್ಕೆ ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡುತ್ತದೆ. ಹತ್ತನೇ ವರ್ಗ ಕಲಿಸುವ ಪ್ರತಿ ಶಿಕ್ಷಕ ಪ್ರತಿಜ್ಞೆ ಮಾಡಿ, ಫಲಿತಾಂಶಕ್ಕಾಗಿ ಪ್ರಮಾಣಿಕ ಪ್ರಯತ್ನ ಮಾಡಬೇಕು. 2024-25 ರಲ್ಲಿ ನಮ್ಮ ಜಿಲ್ಲೆ ರಾಜ್ಯಕ್ಕೆ ಎಸ್.ಎಸ್.ಎಲ್.ಸಿ ಫಲಿತಾಂಶ ದಲ್ಲಿ ಪ್ರಥಮ ಸ್ಥಾನ ಪಡೆಯುವ ನಿಟ್ಟಿನಲ್ಲಿ ಎಲ್ಲರೂ ಕರ್ತವ್ಯ ನಿರ್ವಹಿಸಬೇಕೆಂದು ಅವರು ತಿಳಿಸಿದರು.

ಶಾಲಾ ಕಟ್ಟಡಗಳ ದುರಸ್ತಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಲು ಸರಕಾರದ ವಿಶೇಷ ಅನುದಾನ ಮತ್ತು ಅತಿವೃಷ್ಠಿ ನಿಧಿಯಲ್ಲೂ ಆರ್ಥಿಕ ನೆರವು ನೀಡಲಾಗಿದೆ.ಈಗಾಗಲೇ ದುರಸ್ತಿ ಕಾರ್ಯ ಆರಂಭಿಸಲು ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾ ರಿಗಳು ಹೇಳಿದರು.

ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಸರಕಾರ ದಿಂದ ಪೂರೈಸಲಾಗಿರುವ ಉಚಿತ ಸಮವಸ್ತ್ರ ಬಟ್ಟೆ ಪುಸ್ತಕ ವಿತರಿಸಿ ಶುಭ ಹಾರೈಸಿದರು.8ನೇ ವರ್ಗದ ವಿದ್ಯಾರ್ಥಿಗಳಿಗೆ ಶಿಕ್ಷಕಿಯಾಗಿ ಪಾಠ ಮಾಡಿದ ಡಿಸಿ ಹೌದು ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದ ಘೋಷವಾಕ್ಯ

‘ಶೈಕ್ಷಣಿಕ ಬಲವರ್ಧನೆ ವರ್ಷ’ ಇದಕ್ಕೆ ಅನುಗು ಣವಾಗಿ ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಸರಕಾರಿ ಶಾಲೆಯ 7 ಮತ್ತು 8 ನೇ ವರ್ಗದ ಮಕ್ಕಳಿಗೆ ಇಂಗ್ಲೀಷ ವಿಷಯದ ಪಾಠ ಬೋಧನೆ ಮಾಡಿದರು.8ನೇ ವರ್ಗದ ಇಂಗ್ಲೀಷ ಪಠ್ಯದ ದ ಸ್ವಾನ ಆ್ಯಂಡ್ ದ ಪ್ರಿನ್ಸ್‍ಸ್ ಎಂಬ ಬುದ್ಧನ ಕುರಿತ ಜಾನಪದ ನಾಟಕ ಬೋಧಿಸಿ ದರು.

ವಿದ್ಯಾರ್ಥಿಗಳನ್ನು ವೇದಿಕೆಗೆ ಕರೆದು ಅವರನ್ನೇ ನಾಟಕದ ಪಾತ್ರದಾರಿಗಳನ್ನಾಗಿ ಮಾಡಿ ತಾವೂ ಸೂತ್ರದಾರರಾಗಿ ಶಿಕ್ಷಕ ವೃತ್ತಿಯಲ್ಲಿ ಇರುವವರಿಗೆ ಮಾದರಿ ಆಗುವಂತೆ ಪಠ್ಯ ಬೋಧನೆ ಮಾಡಿ ದರು.ಜಾನಪದ ನಾಟಕದಲ್ಲಿ ಬರುವ ಶುದ್ದೊ ಧನ, ಸಿದಾರ್ಥ ಮತ್ತು ದೇವದತ್ತ, ಮಂತ್ರಿಗಳ ಪಾತ್ರವನ್ನು ಒಬ್ಬೊಬ್ಬ ವಿದ್ಯಾರ್ಥಿನಿಗೆ ವಹಿಸಿ, ಓದಿಸಿ ಅದರ ಅರ್ಥವನ್ನು ಜಿಲ್ಲಾಧಿಕಾರಿಗಳು ವಿವರಿಸಿದರು.

ಪಾಠದಲ್ಲಿ ಬರುವ ವ್ಯಾಕರಣ, ಸಂಜ್ಞಾವಾಚಕ ಗಳನ್ನು ಸ್ವತಃ ತಾವೇ ಉದ್ಧರಿಸಿ ಅಭಿನಯಿಸಿ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು. ಜಿಲ್ಲಾಧಿಕಾರಿಗಳ ಈ ಕಾರ್ಯವು ಇತರರಿಗೆ ಮಾದರಿ ಆಗಿದ್ದು, ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಮತ್ತು ಪಾಲಕರಿಗೆ ಆದರ್ಶವಾಗಿದೆ.

ಒರ್ವ ಜಿಲ್ಲಾಧಿಕಾರಿಯಾಗಿ ದಿವ್ಯ ಪ್ರಭು ಅವರು ಹೈಸ್ಕೂಲ್ ಮಕ್ಕಳಿಗೆ ಪಾಠ ಮಾಡುವ ಮೂಲಕ, ಜಿಲ್ಲೆಯ ಶೈಕ್ಷಣಿಕ ಸಾಧನೆಗೆ ಶಿಕ್ಷಕರಲ್ಲಿ, ವಿದ್ಯಾರ್ಥಿ ಗಳಲ್ಲಿ ಪ್ರೇರಣೆ, ಪ್ರೋತ್ಸಾಹ ತುಂಬಿದರು.

ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಧಾರವಾಡ ಉಪನಿರ್ದೇಶಕ ಎಸ್.ಎಸ್.ಕೆಳದಿಮಠ, ಡೈಟ್ ಪ್ರಾಚಾರ್ಯ ಜಯಶ್ರೀ ಕಾರೆಕರ, ಡಿವೈಪಿಸಿ ಎಸ್.ಎಂ. ಹುಡೇದಮನಿ, ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಸಿಂದಗಿ, ಟಿ.ಸಿ.ಡಬ್ಲ್ಯೂ ಪ್ರಾಚಾರ್ಯ ಬಿ.ಎಂ. ಬಡಿಗೇರ, ಬಿ.ಆರ್.ಸಿ ಮಂಜುನಾಥ ಅಡವೆರ,

ವಿಷಯ ಪರಿವೀಕ್ಷರಾದ ಬಿ.ಬಿ. ದುಬ್ಬನಮರಡಿ, ನಫಿಜಾಬಾನು ದಾವಲಸಾಬನವರ, ಶಿವಲೀಲಾ ಕಳಸಣ್ಣವರ ಸೇರಿದಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧಿಕಾರಿಗಳು, ಶಿಕ್ಷಕರು ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ಎಸ್.ಎಂ. ಹುಡೆದಮನಿ ಸ್ವಾಗತಿಸಿದರು. ಡಿಡಿಪಿಐ ಎಸ್. ಎಸ್.ಕೆಳದಿಮಠ ಪ್ರಸ್ತಾವಿಕವಾಗಿ ಮಾತನಾಡಿ ದರು ಜಯಲಕ್ಷ್ಮಿ.ಎಚ್. ಕಾರ್ಯಕ್ರಮ ನಿರೂಪಿಸಿ ದರು. ಬಿಇಓ ಅಶೋಕ ಸಿಂದಗಿ ವಂದಿಸಿದರು.

ಸುದ್ದಿ ಸಂತೆ ನ್ಯೂಸ್ ಧಾರವಾಡ…..


Google News

 

 

WhatsApp Group Join Now
Telegram Group Join Now
Suddi Sante Desk