ಧಾರವಾಡ –
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾನವೀಯತೆ ಮೆರೆದಿದ್ದಾರೆ ಹೌದು ಧಾರವಾಡದ ಕೃಷಿ ಇಲಾಖೆಯ ಕಚೇರಿ ಮುಂದೆ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡವರನ್ನು ತಕ್ಷಣವೇ ತಮ್ಮ ಬೆಂಗಾವಲು ವಾಹನ ಮತ್ತು ಆಂಬ್ಯುಲೆ ನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸಿ ಮಾನವೀಯತೆಯನ್ನು ಮೆರೆದಿದ್ದಾರೆ.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಬೆಳಗಾವಿಗೆ ಹೊರಟಿದ್ದು ಇದೇ ವೇಳೆ ಮಾರ್ಗ ಮಧ್ಯೆ ಕಾರೊಂದರ ಅಪಘಾತ ಕಂಡಿದೆ.ತಕ್ಷಣ ಸಚಿವರು ತಮ್ಮ ವಾಹನ ನಿಲ್ಲಿಸಿ ಗಾಯಾಳುಗಳನ್ನು ತಾವೇ ಖುದ್ದಾಗಿ ಸ್ಥಳದಲ್ಲೇ ನಿಂತು ಪರಿಶೀಲನೆ ನಡೆಸಿ ಆಸ್ಪತ್ರೆಗೆ ಸೇರಿಸಲು ಸ್ಪಂದಿಸಿದ್ದಾರೆ.
ಧಾರವಾಡದ ಕೃಷಿ ವಿವಿ ಸಮೀಪ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಹಣ್ಣಿನ ಅಂಗಡಿಗೆ ನುಗ್ಗಿದೆ.ಪರಿಣಾಮ ಗ್ರಾಹಕನೊಬ್ಬ ಮೃತಪಟ್ಟಿದ್ದು ಮೂವರು ತೀವ್ರ ಗಾಯಗೊಂಡಿ ದ್ದಾರೆ.ಅದೇ ಮಾರ್ಗದಲ್ಲಿ ಬೆಂಗಾವಲು ವಾಹನ ದೊಂದಿಗೆ ಸಂಚರಿಸುತ್ತಿದ್ದ ಸಚಿವ ಪ್ರಲ್ಹಾದ್ ಜೋಶಿ ಅವರು ಅಪಘಾತದ ದೃಶ್ಯ ಕಂಡು ವಾಹನ ನಿಲ್ಲಿಸಿದ್ದಾರೆ
ನರಳುತ್ತಿದ್ದ ಗಾಯಾಳುಗಳನ್ನು ಉಪಚರಿಸಿದ್ದ ಲ್ಲದೇ, ತಮ್ಮ ಬೆಂಗಾವಲು ವಾಹನ ಹಾಗೂ 108 ಆಂಬ್ಯುಲೆನ್ಸ್ ತರಿಸಿ ತಕ್ಷಣ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ.ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಸ್ವತಃ ಸಚಿವರೇ ಕೈಜೋಡಿಸಿ, ಗಾಯಾಳುಗಳಿಗೆ ಧೈರ್ಯ ತುಂಬಿದರು. ಸಚಿವರ ಸಮಯ ಪ್ರಜ್ಞೆಗೆ ಸ್ಥಳೀಯರಿಂದ ಮೆಚ್ಚುಗೆ ಸಹ ವ್ಯಕ್ತವಾಯಿತು.
ಸುದ್ದಿ ಸಂತೆ ನ್ಯೂಸ್ ಧಾರವಾಡ…..