ಹುಬ್ಬಳ್ಳಿ –
ಖಾತೆ ಬದಲಾವಣೆಗೆ ಮುಂಗಡ ಹಣ ತಗೊಂಡು ವರ್ಷವಾದರೂ ಬದಲಾವಣೆಯಾಗದ ಖಾತೆ – ಮುಂಚಿತವಾಗಿ 10K ತಗೊಂಡು ವಲಯ ಕಚೇರಿ 6 ರಿಂದ 9 ಕ್ಕೆ ಬಂದ್ರು ಕೆಲಸ ಮಾಡಿಲ್ಲ ಶಿವಳ್ಳಿಯವರು…..ಗಮನಕ್ಕೆ ತಗೆದುಕೊಂಡು ಬಂದರು ಚೇಕ್ ಮಾಡತೇನಿ ಒಂದೇ ನಿಮಿಷ ಮಾತನಾಡತೇನಿ ಅಂತಾರೆ…..
ಸರ್ಕಾರದ ಕೆಲಸ ದೇವರ ಕೆಲಸ ಎಂದುಕೊಂಡು ಮಾಡಿದರೆ ಸಾರ್ವಜನಿಕರು ಕಚೇರಿಗೆಳಿಗೆ ಸುತ್ತಾಡೊದು ತಪ್ಪುತ್ತದೆ.ಕೆಲಸ ಕಾರ್ಯಗಳು ಬೇಗ ಬೇಗ ಆಗುತ್ತವೆ ಆದರೆ ಹುಬ್ಳಳ್ಳಿ ಧಾರವಾಡ ಮಹಾನಗರ ಪಾಲಿಕೆಯ ನೌಕರ ರೊಬ್ಬರಿಗೆ ಈ ಒಂದು ಮಾತು ಹೇಳಿ ಮಾಡಿಸಿ ದಂತಿದೆ.ಹೌದು ಇಸ್ಮಾಯಿಲ್ ಶಿವಳ್ಳಿ ಸಧ್ಯ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಲಯ ಕಚೇರಿ 9 ರಲ್ಲಿ ಕರ್ತವ್ಯವನ್ನು ಮಾಡುತ್ತಿ ದ್ದಾರೆ.
ಈ ಹಿಂದೆ ಇದ್ದ ವಲಯ ಕಚೇರಿ 6 ರಲ್ಲಿದ್ದಾಗ ಪ್ರಕಾಶ ಕಾಟವೆ ಎಂಬುವರು ತಮ್ಮ ಮನೆಯ ಖಾತೆ ಬದಲಾವಣೆಯನ್ನು ಮಾಡಿಸಲು ಬೇರೆ ಯವರ ಮೂಲಕ ಇವರನ್ನು ಸಂಪರ್ಕ ಮಾಡಿ ದ್ದಾರೆ.ಈ ಕುರಿತಂತೆ ಎಲ್ಲಾ ದಾಖಲೆಗಳನ್ನು ಕೂಡಾ ನೀಡಿದ್ದಾರೆ.
ಪಾಲಿಕೆಗೆ ತುಂಬಬೇಕಾದ ಹಣವನ್ನು ಕೂಡಾ ಮುಂಚಿತವಾಗಿ ನೀಡಿದ್ದಾರೆ.ಅಲ್ಲದೇ ಈ ಒಂದು ಕೆಲಸವನ್ನು ಮಾಡಲು 15 ಸಾವಿರ ರೂಪಾಯಿ ಕೂಡಾ ಕೇಳಿದ್ದು ತುಂಬಾ ಹೆಚ್ಚಿಗೆ ಆಗುತ್ತದೆ ಎಂದಾಗ ಅಂತಿಮವಾಗಿ 10 ಸಾವಿರ ರೂಪಾಯಿ ಹಣವನ್ನು ನೀಡಿದ್ದಾರೆ.ದಾಖಲೆಗಳೊಂದಿಗೆ ಹಣ ವನ್ನು ನೀಡಿ ಬರೊಬ್ಬರಿ 1 ವರ್ಷಗಳು ಕಳೆದರು ಕೂಡಾ ಈವರೆಗೆ ಇನ್ನೂ ಕೆಲಸವಾಗಿಲ್ಲ ಖಾತೆ ಬದಲಾವಣೆಯಾಗಿಲ್ಲ.
ನೂರೆಂಟು ಕಾರಣಗಳನ್ನು ಹೇಳುತ್ತಾ ಸಮಯ ವನ್ನು ಕಳೆಯುತ್ತಿರುವ ಇಸ್ಮಾಯಿಲ್ ಶಿವಳ್ಳಿ ಯವರು ಕೆಲಸವನ್ನು ಮಾಡಿಕೊಡದಿರುವುದು ಇರಲಿ ದಾಖಲೆಗಳನ್ನು ಕೊಡಿ ಎಂದು ಕೇಳಬೇಕು ಎಂದರೆ ಸಧ್ಯ ಪ್ರಕಾಶ ಕಾಟವೆಯವರ ಪೊನ್ ನ್ನು ಕೂಡಾ ಸ್ವೀಕಾರ ಮಾಡುತ್ತಿಲ್ಲ.
ಅತ್ತ ಹಣವು ಹೋಯಿತು ದಾಖಲೆಗಳು ಹೋದವು ಎನ್ನುತ್ತಾ ಪ್ರಕಾಶ ಕಾಟವೆಯವರು ಇಸ್ಮಾಯಿಲ್ ಶಿವಳ್ಳಿಯರಿಗೆ ಕೆಲಸ ಕೊಟ್ಟಿದ್ದೇ ತಪ್ಪಾಯಿತು ಎಂದುಕೊಂಡು ಪರದಾಡುತ್ತಿದ್ದಾರೆ. ಈ ಒಂದು ವಿಚಾರ ಕುರಿತಂತೆ ಕಾಟವೆಯವರು ಪಾಲಿಕೆಯ ಆಯುಕ್ತರು ಸೇರಿದಂತೆ ಎಲ್ಲರ ಗಮನಕ್ಕೂ ತಗೆದುಕೊಂಡು ಬಂದರು ಕೂಡಾ ಯಾರೂ ಕೂಡಾ ಸ್ಪಂದಿಸುತ್ತಿಲ್ಲ ಸಮಸ್ಯೆ ಪರಿಹಾರದತ್ತ ಸ್ಪಂದಿಸುತ್ತಿಲ್ಲ.
ಇನ್ನೂ ಈ ಒಂದು ಸಮಸ್ಯೆ ಕುರಿತಂತೆ ಪಾಲಿಕೆಯ ಆಯುಕ್ತರ ಮತ್ತು ವಲಯ ಕಚೇರಿ 9 ರ ಅಧಿಕಾರಿ ಕಟಗಿ ಯವರ ಗಮನಕ್ಕೆ ತಗೆದು ಕೊಂಡು ಬಂದರು ಕೂಡಾ ಹೇಳೊದು ಕೇಳೊದು ಆಗಿದೆ ಹೊರತು ಏನು ಕೆಲಸವಾಗಿಲ್ಲ.ಇನ್ನೂ ಈ ಒಂದು ವಿಚಾರ ಕುರಿತಂತೆ ಸುದ್ದಿ ಸಂತೆ ಯ ವರದಿಗಾರರು ಶಿವಳ್ಳಿಯವರನ್ನು ಪ್ರಶ್ನೆ ಮಾಡಿ ದರೆ ಹೌದ ರೀ ನನಗೆ ತುಂಬಾ ಟಾರ್ಚರ್ ಆಗಿದೆ ಹಣ ಮರಳಿ ಕೊಡತೇನಿ ಎಂದು ಜೋರಾಗಿ ಮಾತನಾಡುತ್ತಿದ್ದಾರೆ.
ಕೆಲಸ ಕಾರ್ಯಗಳನ್ನು ಹೊತ್ತುಕೊಂಡು ಕಚೇರಿಗೆ ಬರುವ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡಲು ನಿಮಗೆ ಆಗದಿದ್ದರೆ ಹೇಗೆ.ಪಾಲಿಕೆ ಯಲ್ಲಿ ಖಡಕ್ ಆಯುಕ್ತರಾಗಿರುವ ಡಾ ಈಶ್ವರ ಉಳ್ಳಾಗಡ್ಡಿಯವರೇ ಇನ್ನಾದರೂ ನಿಮ್ಮ ವಲಯ ಕಚೇರಿಗಳಲ್ಲಿ ನಿಮ್ಮ ಸಿಬ್ಬಂದಿಗಳು ಹೇಗೆ ಇದ್ದಾರೆ ಹೇಗೆ ಸಾರ್ವಜನಿಕರ ಕೆಲಸ ಕಾರ್ಯ ಮಾಡು ತ್ತಾರೆ ಮುಂಗಡವಾಗಿ ಹಣ ತಗೆದುಕೊಂಡು ವರ್ಷ ಕಳೆದರು ಇನ್ನೂ ಮಾಡದ ಶಿವಳ್ಳಿಯವರ ಕಾರ್ಯವೈಖರಿಯನ್ನು ಒಮ್ಮೆ ನೋಡಿ
ಇತ್ತ ಹಣ ಕೊಟ್ಟು ದಾಖಲೆಗಳನ್ನು ಕೊಟ್ಟು ಕೆಲಸವಾಗದೆ ಪರದಾಡುತ್ತಿರುವ ಪ್ರಕಾಶ ಕಾಟವೆಯವರ ಕೆಲಸ ಮಾಡಿಸಿ ಇಂತಹ ನೌಕರರ ಈ ಒಂದು ಕಾರ್ಯಕ್ಕೆ ಕಡಿವಾಣ ಹಾಕಿ ಎಂಬೊದು ನಮ್ಮ ಆಶಯವಾಗಿದ್ದು ಇದನ್ನು ಆಯುಕ್ತರು ಮಾಡುತ್ತಾರೆಯಾ ಅಥವಾ ಈಗಲೇ ಮಾತನಾಡುತ್ತೇನೆ,ಚೇಕ್ ಮಾಡತೇನಿ ಒಂದೇ ನಿಮಿಷ ಎನ್ನುತ್ತಾ ಮೌನವಾಗಿರುತ್ತಾರೆ ಎಂಬೊ ದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ…..