ಬೆಂಗಳೂರು –
ಶಾಲಾ ಹಂತದಲ್ಲಿ ʻಮಿಷನ್ ಲೈಫ್ʼ ಕಾರ್ಯಕ್ರಮ ಅನುಷ್ಠಾನಗೊಳಿಸುವ ಕುರಿತಂತೆ ರಾಜ್ಯ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಪ್ರಪಂಚದಾದ್ಯಂತ ಮತ್ತು ರಾಷ್ಟ್ರದಾದ್ಯಂತ ತೀವ್ರ ವಾದ ಶಾಖದ ಅಲೆಗಳು ಮತ್ತು ಉಲ್ಬಣಗೊಳ್ಳು ತ್ತಿರುವ ಹವಾಮಾನ ಬಿಕ್ಕಟ್ಟುಗಳಿಂದ ನಮ್ಮ ಗ್ರಹವನ್ನು ರಕ್ಷಿಸಲು ಮಾನವ ಪೀಳಿಗೆಯನ್ನು ಸಜ್ಜುಗೊಳಿಸಬೇಕಾಗಿದೆ.
ಇಂದಿನ ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಉತ್ತಮ, ಯಶಸ್ವಿ, ನವೀನ, ಹೊಂದಿಕೊಳ್ಳುವ ಮತ್ತು ಉತ್ಪಾದಕ ಮಾನವರಾಗಲು ಕೆಲವು ವಿಷಯಗಳು, ಕೌಶಲ್ಯಗಳು ಮತ್ತು ಸಾಮರ್ಥ್ಯ ಗಳನ್ನು ಎಲ್ಲಾ ವಿದ್ಯಾರ್ಥಿಗಳು ಕಲಿಯಬೇಕು.
ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ, ನೈರ್ಮಲ್ಯ ಪರಿಸರ, ನೈಸರ್ಗಿಕ ಸಂಪನ್ಮೂಲ ಸಂರಕ್ಷಣೆಯನ್ನು ರಾಷ್ಟ್ರೀಯ ಶಿಕ್ಷಣ ನೀತಿ-2020 ಒತ್ತಿಹೇಳುತ್ತದೆ.ಈ ಹಿನ್ನೆಲೆಯಲ್ಲಿ “ಮಿಷನ್ ಲೈಫ್” ಸಾಪ್ತಾಹಿಕ ಕಾರ್ಯಕ್ರಮದಡಿ ಪರಿಸರ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಚಟುವಟಿಕೆಗಳನ್ನು ಶಾಲಾ ಹಂತದಲ್ಲಿ ಶಿಕ್ಷಕರು ಹಮ್ಮಿಕೊಳ್ಳುವಂತೆ ಸೂಚನೆ ಯನ್ನು ನೀಡಲಾಗಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..