ಹುಬ್ಬಳ್ಳಿ –
ಹುಬ್ಬಳ್ಳಿಯಲ್ಲಿ ಡಾಕ್ಟರ್ ಗಳಿಗೆ ಪಾಠ ಮಾಡಿದ ಖಾಕಿ ಪಡೆ – ಬಿಡುವಿಲ್ಲದ ಕೆಲಸ ಕಾರ್ಯಗಳ ನಡುವೆ ACP ಶಿವಪ್ರಕಾಶ್ ನಾಯಕ ನೇತ್ರತ್ವದ ಲ್ಲಿನ ಪೊಲೀಸ್ ಟೀಮ್ ನ ನಡೆಯಿತು ಅರ್ಥ ಪೂರ್ಣ ಕಾರ್ಯಕ್ರಮ ಹೌದು
ಪೊಲೀಸರು ಅಂದರೆ ಸದಾ ಬಿಡುವಿಲ್ಲದ ಕೆಲಸ ಕಾರ್ಯಕ್ರಮಗಳು ಇದ್ದೇ ಇರುತ್ತವೆ.ಆ ಭದ್ರತೆ ಈ ಭದ್ರತೆ ಎನ್ನುತ್ತಾ ಸದಾ ಯಾವಾಗಲೂ ಒಂದಲ್ಲ ಒಂದು ಕೆಲಸ ಕಾರ್ಯಗಳಲ್ಲಿ ಇರುತ್ತಾರೆ. ಹೀಗಿರು ವಾಗ ಹುಬ್ಬಳ್ಳಿಯಲ್ಲಿ ಒತ್ತಡದ ಕೆಲಸಗಳ ನಡುವೆ ಯೂ ಕೂಡಾ ಪೊಲೀಸರು ಅರ್ಥ ಪೂರ್ಣವಾದ ಕಾರ್ಯಕ್ರಮವನ್ನು ಮಾಡಿದ್ದಾರೆ.
ಹೌದು ಇಂದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಅಪರಾಧ ಚಟುವಟಿಕೆಗಳ ಹಿನ್ನಲೆಯಲ್ಲಿಹುಬ್ಬಳ್ಳಿ ನಗರದ ವಿದ್ಯಾನಗರದ ಕಿಮ್ಸ್ ಮೆಡಿಕಲ್ ಕಾಲೇಜ್ ನಲ್ಲಿ ಸೈಬರ್ ಅಪರಾಧ ಹಾಗೂ ಡ್ರಗ್ಸ್ ಕುರಿತಂತೆ ಜಾಗ್ರತಿ ಕಾರ್ಯಕ್ರಮವನ್ನು ಮಾಡಲಾಯಿತು
ಉತ್ತರ ವಿಭಾಗದ ಎಸಿಪಿ ಹಾಗೂ CEN ಎಸಿಪಿ ರವರ ಉಪಸ್ಥಿತಿಯಲ್ಲಿ ಈ ಒಂದು ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿತ್ತು.ತಪ್ಪು ಮಾಡಿದರಿಗೆ ಪಾಠ ಮಾಡುವ ಪೊಲೀಸರು ಸದಾ ಬೇರೆ ಬೇರೆ ಕೆಲಸಗಳಲ್ಲಿ ಬ್ಯೂಜಿಯಾಗಿರುವ ಪೊಲೀಸರು ಅದನ್ನೇಲ್ಲವನ್ನು ಮರೆತು ಭಾವಿ ವೈಧ್ಯರಿಗೆ ಪಾಠ ವನ್ನು ಮಾಡುತ್ತಾ ಜಾಗೃತಿಯನ್ನು ಮುೂಡಿಸಿ ದರು
ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶ ನದಲ್ಲಿ ನಡೆದ ಈ ಒಂದು ಕಾರ್ಯಕ್ರಮದಲ್ಲಿ ಉತ್ತರ ವಿಭಾಗದ ಎಸಿಪಿ ಶಿವಪ್ರಕಾಶ್ ನಾಯಕ ಪಾಲ್ಗೊಂಡು ಮಾತನಾಡಿ ಅಪರಾಧ ಕೃತ್ಯದ ಬಗ್ಗೆ ಸಾಮಾಜಿಕ ಜಾಲತಾಣ ದ ಮೂಲಕ ನಡೆಯುವ ಸೈಬರ್ ಅಪರಾಧದ ಬಗ್ಗೆ ಅಪರಿಚಿತ ವ್ಯಕ್ತಿಗಳು ವಿವಿಧ ರೀತಿಯಲ್ಲಿ ವಂಚಿಸುವ ವಿಧಾನ ಹಾಗೂ 112 ನ ಉಪಯೋಗ ಮತ್ತು ಹೆಣ್ಣು ಮಕ್ಕಳಿಗೆ ತೊಂದರೆಯಾಗದಂತೆ ಚೆನ್ನಮ್ಮ ಪಡೆ ಕೈಗೊಳ್ಳುವ ಕಾರ್ಯಪಡೆಯ ಬಗ್ಗೆ ಮಾಹಿತಿಯನ್ನು ನೀಡಿದರು.
ಇದರೊಂದಿಗೆ ಇಂದು ಹೆಚ್ಗಾಗುತ್ತಿರುವ ಗಾಂಜಾ, ಡ್ರಗ್ಸ್ ಸೇವನೆಯಿಂದ ಆಗುವಂತಹ ಕೆಟ್ಟ ಪರಿಣಾ ಮದ ಬಗ್ಗೆ ಮಾಹಿತಿ ನೀಡಿ ಅದನ್ನು ಉಪಯೋಗಿ ಸದಂತೆ ಹಾಗೂ ಉಪಯೋಗಿಸಿದಲ್ಲಿ ಮುಲಾಜಿ ಲ್ಲದೆ ಕಾನೂನು ಕ್ರಮ ಕೈಗೊಳ್ಳುವದಾಗಿ ತಿಳಿಸಿ ದರು
ಇದರೊಂದಿಗೆ ಉತ್ತಮ ರೀತಿಯಲ್ಲಿ ಅಭ್ಯಾಸ ಮಾಡಿ ಒಳ್ಳೇಯ ಸಾಧನೆಯನ್ನು ಮಾಡುವಂತೆ ತಿಳಿಸಿದರು.ಅದೇ ರೀತಿ CEN ಎಸಿಪಿ ಶಿವರಾಜ್ ಕಟಕಭಾವಿ ಮತ್ತು ಇನ್ಸ್ಪೆಕ್ಟರ್ ಬಿ. ಕೆ. ಪಾಟೀಲ ಸಹ ಸೈಬರ್ ಅಪರಾಧ ಹಾಗೂ ಡ್ರಗ್ಸ್ ನಿಂದಾ ಗುವ ತೊಂದರೆಗಳ ಬಗ್ಗೆ ತಿಳಿಸಿದರು.
ಈ ಸಮಯದಲ್ಲಿ ವಿದ್ಯಾನಗರ ಪೊಲೀಸ್ ಇನ್ಸ್ಪೆಕ್ಟರ್ ಜಯಂತ್ ಗೌಳಿ, ಕಿಮ್ಸ್ ಪ್ರಿನ್ಸಿಪಾಲ್ ರಾದ ಈಶ್ವರ್ ಹೊಸಮನಿ, ವಾರ್ಡನ್ ಕೆ. ಎಫ್. ಕಮ್ಮಾರ, ಕಿಮ್ಸ್ ವೈದ್ಯಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..