ಮಲ್ಲಾಪೂರು –
ಸಿದ್ದಾರೂಢ ಮಠದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಣೆ – ಡಾ ವಿರೇಶ ಸತ್ತಿಗೇರಿ ಯವರಿಂದ ಮಲ್ಲಾಪೂರ ಗ್ರಾಮದಲ್ಲಿ ಮುಂದು ವರೆದ ಸಾಮಾಜಿಕ ಕಾರ್ಯಕ್ರಮಗಳು….. ಡಾಕ್ಟರ್ ಗೆ ಸಾಥ್ ನೀಡಿದ ಗ್ರಾಮದ ಗುರು ಹಿರಿಯರು,ಮಹಿಳೆಯರು,ಶಾಲಾ ಕಾಲೇಜು ವಿದ್ಯಾರ್ಥಿಗಳು ಹೌದು
ಸದಾ ಒಂದಿಲ್ಲೊಂದು ವಿಶೇಷ ಸಾಮಾಜಿಕ ಕೆಲಸ ಕಾರ್ಯಗಳ ಮೂಲಕ ಸಾಮಾಜಿಕ ಸೇವೆಯನ್ನು ಮಾಡಿಕೊಂಡು ಬರುತ್ತಿರುವ ಡಾ ವಿರೇಶ ಸತ್ತಿಗೇರಿ ಯವರ ಕಾರ್ಯಗಳು ಮುಂದುವರೆ ದಿವೆ ವೃತ್ತಿಯಲ್ಲಿ ವೈಧ್ಯರಾಗಿದ್ದುಕೊಂಡು ಕೇವಲ ವೃತ್ತಿಯನ್ನು ಮಾಡದೇ ಇದರೊಂದಿಗೆ ವೈಧ್ಯರಿಗೆ ಸಾಮಾಜಿಕ ಜವಾಬ್ದಾರಿ ಹೇಗಿರಬೇಕು ಎಂಬೊ ದನ್ನು ಪ್ರತಿಯೊಂದು ಕೆಲಸ ಕಾರ್ಯಗಳ ಮೂಲಕ ತೋರಿಸಿಕೊಡುತ್ತಿದ್ದು
ಇದಕ್ಕೆ ಸಾಕ್ಷಿ ಯೋಗ ದಿನಾಚರಣೆ.ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಮಲ್ಲಾಪೂರ ಗ್ರಾಮದಲ್ಲಿ ಐತಿಹಾಸಿಕ ಸಿದ್ದಾರೂಢ ದೇವಸ್ಥಾನವನ್ನು ನಿರ್ಮಾಣವನ್ನು ಮಾಡಲಾಗುತ್ತಿದ್ದು ಈ ಒಂದು ದೇವಾಲಯದ ಆವರಣದಲ್ಲಿ ಒಂದಿಲ್ಲೊಂದು ಧಾರ್ಮಿಕ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಗ್ರಾಮದಲ್ಲಿ ಬಾಂಧವ್ಯದ ಬೇಸುಗೆಯನ್ನು ಡಾ ವಿರೇಶ ಸತ್ತಿಗೇರಿ ಬೆಸೆ ಯುತ್ತಿದ್ದು ಇದರ ಮುಂದುವರೆದ ಭಾಗವಾಗಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯ ಕ್ರಮದವನ್ನು ಮಾಡುವ ಮೂಲಕ ಗ್ರಾಮದಲ್ಲಿ ಮತ್ತೊಂದು ವಿಶೇಷವಾದ ಕಾರ್ಯದೊಂದಿಗೆ ಜನರ ಮೆಚ್ಚುಗೆಗೆ ಪಾತ್ರರಾದರು
ಹೌದು 10 ನೆಯ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಮಲ್ಲಾಪೂರ ಗ್ರಾಮದಲ್ಲಿ ಆಚರಣೆ ಮಾಡಲಾಯಿತು.ಈ ಒಂದು ಹಿನ್ನಲೆ ಯಲ್ಲಿ ಸಿದ್ದಾರೂಢ ದೇವಸ್ಥಾನದ ಅಂಗಳದಲ್ಲಿ ಈ ಒಂದು ಬಾರಿ ಶಿಕ್ಷಕ ನಾಗಪ್ಪ ಬಲಕೊಪ್ಪ ಅವರು ಸಾಮೂಹಿಕವಾಗಿ ಯೋಗವನ್ನು ಮಾಡುವ ಮೂಲಕ ಯೋಗ ದಿನಾಚರಣೆಯನ್ನು ಆಚರಣೆ ಮಾಡಿದ್ದು ಕಂಡು ಬಂದಿತು.
ಪ್ರತಿ ವರ್ಷ ಈ ಒಂದು ಕಾರ್ಯಕ್ರಮವನ್ನು ಕಳೆದ ನಾಲ್ಕು ವರ್ಷಗಳಿಂದ ಮಾಡಿಕೊಂಡು ಬರಲಾ ಗುತ್ತಿದ್ದು ಈ ವರ್ಷವೂ ಕೂಡಾ ಮಕ್ಕಳಿಗಾಗಿ ಯೋಗ ದಿನಾಚರಣೆಯೊಂದಿಗೆ ಬೇರೇ ಬೇರೆ ಸ್ಪರ್ಧೆಗಳನ್ನು ಕೂಡಾ ಆಯೋಜನೆ ಮಾಡ ಲಾಗಿದೆ.ಇವರೊಂದಿಗೆ ಗ್ರಾಮದ ಗುರು ಹಿರಿ ಯರು,ಶಾಲಾ ಕಾಲೇಜು ವಿದ್ಯಾರ್ಥಿಗಳು, ವಿಧ್ಯಾರ್ಥಿನಿಯರು,ಮಹಿಳೆಯರು ಸೇರಿದಂತೆ ಹಲವರು ಉತ್ಸಾಹದಿಂದ ಪಾಲ್ಗೊಂಡು ಯೋಗವನ್ನು ಮಾಡಿ
ಯೋಗಾ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದು ಕಂಡು ಬಂದಿತು.ಈ ಒಂದು ಸಮಯದಲ್ಲಿ ವೈಧ್ಯ ಡಾ ವಿರೇಶ ಸತ್ತಿಗೇರಿ,ಹಿರಿಯ ನ್ಯಾಯವಾದಿ ಅಶೋಕ ಸತ್ತಿಗೇರಿ, ನಾಗಪ್ಪ ಬಳಕೊಪ್ಪ ಶಿಕ್ಷಕರು ಕೌಜಗೇರಿ,ರ,ಹನಮಂತಪ್ಪ ಪವಾಡಶೆಟ್ಟಿ, ಶರಣಪ್ಪ ಕರಿಗನ್ನವರ,ಶಿವಣ್ಣಾ ಅರಹುಣಸಿ, ಅಶೋಕ ಸತ್ತಿಗೇರಿ,ರಾಜು ಹಿರೇಗೌಡರ,ಬಾಬು ಮಾಸ್ತಿ,ಹಿರೇಗೌಡರ ಶಿಕ್ಷಕರು,
ಮಲ್ಲಪ್ಪ ಪೂಜಾರ,ಶಿಕ್ಷಕಿ ಶಿಲ್ಪಾ ಚಳಗೇರಿ, ಮಲ್ಲಿಕಾರ್ಜುನ ಹಟ್ಟಿ,ಸೇರಿದಂತೆ ಮಹಿಳೆಯರು ಶಾಲಾ ಕಾಲೇಜು ವಿದ್ಯಾರ್ಥಿಗಳು ವಿದ್ಯಾರ್ಥಿನಿ ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಮಲ್ಲಾಪೂರು……