ನವದೆಹಲಿ –
ಮತ್ತೆ ಇಳಿಕೆಯಾಯಿತು ಸಿಲಿಂಡರ್ ಬೆಲೆ ಮೂರನೇಯ ಬಾರಿಗೆ ಇಳಿಕೆಯಾಯಿತು ಸಿಲಿಂಡರ್ ದರ…..ಬೆಳೆ ಏರಿಕೆಯ ನಡುವೆ ಒಂದಿಷ್ಟು ನೆಮ್ಮದಿ ನೀಡಿದ ಕೇಂದ್ರ ಸರ್ಕಾರ
ಸತತವಾಗಿ ಏರಿಕೆಯಾಗುತ್ತಿರುವ ಬೆಲೆ ಏರಿಕೆ ಯಿಂದಾಗಿ ಬೇಸತ್ತಿರುವ ಜನತೆಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ.ಹೌದು ವಾಣಿಜ್ಯ ಬಳಕೆಯ LPG ಸಿಲಿಂಡರ್ ಬೆಲೆಯನ್ನು ಮತ್ತೆ ಇಳಿಕೆ ಮಾಡಲಾಗಿದೆ.ಮೂರನೇಯ ಬಾರಿಗೆ ಸಧ್ಯ ಬೆಲೆ ಕಡಿಮೆಯಾಗಿದ್ದು ಸಧ್ಯ 30 ರೂ ಇಳಿಕೆಯನ್ನು ಮಾಡಲಾಗಿದೆ.
ತೈಲ ಮಾರುಕಟ್ಟೆ ಕಂಪನಿಗಳು ಜುಲೈ 1ರಿಂದ ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್ (ವಾಣಿಜ್ಯ ಗ್ಯಾಸ್‌ಸಿಲಿಂಡರ್)ಗಳ ಬೆಲೆಯನ್ನು ಕಡಿಮೆ ಮಾಡಿದೆ.ಹೊಸ ದರ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ.ಗೃಹ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಯಾಗಿಲ್ಲ.
ಇದರೊಂದಿಗೆ ವಾಣಿಜ್ಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಬೆಂಗಳೂರಿನಲ್ಲಿ 30 ರೂ ಕಡಿತಗೊಂಡು 1,726 ರೂ.ಗೆ ತಲುಪಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಕಂಪನಿ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆ ಇಳಿಸಿದ್ದರಿಂದ ಹೋಟೆಲ್ ಉದ್ಯಮಿಗಳಿಗೆ ಅನುಕೂಲವಾಗಿದೆ.ಆದರೆ ಗೃಹ ಬಳಕೆಯ 14.2 ಕೆಜಿ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಜಾಗತಿಕ ತೈಲ ಮಾರುಕಟ್ಟೆಯ ಪ್ರವೃತ್ತಿಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುವುದಾಗಿ ಮತ್ತು ದೇಶಾದ್ಯಂತದ ಗ್ರಾಹಕರಿಗೆ ನ್ಯಾಯಯುತ ಬೆಲೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಹೊಂದಾಣಿಕೆಗ ಳನ್ನು ಮಾಡುವುದಾಗಿ ಒಎಂಸಿಗಳು ಭರವಸೆ ನೀಡಿವೆ.ದೆಹಲಿಯಲ್ಲಿ ಪ್ರತಿ ಸಿಲಿಂಡರ್ ಬೆಲೆ 1,646 ರೂ. ಇದೆ.
ಅಂದರೆ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 30 ರೂ. ಇಳಿಕೆಯಾಗಿದೆ. ಮುಂಬೈ ಮತ್ತು ಚೆನ್ನೈನಲ್ಲಿ 19 ಕೆಜಿಯ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ಕ್ರಮವಾಗಿ 1,598 ಮತ್ತು 1,809.5 ರೂ.ಗೆ ಇಳಿದಿದೆ. ಎರಡೂ ನಗರಗಳಲ್ಲಿ 31 ರೂ. ಇಳಿಕೆಯಾಗಿದೆ. ಸಬ್ಸಿಡಿ ರಹಿತ 14.2 ಕೆಜಿ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಕಳೆದ ಕೆಲವು ತಿಂಗಳಿಂದ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ಕಡಿತಗೊಳಿಸಲಾಗುತ್ತಿದೆ. ಜೂ.1ರಂದು ವಾಣಿಜ್ಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ 69.50 ರೂ. ಕಡಿಮೆ ಆಗಿತ್ತು. ಮೇ 1ರಂದು ದರ ಪರಿಷ್ಕರಿಸಿ 19 ರೂ. ಇಳಿಕೆ ಮಾಡಲಾಗಿತ್ತು. ಏಪ್ರಿಲ್‌ನಲ್ಲೂ 19 ಕೆಜಿಯ ಸಿಲಿಂಡರ್ ಬೆಲೆಯನ್ನು 30.50 ರೂ. ಇಳಿಸಲಾಗಿತ್ತು
ಸುದ್ದಿ ಸಂತೆ ನ್ಯೂಸ್ ನವದೆಹಲಿ…..