ಹುಬ್ಬಳ್ಳಿ –
ಬಗೆದಷ್ಟು ಬಯಲಾಗುತ್ತಿದೆ ಹುಬ್ಬಳ್ಳಿಯಲ್ಲಿ ನಿಷೇಧಿತ ಪ್ಲಾಸ್ಟಿಕ್ ಮಾಫಿಯಾ – ಮತ್ತಷ್ಟು ನಿಷೇಧಿತ ಪ್ಲಾಸ್ಟಿಕ್ ಪತ್ತೆ ಅಧಿಕಾರಿಗಳಿಂದ ಅಂಗಡಿ ಸೀಜ್…..ಇದನ್ನೇ ಬಂಡವಾಳ ಮಾಡಿಕೊಂಡ ಕೆಲವರು ಆಯುಕ್ತರ ಹಿಂದೆ ಮುಂದೆ ಸುತ್ತಾಟ…..
ಹೌದು ನಿಷೇಧಿತ ಪ್ಲಾಸ್ಟಿಕ್ ಮಾಫಿಯಾಗೂ ವಾಣಿಜ್ಯ ನಗರಿ ಹುಬ್ಬಳ್ಳಿಗೂ ಅವಿನಾಭಾವ ಸಂಬಂಧ ಇದೆ ಎಂಬಂತೆ ಕಂಡು ಬರುತ್ತಿದೆ. ವಾಯು ಮಾಲಿನ್ಯಕ್ಕೆ ಮತ್ತು ಆರೋಗ್ಯಕ್ಕೆ ಮಾರಕವಾಗಿರುವ ನಿಷೇಧಿತ ಪ್ಲಾಸ್ಟಿಕ್ ನ್ನು ಬಳಕೆ ಮಾಡಬಾರದು ಎಂಬ ಆದೇಶವಿದ್ದರೂ ಕೂಡಾ ನಗರದಲ್ಲಿ ರಾಜಾ ರೋಷವಾಗಿ ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾರಾಟ ಮತ್ತು ಉತ್ಪಾದನೆ ನಡೆಯುತ್ತಿದೆ ಎಂಬೊದಕ್ಕೆ ನಗರದಲ್ಲಿ ಕಂಡು ಬರುತ್ತಿರುವ ಚಿತ್ರಣವೇ ಸಾಕ್ಷಿ.
ನಗರದ ಹಲವಡೆ ನಿಷೇಧಿತ ಪ್ಲಾಸ್ಟಿಕ್ ಮಾಫಿಯಾ ಜೋರಾಗಿ ನಡೆಯುತ್ತಿದ್ದು ದೂರು ಬಂದಾಕ್ಷಣ ಯಾರಾದರೂ ಹೇಳಿದ ಕೂಡಲೇ ಪಾಲಿಕೆಯವರು ದಿಢೀರನೇ ದಾಳಿ ಮಾಡಿ ಕೈಗೆ ಸಿಕ್ಕಷ್ಟು ನಿಷೇಧಿತ ಪ್ಲಾಸ್ಟಿಕ್ ನ್ನು ವಶಕ್ಕೆ ತಗೆದು ಕೊಂಡು ಅಂಗಡಿ ಮುಂಗಟ್ಟುಗಳನ್ನು ಸೀಜ್ ಮಾಡುತ್ತಾರೆ.
ಇದು ನಗರದಲ್ಲಿ ಸರ್ವೆ ಸಾಮಾನ್ಯವಾಗಿ ಕಂಡು ಬರುತ್ತಿದ್ದು ನಿಷೇಧಿತ ಪ್ಲಾಸ್ಟಿಕ್ ವಿಚಾರ ಸಧ್ಯ ಮತ್ತೆ ನಗರದರಲ್ಲಿ ಸುದ್ದಿಯಾಗುತ್ತಿದ್ದು ಎರಡು ದಿನಗಳ ಹಿಂದೆಯಷ್ಟೇ ನಗರದ ಗೋಕುಲ ರಸ್ತೆ ಯಲ್ಲಿರುವ ಕೈಗಾರಿಕಾ ಪ್ರದೇಶದಲ್ಲಿನ ರಜನಿ ಪ್ಲಾಸ್ಟಿಕ್ ಕಾರ್ಖಾನೆಯ ಮೇಲೆ ದಾಳಿ ಮಾಡಿ 15 ಕ್ಕೂ ಹೆಚ್ಚು ನಿಷೇಧಿತ ಪ್ಲಾಸ್ಟಿಕ್ ನ್ನು ವಶ ಪಡಿಸಿ ಕೊಂಡ ಬೆನ್ನಲ್ಲೇ ಮತ್ತೆ ನಗರದ ಶಿಂಪಿಗಲ್ಲಿ ಸೇರಿ ದಂತೆ ಹಲವೆಡೆ ಪಾಲಿಕೆಯ ಅಧಿಕಾರಿಗಳು ದಾಳಿ ಮಾಡಿ ಮತ್ತಷ್ಟು ನಿಷೇಧಿತ ಪ್ಲಾಸ್ಟಿಕ್ ನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ
ಮಾರಾಟ ಮಾಡುತ್ತಿದ್ದ ಅಂಗಡಿ ಮುಂಗಟ್ಟುಗ ಳನ್ನು ಸೀಜ್ ಮಾಡಿದ್ದಾರೆ.ಇದರಿಂದಾಗಿ ನಿಷೇಧಿತ ಪ್ಲಾಸ್ಟಿಕ್ ನ್ನು ಮಾರಾಟ ಮಾಡುತ್ತಿದ್ದ ವ್ಯಾಪಾರಸ್ಥರು ಆತಂಕಗೊಂಡಿದ್ದಾರೆ.ಇದು ಒಂದು ವಿಚಾರವಾದರೆ ಇನ್ನೂ ಇತ್ತ ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ಅಂಗಡಿ ಮಾಲೀಕರನ್ನು ಸಂಪರ್ಕ ಮಾಡಿ ಹಣ ವಸೂಲಿಗೆ ಇಳಿದಿದ್ದಾರೆ ಎಂಬ ಮಾತುಗಳು ಸಧ್ಯ ಜೋರಾಗಿ ಕೇಳಿ ಬರುತ್ತಿದ್ದು ಕೆಲವರು ಈ ಒಂದು ಕಾರ್ಯದಲ್ಲಿ ಸಕ್ರಿಯವಾಗಿ ಕೆಲಸವನ್ನು ಮಾಡು ತ್ತಿದ್ದಾರೆ
ಬಿಡುವಿಲ್ಲದೆ ಪಾಲಿಕೆಯ ಆಯುಕ್ತರ ಹಿಂದೆ ಮುಂದೆ ಸುತ್ತಾಡುತ್ತಿದ್ದು ಪಾಲಿಕೆಯ ಆವರಣ ಸೇರಿದಂತೆ ಹುಬ್ಬಳ್ಳಿಯ ತುಂಬೆಲ್ಲಾ ಗುಸು ಗುಸು ಪಿಸು ಮಾತುಗಳು ಕೇಳಿ ಬರುತ್ತಿದ್ದು ಇದನ್ನು ಪಾಲಿಕೆಯ ಆಯುಕ್ತರು ಗಂಭೀರವಾಗಿ ತಗೆದು ಕೊಳ್ಳುತ್ತಾರೆಯೇ ಏನು ಎಂಬೊದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..