ಬೆಂಗಳೂರು –
BJP ನಾಯಕರನ್ನು ಭೇಟಿಯಾದ ನೂತನ KMF ಸದಸ್ಯರು – ಶಂಕರ ಮುಗದ ನೇತ್ರತ್ವದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ CM ,Mla ಯವರನ್ನು ಭೇಟಿಯಾಗಿ ಶುಭಕೋರಿದ ಬಿಜೆಪಿ ಬೆಂಬಲಿತ ಸದಸ್ಯರು ಹೌದು
ಇತ್ತೀಚಿಗಷ್ಟೇ ಧಾರವಾಡ ಹಾಲು ಒಕ್ಕೂಟದ ಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾದ ಬಿಜೆಪಿ ಬೆಂಬಲಿತ ಸದಸ್ಯರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಾಸಕ ಅರವಿಂದ ಬೆಲ್ಲದ ರವರವನ್ನು ಭೇಟಿಯಾದರು ಬೆಂಗಳೂರಿನ ನಿವಾಸದಲ್ಲಿ ಬಿಜೆಪಿ ಬೆಂಬಲಿತ ಸರ್ವ ಸದಸ್ಯರು ಧಾರವಾಡ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಶಂಕರ ಮುಗದ ನೇತೃತ್ವದಲ್ಲಿ ಭೇಟಿಯಾಗಿ ಶುಭವನ್ನು ಕೋರಿದರು.
ಬಿಜೆಪಿ ಬೆಂಬಲಿತ ಎಲ್ಲಾ ಸದಸ್ಯರು ಬಿಜೆಪಿ ನಾಯಕ ರನ್ನು ಭೇಟಿಯಾಗಿ ಶುಭಕೋರಿದರು.ಇದೇ ವೇಳೆ ಚುನಾವಣೆಯಲಿ ಜಯಗಳಿಸಿದ ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸಿ ಸಧ್ಯ ಅಧ್ಯಕ್ಷ ಸ್ಥಾನದ ಚುನಾವಣೆಯ ಕುರಿತಂತೆ ಚರ್ಚೆಯನ್ನು ಮಾಡಿ ಅಧಿಕಾರ ಗದ್ದುಗೆಯನ್ನು ತಗೆದುಕೊಳ್ಳುವ ಬಗ್ಗೆ ಸುಧೀರ್ಘವಾಗಿ ಸಭೆಯನ್ನು ಮಾಡಿದರು.
ಈ ಒಂದು ಸಂದರ್ಭದಲ್ಲಿ ಶಂಕರ ಮುಗದ ಅವರೊಂದಿಗೆ ಬಿಜೆಪಿ ಬೆಂಬಲಿತ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..