ರೈಲು ಹತ್ತುವ ಮುನ್ನ ಹಣೆ ಹಚ್ಚಿ ನಮಸ್ಕರಿಸಿದ ಯುವಕ ಇದರ ಹಿಂದಿದೆ ಬಹುದೊಡ್ಡ ಕಾರಣ……

Suddi Sante Desk

ಮುಂಬಯಿ –

ಲಾಕ್ ಡೌನ್ ಸಮಯದಲ್ಲಿ ಸ್ಥಗಿತಗೊಂಡಿದ್ದ ಮುಂಬೈ ಲೋಕಲ್ ಟ್ರೇನ್ ಬರೋಬ್ಬರಿ 11 ತಿಂಗಳ ಬಳಿಕ ತನ್ನ ಸೇವೆಯನ್ನ ಪುನಾರಂಭಗೊಳಿಸಿದೆ. ಮುಂಬೈ ಜನರ ನಾಡಿ ಮಿಡಿತದಂತಿದ್ದ ಲೋಕಲ್ ಟ್ರೈನ್ ಸೌಕರ್ಯವಿಲ್ಲದೇ ಮುಂಬೈ ಮಂದಿ 11 ತಿಂಗಳು ತುಂಬಾನೇ ಕಷ್ಟ ಪಟ್ಟಿದ್ದರು. ಇದೀಗ ಸೂಕ್ತ ಕೊರೊನಾ ಮಾರ್ಗಸೂಚಿಗಳ ನಡುವೆ ಲೋಕಲ್ ಟ್ರೇನ್ ಗಳ ಸೇವೆ ಪುನಾರಂಭಗೊಂಡಿದೆ.

11 ತಿಂಗಳ ಬಳಿಕ ಪುನಾರಂಭಗೊಂಡ ಲೋಕಲ್ ಟ್ರೈನ್ ಹತ್ತುವ ಮುನ್ನ ಮುಂಬೈ ನಿವಾಸಿಯೊಬ್ಬ ರೈಲಿಗೆ ನಮಸ್ಕರಿಸಿದ್ದು ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಮದನ್ ಚಿಕ್ನಾ ಎಂಬ ಟ್ವಿಟರ್ ಖಾತೆಯೊಂದರಲ್ಲಿ ಈ ಫೋಟೋವನ್ನ ಶೇರ್ ಮಾಡಲಾಗಿದೆ.

ನಂಬರ್ 2 ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ ನಿಲ್ದಾಣದಲ್ಲಿ ಈ ಫೋಟೋವನ್ನ ಕ್ಲಿಕ್ಕಿಸಲಾಗಿದ್ದು ಮನ ಕಲಕುವಂತಿದೆ.

ಮುಂಬೈ ಜನರ ಪಾಲಿಗೆ ಲೋಕಲ್ ಟ್ರೈನ್ ಗಳು ಎಷ್ಟು ಮುಖ್ಯ ಎಂಬುದನ್ನ ಈ ಫೋಟೊವೊಂದು ಪ್ರತಿನಿಧಿಸುವಂತಿದ್ದು ಈ ಚಿತ್ರಣವೇ ಸಾಕ್ಷಿ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.