ಚಿಕ್ಕಮಗಳೂರು –
ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ರಾಜ್ಯ ಕಾರ್ಯಕಾರಣಿ ಚಿಕ್ಕಮಗಳೂರಿನಲ್ಲಿ ಆರಂಭ ಗೊಂಡಿದೆ ಹೌದು ಚಿಕ್ಕಮಗಳೂರಿನ ಪೈ ಕಲ್ಯಾಣ ಮಂಟಪ ದಲ್ಲಿ ಈ ಒಂದು ಬಾರಿ ಕಾರ್ಯಕಾರಣಿ ಸಭೆ ನಡೆಯುತ್ತಿದೆ
ಸಂಘಟನೆಯ ರಾಜ್ಯಾಧ್ಯಕ್ಷ ಸಿ ಎಸ್ ಷಡಾಕ್ಷರಿ ಯವರ ನೇತೃತ್ವದಲ್ಲಿ ಈ ಒಂದು ಸಭೆ ನಡೆಯು ತ್ತಿದ್ದು 7 ನೇ ವೇತನ ಆಯೋಗ ಜಾರಿಗೆ ಸೇರಿ ದಂತೆ ಹಲವು ವಿಚಾರ ಗಳ ಕುರಿತು ಮತ್ತು ನೌಕರರ ಬೇಡಿಕೆಗಳನ್ನು ಈ ಒಂದು ಸಭೆಯಲ್ಲಿ ಚರ್ಚೆ ಮಾಡಲಾಗುತ್ತದೆ
ಇನ್ನೂ ಈಗಾಗಲೇ ರಾಜ್ಯ ಸರ್ಕಾರಕ್ಕೆ 7 ನೇ ವೇತನ ಆಯೋಗವು ತನ್ನ ವರದಿಯನ್ನು ಮುಖ್ಯಮಂತ್ರಿ ಯವರಿಗೆ ಸಲ್ಲಿಸಿದ್ದಾರೆ ಆದರೂ ಕೂಡಾ ಈವರೆಗೆ ವರದಿ ಜಾರಿಗೆ ತರುವ ಕುರಿತು ಮಾತನಾಡುತ್ತಿಲ್ಲ ಹೀಗಾಗಿ ಬೇಸತ್ತಿರುವ ನೌಕರರ ಪರವಾಗಿ ಸಭೆಯಲ್ಲಿ ಮತ್ತೊಂದು ಹೋರಾಟದ ಬಗ್ಗೆ ಪೈನಲ್ ನಿರ್ಧಾರ ವನ್ನು ತಗೆದುಕೊಳ್ಳಲಿದ್ದು ಏನೇನಾಗಲಿದೆ ಎಂಬುದನ್ನೂ ಕಾದು ನೋಡಬೇ ಕಿದೆ.
ಇನ್ನೂ ಈ ಒಂದು ಸಭೆಯಲ್ಲಿ ರಾಜ್ಯದ ಸಮಸ್ತ ಸರ್ಕಾರಿ ನೌಕರರ ಪರವಾಗಿ ಒಂದು ದೃಢವಾದ ನಿರ್ಧಾರ ವನ್ನು ತೆಗೆದುಕೊಳ್ಳಿ ಎಂದು ರಾಜ್ಯ ಸರ್ಕಾರಿ ನೌಕರರ ರಾಜ್ಯಾಧ್ಯಕ್ಷ ಷಡಾಕ್ಷರಿ ಯವರ ಅಭಿಮಾನಿ ಬಳಗದ ಪರವಾಗಿ ಸಂಘಟನೆಯ ರಾಜ್ಯ ಸಂಚಾಲಕ ಮಹೇಶ್ ಮಂಡ್ಯ ಬೂದನೂರು ಒತ್ತಾಯಿಸಿ ದ್ದಾರೆ.
ಸುದ್ದಿ ಸಂತೆ ನ್ಯೂಸ್ ಚಿಕ್ಕಮಗಳೂರು….