ಚಿಕ್ಕಮಗಳೂರು –
ರಾಜ್ಯ ಸರ್ಕಾರಿ ನೌಕರರ ಸಂಘಟನೆಯ ಕಾರ್ಯಕಾರಣಿಯಲ್ಲಿ ತಗೆದುಕೊಂಡ ಆ 3 ನಿರ್ಣಯಗಳು – ಕಾರ್ಯಕಾರಣಿ ಸಭೆಯ ಕುರಿತಂತೆ ಕಂಪ್ಲೀಟ್ ಮಾಹಿತಿ…..
ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕಾರ್ಯಕಾರಣಿ ಸಭೆ ಚಿಕ್ಕಮಗಳೂರಿನಲ್ಲಿ ನಡೆಯಿತು.ರಾಜ್ಯ ಸರ್ಕಾರಿ ನೌಕರರ ಸಂಘಟನೆ ಯ ರಾಜ್ಯಾಧ್ಯಕ್ಷ ಸಿ ಎಸ್ ಷಡಾಕ್ಷರಿಯವರ ಅಧ್ಯಕ್ಷತೆಯಲ್ಲಿ ನಡೆದ ಈ ಒಂದು ಸಭೆಯಲ್ಲಿ ಆರಂಭದಲ್ಲಿ ಸಂಪ್ರದಾಯದಂತೆ ಕೆಲವೊಂದಿಷ್ಟು ವಿಚಾರಗಳ ವಿಷಯಗಳ ಕುರಿತಂತೆ ಚರ್ಚೆಯನ್ನು ಮಾಡಲಾಯಿತು.
ನಂತರ ನೌಕರರ ಪ್ರಮುಖ ಬೇಡಿಕೆಯಾಗಿರುವ 7ನೇ ವೇತನ ಆಯೋಗ,ಆರೋಗ್ಯ ಸಂಜಿವಿನಿ ಯೋಜನೆ ಮತ್ತು ಹಳೆ ಪಿಂಚಣಿ ಯೋಜನೆ ಹೀಗೆ ಮೂರು ವಿಚಾರಗಳ ಕುರಿತಂತೆ ಚರ್ಚೆಯನ್ನು ಮಾಡಿ ಹಂತ ಹಂತವಾಗಿ ಎರಡು ಮಾರ್ಗಗಳ ಮೂಲಕ ಮನವಿಯನ್ನು ನೀಡಿ ರಾಜ್ಯ ಸರ್ಕಾರ ವನ್ನು ಗಮನ ಸೆಳೆದು ಈ ಒಂದು ಮನವಿಗಳಿಗೆ ಸರ್ಕಾರ ಸ್ಪಂದಿಸಿ ಬೇಡಿಕೆಗಳನ್ನು ಈಡೇರಿಸಿದರೆ ಒಳಿತು ಇಲ್ಲವಾದರೆ ನಂತರ ಜುಲೈ ಅಂತ್ಯದಲ್ಲಿ ಇಲ್ಲವೇ ಆಗಸ್ಟ್ ತಿಂಗಳಲ್ಲಿ ಹೋರಾಟ ಮಾಡುವ ನಿರ್ಣಯಗಳನ್ನು ತಗೆದುಕೊಳ್ಳಲಾಯಿತು.
ಈ ಒಂದು ಕುರಿತಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ ಎಸ್ ಷಡಾಕ್ಷರಿಯವರು ಸಭೆಯ ನಂತರ ಮಾಹಿತಿಯನ್ನು ನೀಡಿ ಮಾತನಾಡಿದರು.
ಸುದ್ದಿ ಸಂತೆ ನ್ಯೂಸ್ ಚಿಕ್ಕಮಗಳೂರು…..