ಬೆಂಗಳೂರು –
ವರ್ಗಾವಣೆಯ ನಿರೀಕ್ಷೆಯಲ್ಲಿರುವ KSRTC ನೌಕರರಿಗೆ ಒಂದಿಷ್ಟು ಮಾಹಿತಿ – ವರ್ಗಾವಣೆಗೆ ಅರ್ಜಿ ಸಲ್ಲಿಸಿರುವ,ಸಲ್ಲಿಸುವ ನೌಕರರೇ ಗಮನಿಸಿ
ಕಳೆದ ಹಲವಾರು ವರ್ಷಗಳಿಂದ ಅಂತರ್ ನಿಗಮ ವರ್ಗಾವಣೆಗಾಗಿ ಕಾಯುತ್ತಿದ್ದ KSRTC ನೌಕರರಿಗೆ ಕೊನೆಗೂ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ.ಹೌದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿ ಸುವ ನೌಕರರಿಗೆ ಸಾರಿಗೆ ಇಲಾಖೆಯು ಸಿಹಿ ಸುದ್ದಿಯನ್ನು ನೀಡಿದೆ.
ನಿಗದಿತ ಕಾರ್ಮಿಕರಿಗೆ ಕಳೆದ ಸಾಲಿನ ಅಂತರ ನಿಗಮ ವರ್ಗಾವಣೆ ಪ್ರಕ್ರಿಯೆ ಆರಂಭಿಸಿರುವು ದಾಗಿ ತಿಳಿಸಿದ ಬೆನ್ನಲ್ಲೇ ನಿಗಮದ ದರ್ಜೆ-3 ಮೇಲ್ವಿಚಾರಕೇತರ ಮತ್ತು ದರ್ಜೆ-4 ನೌಕರರ 2023ನೇ ಸಾಲಿನ ಅಂತರ ನಿಗಮ ವರ್ಗಾವಣೆ ಪ್ರಕ್ರಿಯೆ ದಿನಾಂಕ ಜುಲೈ 05 ರ ಬೆಳಗ್ಗೆ 11:00 ಗಂಟೆಯಿಂದ ಪ್ರಾರಂಭವನ್ನು ಮಾಡಲಾಗಿದೆ.
2024 ಡಿಸೆಂಬರ್ 31 ರ ಸಂಜೆ 5:30 ಗಂಟೆವ ರೆಗೆ ಆನ್-ಲೈನ್ ಮೂಲಕ www.ksrtc.org/transfer ರಲ್ಲಿ ಪರಸ್ಪರ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂ.ಮ.ಸಾ.ಸಂಸ್ಥೆ, ಕ.ಕ.ರ.ಸಾ.ಸಂಸ್ಥೆ ಮತ್ತು ವಾ.ಕ.ರ.ಸಾ.ಸಂಸ್ಥೆಗಳ ದರ್ಜೆ-3 ಮೇಲ್ವಿ ಚಾರಕೇತರ ಮತ್ತು ದರ್ಜೆ-4 ರ ನೌಕರರಿಗೆ ಅಂತರ ನಿಗಮ ಪರಸ್ಪರ 958 ನೌಕರರು ಅರ್ಜಿ ಸಲ್ಲಿಸಿದ್ದಾರೆ.
ಈ ಪೈಕಿ 616 ನೌಕರರು ಅವರ ಕೋರಿಕೆ ಮೇರೆಗೆ ಅಂತರ ನಿಗಮ ಪರಸ್ಪರ ವರ್ಗಾವಣೆಗೊಂಡಿ ರುತ್ತಾರೆ.ಸದರಿ ಪರಸ್ಪರ ವರ್ಗಾವಣೆ ಆದೇಶ ವನ್ನು ksrtc.karnataka.gov.in ವೆಬ್‌ಸೈಟ್ ನಲ್ಲಿ ದಿನಾಂಕ 2024 ಜುಲೈ 06 ರಂದು ಪ್ರಕಟಿಸ ಲಾಗಿದೆ.
KSRTC ನೇಮಕಾತಿ: 13000 ಖಾಲಿ ಹುದ್ದೆಗ ಳಿಗೆ ಅರ್ಜಿ ಆಹ್ವಾನ, 7ನೇ ತರಗತಿ ಪಾಸಾದವ ರಿಗೂ ಕೆಲಸ ನೌಕರರಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಸದರಿ ಆದೇಶಕ್ಕೆ ದಿನಾಂಕ ಜುಲೈ 06ರಿಂದ ದಿನಾಂಕ ಜುಲೈ 10ರ ಸಂಜೆ 5.30 ಗಂಟೆವರೆಗೆ ಲಿಖಿತ ಆಕ್ಷೇಪಣೆ ಸಲ್ಲಿಸಲು ನೌಕರರಿಗೆ ಅವಕಾಶ ನೀಡಲಾಗಿದೆ.
ನೌಕರರು ಆಕ್ಷೇಪಣೆಗಳನ್ನು ಕಡ್ಡಾಯವಾಗಿ ಸಂಬಂಧಪಟ್ಟ ವಿಭಾಗದ ಆಡಳಿತಾಧಿಕಾರಿಗಳಿಗೆ ಸಲ್ಲಿಸಿ ಸ್ವೀಕೃತಿ ಪಡೆಯತಕ್ಕದ್ದು.ನೌಕರರು ವೈಯಕ್ತಿ ಕವಾಗಿ ಅಥವಾ ಅಂಚೆಯ ಮೂಲಕ ಕೇಂದ್ರ ಕಛೇರಿಗೆ ಸಲ್ಲಿಸುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಈ ಮೂಲಕ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ (KSRTC)ಯ ಸಾವಿರಾರು ನೌಕರರ ಬಹುದಿನ ಗಳ ಅಂತರ ನಿಗಮ ವರ್ಗಾವಣೆಯ ಕನಸು ನನಸಾಗುವ ದಿನಗಳು ಸನಿಹವಾಗಿವೆ. ಅರ್ಹರು ಈ ಕೂಡಲೇ ನಿಗದಿತ ಸಮಯದೊಳಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..