ಬೆಂಗಳೂರು –
ಮತ್ತೊಂದು ಹೋರಾಟಕ್ಕೆ ರಾಜ್ಯ ಸರ್ಕಾರಿ ನೌಕರರು – 3 ಬೇಡಿಕೆಗಳ ಈಡೇರಿಕೆಗೆ ಆಗ್ರಹ ಜೂನ್ 12 ರಂದು ಮುಖ್ಯಕಾರ್ಯದರ್ಶಿಯವರಿಗೆ ಮನವಿ ಸಲ್ಲಿಕೆ
ಮೂರು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರಿ ನೌಕರರು ಮತ್ತೊಂದು ಹೋರಾಟಕ್ಕೆ ಸಿದ್ದಗೊಂಡಿದ್ದಾರೆ.ಹೌದು 7ನೇ ವೇತನ ಆಯೋಗ ಜಾರಿಗೆ,ಎನ್ ಪಿಎಸ್ ಯೋಜನೆ ರದ್ದುಪಡಿಸಿ ಹಳೆ ಪಿಂಚಣಿ ಯೋಜನೆ ಮರುಜಾರಿಗೆ,ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೆ ಹೀಗೆ ಮೂರು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಜಾರಿಗೆ ಒತ್ತಾಯಿಸಿ ಜೂನ್ 12 ರಂದು ಸಾಂಕೇತಿಕವಾಗಿ ಹೋರಾಟ ನಡೆಯಲಿದೆ.
ಈಗಾಗಲೇ ಕಳೆದ ವಾರವಷ್ಟೇ ರಾಜ್ಯ ಸರ್ಕಾರಿ ನೌಕರರ ರಾಜ್ಯ ಕಾರ್ಯಕಾರಣಿಯಲ್ಲಿ ತಗೆದುಕೊಂಡ ನಿರ್ಣಯದಂತೆ ಈ ಒಂದು ಹೋರಾಟವನ್ನು ಮಾಡ ಲಾಗುತ್ತಿದೆ.ಹೀಗಾಗಿ ರಾಜ್ಯ ಸರ್ಕಾರಿ ನೌಕರರ ಸಂಘಟನೆ ಮತ್ತು ಕರ್ನಾಟಕ ವಿಧಾನಪರಿಷತ್ ಸಚಿವಾಲಯ ನೌಕರರ ಸಂಘ ಮತ್ತು ಕರ್ನಾಟಕ ವಿಧಾನಸಭೆ ಸಚಿವಾಲಯ ಸೌಕರರ ಸಂಘದಿಂದ ಈ ಒಂದು ಹೋರಾಟ ನಡೆಯಲಿದ್ದು
ಬೆಂಗಳೂರಿನ ವಿಕಾಸಸೌಧದ ಗಾಂಧಿ ಪ್ರತಿಮೆ ಮುಂಭಾಗ ದಲ್ಲಿ ಮಧ್ಯಾಹ್ನ 1 ಗಂಟೆ 30 ಕ್ಕೆ ಮೂರು ಸಂಘಟನೆಗಳ ನೇತ್ರತ್ವದಲ್ಲಿ ನೌಕರರು ಸಂಘಟನೆಯ ಮುಖಂಡರು ಹೋರಾಟದೊಂದಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಮನವಿಯನ್ನು ಸಲ್ಲಿಸಲಿ ದ್ದಾರೆ.
ಪ್ರಮುಖವಾಗಿ ಈ ಒಂದು ಹೋರಾಟವು ಸಾಂಕೇತಿಕವಾಗಿದ್ದು ಆರಂಭದಲ್ಲಿ ಮನವಿ ನೀಡುವುದರೊಂದಿಗೆ ರಾಜ್ಯ ಸರ್ಕಾರವನ್ನು ಎಚ್ಚರಿಸಿ ನಂತರ ಅಂತಿಮವಾಗಿ ಹೋರಾಟಕ್ಕೆ ಕರೆ ನೀಡುವ ತೀರ್ಮಾನವನ್ನು ಕೈಗೊಳ್ಳಲಾಗಿದ್ದು ಮನವಿಗೆ ರಾಜ್ಯ ಸರ್ಕಾರ ಸ್ಪಂದಿಸಿದರೆ ಒಳ್ಳೇಯದು ಇಲ್ಲವಾದರೆ ಅನಿವಾರ್ಯವಾಗಿ ಹೋರಾಟವನ್ನು ಮಾಡುತ್ತೇವೆ ಎಂಬ ಎಚ್ಚರಿಕೆಯ ಸಂದೇಶವನ್ನು ಸಂಘಟನೆಯ ಮುಖಂಡರು ಹೇಳಿದ್ದಾರೆ
ಹೀಗಾಗಿ ರಾಜ್ಯ ಸರ್ಕಾರ ಎರಡು ಹಂತದಲ್ಲಿನ ಹೋರಾಟಕ್ಕೆ ಸ್ಪಂದಿಸುತ್ತಾ ಅಥವಾ ಏನಾಗಲಿದೆ ಎಂಬೊದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..