ಬೆಂಗಳೂರು –
ಗೌರವಾನ್ವಿತ ಶಿಕ್ಷಕ ಬಂಧುಗಳೇ…..
ಕರ್ನಾಟಕ ರಾಜ್ಯದ್ಯಂತ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ ನಡೆಯುತ್ತಿದೆ.ವರ್ಗಾವಣೆಗೆ ಸಾವಿರಾರು ಆಕಾಂಕ್ಷಿಗಳು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಆದರೆ PST ವರ್ಗಾವಣಾ ಆಕಾಂಕ್ಷಿಗಳು ನನಗೆ ವರ್ಗಾವಣೆ ಸಿಗುತ್ತದೆ.
ನಾನು ನನ್ನ ಹೆಂಡತಿ ಮಕ್ಕಳೊಂದಿಗೆ ಸೇರಿಕೊ ಳ್ಳಬಹುದು ನನ್ನೂರಿಗೆ ಹೋಗಬಹುದು…
ನಾನು ನನ್ನ ಗಂಡ or ನಾನು ನನ್ನ ಹೆಂಡತಿ 10, 15, 20 ವರ್ಷಗಳಿಂದ ಒಟ್ಟಿಗೆ ಸಹಜೀವನ ಮಾಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಬದುಕಿ ದ್ದೇವೆ.ಮಕ್ಕಳ ದೃಷ್ಟಿಯಿಂದ ಬೋಧನೆ ಮಾಡಿ ದ್ದೇವೆ ಎಂದು ಆಶಾಭಾವನೆಯಿಂದ ಕಾಯು ತ್ತಿದ್ದಾರೆ.
ದುರಂತವೆಂದರೆ PST – GPT ಎಂಬ ಭಯೋ ತ್ಪಾದಕ ಶಬ್ದಗಳು ನಮ್ಮನ್ನು ಬೆಚ್ಚಿ ಬೀಳಿಸಿವೆ ಜಸ್ಟ್ ಒಂದು ತಾಲೂಕಿನ ವಿವರಣೆಯನ್ನು ಕೊಡುತ್ತೇನೆ ವರ್ಗಾವಣೆಗಾಗಿ ಖಾಲಿ ಇರುವ ಹುದ್ದೆಗಳು 101.ಅದರಲ್ಲಿ PST ಶಿಕ್ಷಕರಗಾಗಿ ತೆರವುಗೊಳ್ಳುವ ಹುದ್ದೆಗಳು ಕೇವಲ 6 ಮಾತ್ರ
ಇನ್ನುಳಿದ 95 ಹುದ್ದೆಗಳು GPT..GPT..GPT
ನಾಳೆ ಕೌನ್ಸಿಲಿಂಗ್ ನಲ್ಲಿ ಭಾಗವಹಿಸುವ ಅದೆಷ್ಟು ದೂರ ದೂರದ ಊರಿಂದ ಬಂದು ಈ ಸಾರಿ ಯಾದರು ನಾನು ನನ್ನ ಕುಟುಂಬ ಒಟ್ಟಿಗೆ ಸೇರುತ್ತೇವೆ ಎಂಬ ಕನವರಿಕೆಯ ಕನಸಿನಲ್ಲಿ ಸ್ಥಳ ಆಯ್ಕೆ ಮಾಡಿಕೊಳ್ಳಲು ಕುಳಿತರೆ
GPT.. GPT.. GPT ಎಂದು ಗಣಕಯಂತ್ರ ತೋರಿಸಿದರೆ 25, 30 ವರ್ಷಗಳ ಕಾಲ ಸುಧೀರ್ಘ ಸೇವೆ ಮಾಡಿ ಯಾವುದೋ ಮೂಲೆಯಲ್ಲಿ ವೃತ್ತಿ ಧರ್ಮವನ್ನು ಪಾಲಿಸಿ ಕೊಂಡು ಬಂದ ಪ್ರಾಥಮಿಕ ಶಿಕ್ಷಕ ಶಿಕ್ಷಕಿಯ ಮನಸ್ಥಿತಿ ಹೇಗಿರುತ್ತದೆ ಎಂದು ಇಲಾಖೆ ಅಧಿಕಾರಿಗಳಿಗೆ ಆಗಲಿ ನಿಯಮವನ್ನು ಮಾಡಿದ ಮಹಾಶಯರಿಗಾಗಲಿ ಅರ್ಥವಾಗುವುದಿಲ್ಲ.
ಸಾಧ್ಯವಾದರೆ ನಾಳೆ ಎಲ್ಲಾ ನೊಂದ ಶಿಕ್ಷಕರು ಅನ್ಯಾಯ ಅನ್ಯಾಯ ಪದವೀಧರ ಪ್ರಾಥಮಿಕ ಶಿಕ್ಷಕರಿಗೆ ಅನ್ಯಾಯ ಎಂಬ ನಾಮಫಲಕವನ್ನು ಹಿಡಿದುಕೊಂಡು ಕೌನ್ಸಿಲಿಂಗ್ ಗೆ ಬನ್ನಿ ವರ್ಗಾ ವಣೆಗೆ ಅರ್ಜಿ ಹಾಕಿದವರೆಲ್ಲರಿಗೂ ಬಹುತೇಕ ಸ್ಥಳಾವಕಾಶ ಸಿಗುತ್ತದೆ.
ಮಲಗಿದರೆ ನಿದ್ರೆ ಬರುತ್ತದೆ ಎದ್ದೇಳಿ ನಿಮಗಾ ಗಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಿ ಬಂಧುಗಳೇ.ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸದಸ್ಯನಾಗಿ ಸಂಘದ ಬಗ್ಗೆ ಅಪಾರವಾದ ಗೌರವವಿದೆ. ಸಂಘ ಕಟ್ಟಿದವರ ಬಗ್ಗೆ ಗೌರವಿದೆ. ಸಂಘ ಅನೇಕ ಹೋರಾಟಗಳನ್ನ ಸಾಧನೆಗಳನ್ನ ಸೌಲಭ್ಯಗಳನ್ನ ಕೊಡಿಸಿದೆ. ಇವೆಲ್ಲವನ್ನೂ ನಾವು ಅಲ್ಲಗಳತ್ತಿಲ್ಲ.
ಒಬ್ಬ ಸಂಘದ ಮನುಷ್ಯನಾಗಿ ಸಂಘದ ಹೋರಾಟ ಹೇಗಿರಬೇಕೆಂದು ನನ್ನದೊಂದು ಸಣ್ಣ ಮನವಿ.ನನಗಿರುವ ಮಾಹಿತಿ ಪ್ರಕಾರ 29 / 7 / 24 ರಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ನನ್ನ ಆತ್ಮೀಯ ಸ್ನೇಹಿತರು..
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯಕಾರಿ ಸಮಿತಿ ಸಭೆಯನ್ನು ಬೆಂಗಳೂರಿನಲ್ಲಿ ಕರೆದಿರುತ್ತಾರೆ.* ಅದರಲ್ಲಿ ಪ್ರಮುಖವಾಗಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ C & R ನಲ್ಲಿರುವ ಸಮಸ್ಯೆ ಬಗ್ಗೆ ಗಂಭೀರವಾಗಿ ಚರ್ಚಿಸಲು ಸಭೆ ಕರೆದಿರುವುದು ಸ್ವಾಗತ.
ಪ್ರಾಥಮಿಕ ಶಾಲಾ ಶಿಕ್ಷಕರ ಭರ್ತಿ C & R ಸಮಸ್ಯೆ, ಪ್ರೌಢಶಾಲೆಗೆ ಬಡ್ತಿ ಸಮಸ್ಯೆ, PST ಶಿಕ್ಷಕರ ಸಮಸ್ಯೆ ಈ ಬಗ್ಗೆ ಗಂಭೀರವಾಗಿ ಚರ್ಚೆ ಮಾಡಿ ಮುಖ್ಯಮಂತ್ರಿಗಳಿಗೆ ಸಂಬಂಧಪಟ್ಟ ಎಲ್ಲಾ ಮಂತ್ರಿ ಮಹೋದಯರಿಗೆ ಎಲ್ಲಾ ಶಾಸಕರಿಗೆ, ಸಂಘಕ್ಕೆ ಆಯ್ಕೆ ಆಗಿರುವಂತಹ ಅಧ್ಯಕ್ಷ ಮತ್ತು ಪದಾಧಿಕಾರಿಗಳು ನಮ್ಮ ಸಮಸ್ಯೆ ಗಂಭೀರವಾಗಿ ಚಿಂತಿಸಿ ತೀರ್ಮಾನ ತೆಗೆದುಕೊಳ್ಳದಿದ್ದರೆ.
ನಮ್ಮ ಮುಂದಿನ ಹೋರಾಟ ಕರ್ನಾಟಕ ರಾಜ್ಯಾದ್ಯಂತ ಸರ್ಕಾರಿ ಶಾಲೆಗಳನ್ನು ಬಂದು ಮಾಡಿ ವಿಧಾನಸಭೆಯ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಒಂದು ನಿರ್ಣ ಯವನ್ನು ಮಾಡಿ ಸರ್ಕಾರಕ್ಕೆ ಸಲ್ಲಿಸಿದ್ದರೆ ಗಂಡ ಹೆಂಡತಿಯಿಂದ.ಹೆಂಡತಿ ಮಕ್ಕಳಿಂದ ದೂರ ವಾಗಿರುವ ಅನೇಕ ಕುಟುಂಬಗಳು ಒಂದು ಕಡೆ ಸೇರುತ್ತಿದ್ದೇವು.
ಪ್ಲೀಸ್ ನನ್ನ ಸಂಘದ ಎಲ್ಲಾ ರಾಜ್ಯದ ಪದಾಧಿ ಕಾರಿಗಳೇ.ಜಿಲ್ಲಾ ಮತ್ತು ತಾಲೂಕು ಮಟ್ಟದ ಪದಾಧಿಕಾರಿಗಳೇ.ನಾನೊಬ್ಬ ಸಂಘದ ಸಾಮಾನ್ಯ ಸದಸ್ಯನಾಗಿ ನಿಮ್ಮಲ್ಲಿ ಕಳಕಳಿ ಮನವಿ ಈಗಲೂ 24 ಗಂಟೆ ಸಮಯವಿದೆ ತುರ್ತುಸಭೆ ಕರೆದು ಒನ್ ಲೈನ್ ಅಜೆಂಡ ಮಾಡಿ ಸರ್ಕಾರಕ್ಕೆ ರವಾನಿಸಿ.
1.2 ಲಕ್ಷ ಶಿಕ್ಷಕರ ಸಮಸ್ಯೆಗೆ 24 ಗಂಟೆಯಲ್ಲಿ ಬಗೆಹರಿಸುವ ಶಕ್ತಿ ಸಾಮರ್ಥ್ಯ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಇದೆ. ಅದರ ನೇತೃತ್ವವಹಿಸ ತಕ್ಕಂತಹ ರಾಜ್ಯದ ಅಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು ರಾಜ್ಯದ ಸಮಸ್ತ ಜಿಲ್ಲಾ ಮತ್ತು ತಾಲೂಕು ಘಟಕಗಳ ಪದಾಧಿಕಾರಿಗಳಿಗೆ ಇದೆ ಎನ್ನುವ ಇಚ್ಛಾಶಕ್ತಿಯ ಮಾತುಗಳನ್ನು ನಿಮ್ಮ ಮುಂದೆ ಹಂಚಿಕೊಂಡಿದ್ದೇನೆ.
ಕೌನ್ಸಿಲಿಂಗ್ ಅನ್ನು ತಾತ್ಕಾಲಿಕವಾಗಿ ಮುಂದೂ ಡಿಸಿ. ಖಾಲಿ ಇರುವ ಎಲ್ಲಾ GPT ಹುದ್ದೆಗಳನ್ನು PST ಶಿಕ್ಷಕರಿಗೆ ತೆರವುಗೊಳಿಸುತ್ತಿರೆಂಬ ಅಗಾಧ ವಿಶ್ವಾಸದಿಂದ ನಿಮಗೆ ಗೌರವಪೂರ್ಣವಾಗಿ ಕೈ ಮುಗಿದು ಬೇಡಿಕೊಳ್ಳುತ್ತಿದ್ದೆನೆ.*
ಸುಂದರೇಶ್. B. N.
ಮಾಜಿ ಜಿಲ್ಲಾಧ್ಯಕ್ಷರು, ಹಾಲಿ ನಿರ್ದೇಶಕರು,
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ
ಚಿಕ್ಕಮಗಳೂರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು……