ರಾಯಚೂರು –
ಸ್ಲಮ್ ಗಳ ಅಭಿವೃದ್ಧಿಗೆ ಬದ್ಧ ಪ್ರಸಾದ ಅಬ್ಬಯ್ಯ ಹೌದು ಹಿಂದುಳಿದಿರುವ ಕೊಳಚೆ ಪ್ರದೇಶದ ಜನರಿಗೆ ಇಲಾಖೆಗಳಿಂದ ಸಿಗಬೇಕಾದ ಸೌಲಭ್ಯ ದೊರಕಿಸಿಕೊಡುವಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಪ್ರಸಾದ ಅಬ್ಬಯ್ಯ ಹೇಳಿದರು.
ಕಲ್ಯಾಣ ಕರ್ನಾಟಕ ಭಾಗವಾದ ಸಿಂಧನೂರು, ಮಾನ್ವಿ, ರಾಯಚೂರಿನಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ನಡೆದಿರುವ ಅಭಿವೃದ್ಧಿ ಕಾಮಗಾರಿಗಳ ಪರಿವೀಕ್ಷಣೆ ಮಾಡಿ, ಸ್ಲಮ್ ನಿವಾಸಿಗಳ ಅಹವಾಲು ಸ್ವೀಕರಿಸಿ ಮಾತನಾಡಿದರು.
ರಾಜ್ಯದಲ್ಲಿರುವ ಸ್ಲಮ್ ಗಳ ಮೂಲಸೌಕರ್ಯ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಿದೆ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ಕೊಳಗೇರಿ ಅಭಿವೃದ್ಧಿ ಮಂಡಳಿಗೆ 500ಕೋಟಿ ರೂ. ಅನುದಾನ ಬಿಡುಗಡೆ ಮಾಡುವ ಮೂಲಕ ಬದ್ಧತೆ ಮೆರೆದಿದೆ.
ಇನ್ನೂ ಎಲ್ಲೆಡೆ ಮನೆಗಳ ಹಕ್ಕುಪತ್ರದ ಬೇಡಿಕೆ ಹೆಚ್ಚಿದೆ ರಾಜ್ಯದ ಘೋಷಿತ ಸ್ಲಂಗಳ ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ವಿತರಿ ಸಲು ಕ್ರಮ ವಹಿಸಲಾಗಿದೆ. ಅಧಿಕಾರಿಗಳು ರಾಜ್ಯದ ಸ್ಲಂಗಳ ಸಮೀಕ್ಷೆ ಪೂರ್ಣಗೊಳಿಸಿದ ಬಳಿಕ ಹಂತ ಹಂತವಾಗಿ ಹಕ್ಕುಪತ್ರಗಳನ್ನು ವಿತರಣೆ ಮಾಡಲಾಗುವುದು ಎಂದು ಹೇಳಿದರು.
ಅಧಿಕಾರಿಗಳಿಗೆ ತರಾಟೆ
ಸಿಂಧನೂರು ಪಟ್ಟಣದ ಇಂದಿರಾ ನಗರದಲ್ಲಿ ಹೌಸಿಂಗ್ ಫಾರ್ ಆಲ್ ಯೋಜನೆಯಡಿ ನಿರ್ಮಿಸಲಾಗುತ್ತಿರುವ ಮನೆಗಳ ಕಾಮಗಾರಿ ವೀಕ್ಷಣೆ ವೇಳೆ ಸ್ಲಮ್ ಬೋರ್ಡ್ ಅಧಿಕಾರಿಗಳು ಸರ್ಕಾರದಿಂದ ದೊರೆಯಬೇಕಿದ್ದ ನಿಗದಿತ ಅನುದಾನ ನೀಡುತ್ತಿಲ್ಲ ಕಾಮಗಾರಿಗೆ ಸಮರ್ಪ. ಕವಾಗಿ ಸ್ಪಂದಿಸುತ್ತಿಲ್ಲ ಎಂದು ಫಲಾನುಭವಿ ಅಧ್ಯಕ್ಷರಿಗೆ ದೂರು ಸಲ್ಲಿಸಿದರು.
ದೂರು ಆಲಿಸಿದ ಪ್ರಸಾದ ಅಬ್ಬಯ್ಯ ಅವರು ಬಡವರ ಏಳಿಗೆಗಾಗಿ ಸರ್ಕಾರ ಅನುದಾನ ನೀಡುತ್ತದೆ. ಅದನ್ನು ಫಲಾನುಭವಿಗೆ ತಲುಪಿಸಿ ಯೋಜನೆ ಯಶಸ್ಸಿಗೆ ಶ್ರಮಿಸಬೇಕು. ಬಡವರ ದುಡ್ಡುತಿಂದರೆ ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಮತ್ತು ವಿಜ್ಞಾನ ತಂತ್ರಜ್ಞಾನ ಸಚಿವರಾದ ಎನ್.ಎಸ್. ಬೋಸರಾಜು, ಸ್ಲಮ್ ಬೋರ್ಡ್ ಆಯುಕ್ತರಾದ ಅಶೋಕ, ಆಪ್ತ ಕಾರ್ಯದರ್ಶಿ ಮುನಿರಾಜು ಸ್ಲಮ್ ಬೋರ್ಡ್ ಅಧಿಕಾರಿಗಳು ಸೇರಿದಂತೆ ಅನೇಕರಿದ್ದರು.
ಸುದ್ದಿ ಸಂತೆ ನ್ಯೂಸ್ ರಾಯಚೂರು…..