ಮುನವಳ್ಳಿ –
ಮುನವಳ್ಳಿ ಪಟ್ಟಣದಲ್ಲಿ ನೂತನ ಇಂದಿರಾ ಕ್ಯಾಂಟೀನ್ ಗೆ ಭೂಮಿ ಪೂಜೆ ಮಾಡಿದ ಶಾಸಕ ವಿಶ್ವಾಸ ವೈಧ್ಯ – ಪಟ್ಟಣದ ಜನತೆಯ ಬದುದಿನದ ಬೇಡಿಕೆ ಈಡೇರಿಸಿದ ಶಾಸಕರು…..ಶಾಸಕರಿಗೆ ಸಾಥ್ ನೀಡಿದ ಅಂಬರೀಶ ಯಲಿಗಾರ ಮತ್ತು ಪುರಸಭೆಯ ಸದಸ್ಯರು ಹೌದು
ನೂತನ ಇಂದಿರಾ ಕ್ಯಾಂಟೀನ್ ಕಾಮಗಾರಿಗೆ ಮುನವಳ್ಳಿಯಲ್ಲಿ ಶಾಸಕ ವಿಶ್ವಾಸ್ ವೈಧ್ಯ ಭೂಮಿ ಪೂಜೆಯನ್ನು ಮಾಡಿದರು.ಸವದತ್ತಿ ವಿಧಾನ ಸಭಾ ಕ್ಷೇತ್ರದಲ್ಲಿ ಮುನವಳ್ಳಿ ಪಟ್ಟಣವು ಅತಿ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ಪಟ್ಟಣ ವಾಗಿದ್ದು ಈ ಒಂದು ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ಆರಂಭ ಕುರಿತಂತೆ ನಿವಾಸಿಗಳು ಶಾಸಕರಿಗೆ ಮನವಿಯನ್ನು ಮಾಡಿಕೊಂಡಿದ್ದರು.
ಜನರ ಮನವಿಗೆ ಸ್ಪಂದಿಸಿದ ಶಾಸಕ ವಿಶ್ವಾಸ ವೈಧ್ಯ 87 ಲಕ್ಷ ಕಾಮಗಾರಿಯ ಭೂಮಿ ಪೂಜೆ ಯನ್ನು ಮಾಡಿದರು.ಮುನವಳ್ಳಿ ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ನೂತನ ಇಂದಿರಾ ಕ್ಯಾಂಟೀನ್ ನ ಕಾಮಗಾರಿ ಭೂಮಿ ಪೂಜೆಯನ್ನು ಮಾಡಿದರು.ಇದೇ ವೇಳೆ ಅತೀ ಶೀಘ್ರದಲ್ಲಿಯೇ ಕಟ್ಟಡ ಕಾಮಗಾರಿ ಮುಗಿಸಲು ಗುತ್ತಿಗೆದಾರರಿಗೆ ಶಾಸಕರು ತಿಳಿಸಿ ಇಂದಿರಾ ಕ್ಯಾಂಟೀನ್ ತೆರೆದು ಬಡವರ ಹಸಿವು ನೀಗಿಸಲು ಅನುಕೂಲ ಮಾಡಿಕೊಡುತ್ತೇವೆ ಎಂದು ಶಾಸಕರು ಹೇಳಿದರು.
ಈ ಸಂಧರ್ಭದಲ್ಲಿ ಅಧಿಕಾರಿಗಳೊಂದಿಗೆ ಪುರಸಭೆ ಸದಸ್ಯರು,ಕಾರ್ಯಕರ್ತರು ಪಟ್ಟಣದ ಅಂಬರೇಶ ಯಲಿಗಾರ,ಕಲ್ಲಪ್ಪ ಕಿತ್ತೂರು,ನಾಗಪ್ಪ ಕಾಮನ್ನವರ,ಉಮೇಶ ಬಾಳಿ,ಎಮ್ ಆರ್ ಗೋಬಶೆಟ್ಟಿ,ಚಂದ್ರು ಜಂಬ್ರಿ,ರಿಯಾಜ್ ಹಡಗಲಿ, ಡಿ ಡಿ ಟೋಪಜಿ,ಬಸವರಾಜ ದೊಡಮನಿ, ಸಿಂಗಯ್ಯ ಹಿರೇಮಠ,ಪಂಚು ತಳವಾರ,ಪ್ರಸಾದ್
ವಿರಪಯ್ಯನವರಮಠ,ಎಮ್ ಬಿ ಬ್ಯಾಳಿ, ಫಕೀರಪ್ಪ ಹದ್ದನ್ನವರ,ಭೀಮಪ್ಪ ಚಿಂಚನೂರು,ಡಿ ಡಿ ಕಿನ್ನೂರಿ,ಶ್ರೀಶೈಲ ನೇಗಿನಾಳ,ಸೇರಿದಂತೆ ಹಲ ವರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಮುನವಳ್ಳಿ…..