ಮುಧೋಳ –
ರಾಜ್ಯದ ನೆರೆ ಪೀಡಿತ ಪ್ರದೇಶಗಳಿಗೆ ಶಾಸಕ ಅರವಿಂದ ಬೆಲ್ಲದ ಭೇಟಿ ನೀಡಿ ಪರಿಶೀಲನೆ ಮಾಡಿದರು ಹೌದು ಅತಿಯಾದ ಮಳೆಯಿಂದಾಗಿ ಪ್ರವಾಹ ಉಂಟಾಗಿ ಮುಧೋಳ ತಾಲೂಕಿನ ಚಿಚಗಂಡೆ ಮೇಲ್ಸೆತುವೆ ಮುಳುಗಡೆಯಾಗಿದ್ದು ಹಾಗೂ ಮುಧೋಳದಿಂದ ಯಾದವಾಡಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯೂ ಸಹ ಪ್ರವಾಹ ದಿಂದ ಸಂಪೂರ್ಣ ಜಲಾವೃತವಾಗಿದೆ ಇಪತ್ತಕ್ಕಿಂತ ಹೆಚ್ಚಿನ ಹಳ್ಳಿಗಳಿಗೆ ಸಂಚಾರಕ್ಕೆ ಅಸ್ತವ್ಯಸ್ಥವಾ ಗಿದ್ದು ಜನಸಂಚಾರ ತೀರಾ ಕಷ್ಟಕರವಾಗಿರುವು ದರಿಂದ ಇಂದು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು
ಈ ಸಂದರ್ಭದಲ್ಲಿ ಸಂಸದರಾದ ಪಿ.ಸಿ ಗದ್ಧಿಗೌಡರ್ ,ಶಾಸಕರಾದ ಜಗದೀಶ ಗುಡಗುಂಟಿ, ಜಿಲ್ಲಾಧ್ಯಕ್ಷರಾದ ಶಾಂತಗೌಡ ಪಾಟೀಲ್, ಮುಖಂಡರಾದ ಅರುಣ್ ಕಾರಜೋಳ್, ಜೆಡಿಎಸ್ ಜಿಲ್ಲಾಧ್ಯಕ್ಷರಾದ ಮಾವಿನಮರದ, ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಉಪಾಧ್ಯಾಯ ಸೇರಿದಂತೆ ಇನ್ನಿತರ ಪಕ್ಷದ ಪ್ರಮುಖರು ಇದ್ದರು.
ಸುದ್ದಿ ಸಂತೆ ನ್ಯೂಸ್ ಮುಧೋಳ…..