ಇಂಡಿ –
ಭಡ್ತಿ ಯಲ್ಲಿ ಆಗುತ್ತಿರುವ ಅನ್ಯಾಯದ ಕುರಿತು ಆಗಸ್ಟ್ 12 ರಿಂದ ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಬೆಂಗಳೂರು ಚಲೋ ನಡೆಯಲಿದೆ ಈ ಒಂದು ಬೃಹತ್ ಮಟ್ಟದ ಹೋರಾಟಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಶಿಕ್ಷಕರು ಸಜ್ಜಾಗುತ್ತಿದ್ದು ಇತ್ತ ಇಂಡಿ ತಾಲೂಕಾ ಶಿಕ್ಷಕರು ಕೂಡಾ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಗಿದ್ದಾರೆ.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರು ನೇತೃತ್ವದಲ್ಲಿ ಈ ಒಂದು ಹೋರಾಟವು ನಡೆಯಲಿದ್ದು ಇತ್ತ ಇಂಡಿ ತಾಲೂಕ ಘಟಕದಿಂದಲೂ ತಾಲ್ಲೂಕಿನ ಮತ್ತು ಜಿಲ್ಲೆಯ ಶಿಕ್ಷಕರು ನಮ್ಮ ನಡೆ ಬೆಂಗಳೂರು ಕಡೆ ಎನ್ನುತ್ತಾ ಸಿದ್ದರಾಗಿದ್ದಾರೆ
ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಎಲ್ಲಾ ಪದಾಧಿಕಾರಿಗಳೊಂದಿಗೆ ನಿಂಬಾಳ ಮತ್ತು ತಡವಲಗಾ ಕ್ಲಸ್ಟರಿನ ವಿವಿಧ ಶಾಲೆಗಳಿಗೆ ತೆರಳಿ ಇದೆ ಅಗಸ್ಟ್ 5 ರಂದು ನಮ್ಮ ಕ್ಷೇತ್ರದ ಶಾಸಕರಿಗೆ ತಹಶೀಲ್ದಾರರಿಗೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಗಳಿಗೆ ಆಗಸ್ಟ್ 7 ರಂದು ಉಸ್ತುವಾರಿ ಸಚಿವರಿಗೆ, ಜಿಲ್ಲಾಧಿಕಾರಿಗಳಿಗೆ,
ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಣ ಅಧಿಕಾರಿಗಳಿಗೆ ಹಾಗೂ ಉಪನಿರ್ದೇಶಕರಿಗೆ ಆಗಸ್ಟ 12 ರಂದು ನಡೆಯುವ ಬೃಹತ್ ಮಟ್ಟದ ಹೋರಾಟದ ರೂಪರೇಷೆಗಳನ್ನು ಶಿಕ್ಷಕರಿಗೆ ತಿಳಿಸಿ ಎಲ್ಲ ಶಿಕ್ಷಕರು 5 ರಂದು ತಾಲೂಕಿನಲ್ಲಿ 7 ರಂದು ವಿಜಯಪುರದಲ್ಲಿ, 12 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ಹೋರಾಟಕ್ಕೆ ಬರಲು ಪ್ರೇರೆಪಿ ಸಲಾಯಿತು.
ಸುದ್ದಿ ಸಂತೆ ನ್ಯೂಸ್ ಇಂಡಿ……