This is the title of the web page
This is the title of the web page

Live Stream

[ytplayer id=’1198′]

December 2024
T F S S M T W
 1234
567891011
12131415161718
19202122232425
262728293031  

| Latest Version 8.0.1 |

State News

ಮನೆ ಬಾಗಿಲಿಗೆ ನಗದು ರಹಿತ ನೀರಿನ ಪಾವತಿ ವ್ಯವಸ್ಥೆಯನ್ನು ಜಾರಿಗೊಳಿಸಿದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ – ನೂತನ ಯಂತ್ರವನ್ನು ಬಿಡುಗಡೆ ಮಾಡಿದ KUIDFC ನಿರ್ದೇಶಕ ಶರತ್‌ ಬಿ ಮತ್ತು ಪಾಲಿಕೆ ಆಯುಕ್ತ ಡಾ ಈಶ್ವರ ಉಳ್ಳಾಗಡ್ಡಿ…..

ಮನೆ ಬಾಗಿಲಿಗೆ ನಗದು ರಹಿತ ನೀರಿನ ಪಾವತಿ ವ್ಯವಸ್ಥೆಯನ್ನು ಜಾರಿಗೊಳಿಸಿದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ – ನೂತನ ಯಂತ್ರವನ್ನು ಬಿಡುಗಡೆ ಮಾಡಿದ KUIDFC ನಿರ್ದೇಶಕ ಶರತ್‌ ಬಿ ಮತ್ತು ಪಾಲಿಕೆ ಆಯುಕ್ತ ಡಾ ಈಶ್ವರ ಉಳ್ಳಾಗಡ್ಡಿ…..
WhatsApp Group Join Now
Telegram Group Join Now

ಹುಬ್ಬಳ್ಳಿ

ಮನೆ ಬಾಗಿಲಿಗೆ ನಗದು ರಹಿತ ನೀರಿನ ಪಾವತಿ ವ್ಯವಸ್ಥೆಯನ್ನು ಜಾರಿಗೊಳಿಸಿದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ – ನೂತನ ಯಂತ್ರವನ್ನು ಬಿಡುಗಡೆ ಮಾಡಿದ KUIDFC ನಿರ್ದೇಶಕ ಶರತ್‌ ಬಿ ಮತ್ತು ಪಾಲಿಕೆ ಆಯುಕ್ತ ಡಾ ಈಶ್ವರ ಉಳ್ಳಾಗಡ್ಡಿ ಹೌದು

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಅವಳಿ ನಗರದ ಜನತೆಗೆ ಹೊಸದೊಂದು ಯೋಜನೆ ಯನ್ನು ಜಾರಿಗೊಳಿಸಿದೆ ಹೌದು ಬದಲಾದ ವ್ಯವಸ್ಥೆ ಮತ್ತು ತಂತ್ರಜ್ಞಾನವನ್ನು ಉಪಯೋಗ ಮಾಡಿಕೊಂಡ ಪಾಲಿಕೆಯ ಆಯುಕ್ತ ಡಾ ಈಶ್ವರ ಉಳ್ಳಾಗಡ್ಡಿಯವರ ಪ್ರಯತ್ನದಿಂದಾಗಿ ಸಧ್ಯ ನಗದು ರಹಿತ ನೀರಿನ ಬಿಲ್ ಪಾವತಿ ವ್ಯವಸ್ಥೆ ಯನ್ನು ಜಾರಿಗೆ ತರಲಾಯಿತು.

ಇದರೊಂದಿಗೆ ಇನ್ನೂ ಮುಂದೆ ನೀರಿನ ಬಿಲ್ ಕೊಡುವಾಗ ಮನೆ ಬಾಗಿಲಿಗೆ ಬಂದವರ ಬಳಿಯೇ ನೀವು ಪಾವತಿಯನ್ನು ಮಾಡಬ ಹುದು.ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ಮನೆ ಬಾಗಿಲಿಗೆ ಈ ಒಂದು ನೂತನ ವ್ಯವಸ್ಥೆ ಜಾರಿಗೆ ಬರಲಿದ್ದು ನೂತನ ತಂತ್ರಜ್ಞಾನದ ನಗದು ರಹಿತ ನೀರಿನ ಬಿಲ್ ಪಾವತಿ ಯಂತ್ರವನ್ನು ಬಿಡುಗಡೆ ಮಾಡಲಾ ಯಿತು.

ಇದರೊಂದಿಗೆ ಅವಳಿ ನಗರದ ಜನತೆಗೆ ಹೊಸ ದೊಂದು ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ ಪಾಲಿಕೆಯ ಆಯುಕ್ತ ಡಾ ಈಶ್ವರ ಉಳ್ಳಾಗಡ್ಡಿ ಯವರು.
ಅವಳಿನಗರದ ಜನತೆಗೆ ಮನೆಬಾಗಿಲಲ್ಲಿ ನಗದು ರಹಿತವಾಗಿ ನೀರಿನ ಬಿಲ್‌ ಪಾವತಿಸಲು ಅನು ಕೂಲವಾಗುವಂತೆ ಮಹಾನಗರ ಪಾಲಿಕೆ ಮತ್ತು ಕೆಯುಐಡಿಎಫ್‌ಸಿ ನೂತನ ತಂತ್ರಜ್ಞಾನದ ಪಿಒಎಸ್‌(ಪಾಯಿಂಟ್‌ ಆಫ್‌ ಸೇಲ್‌) ಸ್ವೈಪಿಂಗ್‌ ಮಷಿನ್‌ ಪರಿಚಯಿಸಿದೆ.

ನಗರದ ಐಟಿ ಪಾರ್ಕ್‌ನಲ್ಲಿರುವ ಕೆಯುಐಡಿ ಎಫ್‌ಸಿ ಸಭಾಂಗಣದಲ್ಲಿ ಕೆಯುಐಡಿಎಫ್‌ಸಿ ನಿರ್ದೇಶಕ ಶರತ್‌ ಬಿ ಹಾಗೂ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಸ್ವೈಪಿಂಗ್‌ ಮಷಿನ್‌ ಗಳನ್ನು ಬಿಡುಗಡೆ ಮಾಡಿದರು. ಗ್ರಾಹಕರು ಡೆಬಿಟ್‌, ಕ್ರೆಡಿಟ್‌ ಕಾರ್ಡ್ ಅಥವಾ ಕ್ಯೂಆರ್‌ ಕೋಡ್‌ ಬಳಸಿ ಹಣ ಪಾವತಿಸಬಹುದು.

ಹಣ ಪಾವತಿಯಾದ ತಕ್ಷಣ ರಶೀದಿ ದೊರೆ ಯುತ್ತದೆ. ಆರ್‌ಆರ್‌ ನಂಬರ್‌ಗೆ ಮೊಬೈಲ್‌ ನಂಬರ್‌ ಜೋಡಣೆಯಾಗಿದ್ದರೆ, ಹಣ ಪಾವತಿಯಾಗಿರುವ ಸಂದೇಶ ಮೊಬೈಲ್‌ಗೆ ರವಾನೆಯಾಗುತ್ತದೆ. ಸಿಬ್ಬಂದಿ ಗ್ರಾಹಕರ ಮನೆ ಬಾಗಿಲಿಗೆ ತೆರಳಿ ಹಣ ಪಾವತಿಸಿಕೊಳ್ಳುವುದ ರಿಂದ ಗ್ರಾಹಕರ ಸಮಯ ಉಳಿತಾಯವಾಗುತ್ತದೆ

ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ, ಕೆಯುಐಡಿಎಫ್‌ಸಿ ನಿರ್ದೇಶಕ ಶರತ್‌ ಬಿ ಅವರೊಂದಿಗೆ ಈ ಒಂದು ಸಂದರ್ಭದಲ್ಲಿ ಉಪಸ್ಥಿತರಿದ್ದರು.ಇನ್ನೂ ಇದೇ ವೇಳೆ ನಗರದಲ್ಲಿ ಸ್ಮಾರ್ಟ್ ಸಿಟಿ ಇಲಾಖೆಯಿಂದ ಕೈಗೊಂಡ ಕಾಮಗಾರಿಗಳನ್ನು ಪರಿಶೀಲಿಸಲಾ ಯಿತು.

ತೋಳನಕೆರೆ ಉದ್ಯಾನ ಅಭಿವೃದ್ಧಿ, ಹಳೇ ಬಸ್‌ ನಿಲ್ದಾಣ, ಚಿಟಗುಪ್ಪಿ ಆಸ್ಪತ್ರೆಗೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ನೀರಸಾಗರ ಜಲಾಶಯ, ದುಮ್ಮುವಾಡ ಪಂಪ್‌ಹೌಸ್‌, ಕಣವಿಹೊನ್ನಾಪುರ ಜಲ ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಾಯಿತು.

ಇದೇ ವೇಳೆ ದೇಸಾಯಿ ಕ್ರಾಸ್‌ ಬಳಿಯ ಪಂಪ್‌ಲೈನ್‌ ಕಾಮಗಾರಿ ಪರಿಶೀಲಿಸಿ ನಿರಂತರ ನೀರು ಪೂರೈಕೆಯಲ್ಲಾಗುತ್ತಿರುವ ಸಮಸ್ಯೆಗಳ ಬಗ್ಗೆಯೂ ಮಾಹಿತಿ ಪಡೆದರು.ಒಟ್ಟಾರೆ ಕೊನೆಗೂ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರು ಅವಳಿ ನಗರದ ಜನತೆಗೆ ಹೊಸ ದೊಂದು ವ್ಯವಸ್ಥೆಯನ್ನು ನೀಡಿದ್ದು

ನೀರಿನ ಬಿಲ್ ಪಾವತಿ ಮಾಡೊದಕ್ಕಿಂತ ಸರದಿ ಸಾಲಿನಲ್ಲಿ ನಿಂತುಕೊಂಡು ಪಾವತಿ ಮಾಡೊದು ದೊಡ್ಡ ತಲೆನೋವಿನ ಕೆಲಸವಾಗಿತ್ತು ಹೀಗಾಗಿ ಸಧ್ಯ ಈ ಒಂದು ಸಮಸ್ಯೆಗೆ ಡಾ ಈಶ್ವರ ಉಳ್ಳಾಗಡ್ಡಿಯವರು ಮುಕ್ತಿ ನೀಡಿ ಅವಳಿ ನಗರದ ಜನತೆಗೆ ಗುಡ್ ನ್ಯೂಸ್ ನೀಡಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..


Google News

 

 

WhatsApp Group Join Now
Telegram Group Join Now
Suddi Sante Desk