ಹುಬ್ಬಳ್ಳಿ ಧಾರವಾಡ –
ಮೊದಲು ಎಲ್ಲಾ ಸೌಲಭ್ಯ ಕೊಡ್ರಿ ಆ ಮೇಲೆ ಡ್ರೈವರ್ ರನ್ನು SP ಮಾಡಿ – DC ಯವರ ಅಮಾನತು ಶಿಕ್ಷೆಯ ಕಿರಿಕಿರಿಯಿಂದಾಗಿ ಬೇಸತ್ತಿದ್ದಾರೆ ಚಾಲಕರು…..MD ಮೇಡಂ ಚಿಗರಿಯಲ್ಲಿ ಹೇಗಿದೆ ವ್ಯವಸ್ಥೆ ಚಾಲಕಕನ್ನು ಒಮ್ಮೆ ಕೇಳಿ ನೋಡಿ…..ಸಿದ್ದಲಿಂಗಯ್ಯ ಸಾಹೇಬ್ರ ದರ್ಬಾರ್ ನಿಂದಾಗಿ ಡೂಟಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಚಾಲಕರು…..
ಅವಳಿ ನಗರದ ಮಧ್ಯೆ ಜನರ ನಾಡಿ ಮಿಡಿತ ವಾಗಿರುವ ಚಿಗರಿ ಸಾರಿಗೆ ಹೆಸರಿಗೆ ಮಾತ್ರ ಎಲ್ಲವೂ ಸರಿಯಾಗಿದೆ ಎಂಬಂತಾಗಿದೆ. ಆರಂಭ ಗೊಂಡು ಐದಾರು ವರ್ಷ ಕಳೆದರು ಕೂಡಾ ಬಸ್ ಗಳ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಆರಂಭ ದಿಂದ ಸಂಚಾರ ಮಾಡುತ್ತಿದ್ದ ಬಸ್ ಗಳು ಈಗಲೂ ಅವುಗಳೇ ಒಡಾಡುತ್ತಿದ್ದು ನಿರ್ವಹಣೆ ಮಾತ್ರ ಇಲ್ಲವೇ ಇಲ್ಲದಂತಾಗಿದೆ.
ಮೊದಲು ಬಸ್ ಗಳು ಸಂಪೂರ್ಣವಾಗಿ ಹಾಳಾ ಗಲು ಕಾಂಕ್ರೀಟ್ ರಸ್ತೆಯೇ ಕಾರಣವಾಗಿದ್ದು ಎಲ್ಲಾ ಕಡೆಗಳಲ್ಲೂ ಈ ಒಂದು ಸಿಸಿ ರಸ್ತೆಗಳನ್ನು ಮಾಡಿರುತ್ತಾರೆ ಆದರೆ ಚಿಗರಿ ಟ್ರ್ಯಾಕ್ ನಲ್ಲಿನ ಈ ಒಂದು ರಸ್ತೆಗಳು ಸಮತಟ್ಟಾಗಿಲ್ಲ ಹೀಗಾಗಿ ಗಡ ಗಡ ಎನ್ನುತ್ತಾ ರಸ್ತೆ ಮೇಲೆ ಸಂಚರಿಸುವ ಈ ಒಂದು ಚಿಗರಿ ಬಸ್ ಗಳನ್ನು ಹಾಳು ಮಾಡಿದ್ದು ಈ ಕಾಂಕ್ರೀಟ್ ರಸ್ತೆಗಳಾದರೆ ಇನ್ನೂ ಇದರ ಜೊತೆ ಯಲ್ಲಿ ಒಂದೊಂದು ಸಮಸ್ಯೆಗಳು ಹುಟ್ಟುಕೊಂ ಡಿದ್ದು
ಸಧ್ಯ ದೊಡ್ಡ ಪ್ರಮಾಣದಲ್ಲಿ ಬಸ್ ಗಳಲ್ಲಿ ಸಮಸ್ಯೆಗಳು ಕಂಡು ಬರುತ್ತಿವೆ.ಹುಬ್ಬಳ್ಳಿ ಮತ್ತು ಧಾರವಾಡ ದಿಂದ ಪ್ರತ್ಯೇಕವಾಗಿ ಬಸ್ ಗಳು ಸಂಚಾರ ಮಾಡುತ್ತಿದ್ದು ರಸ್ತೆ ಮಧ್ಯದಲ್ಲಿಯೇ ಏನಾದರು ಕೆಟ್ಟರೆ ಡಿಪೋ ಗಳಿಗೆ ಖಾಲಿ ಬಸ್ ಗಳನ್ನು ತಗೆದುಕೊಂಡು ಹೋಗಬೇಕು.ಡೂಟಿ ಮುಗಿಸಿಕೊಂಡು ಪ್ರತಿದಿನ ಚಾಲಕರು ಲಾಗ್ ಶೀಟ್ ನಲ್ಲಿ ಬಸ್ ನ ಸಮಸ್ಯೆಗಳ ಕುರಿತಂತೆ ಬರೆಯುತ್ತಾರೆ ಆದರೆ ಏನು ಮಾಡೊದಿಲ್ಲ
ಹೀಗಾಗಿ ಸಮಸ್ಯೆಗಳು ಕಡಿಮೆಯಾಗದೇ ಹೆಚ್ಚುತ್ತಲೆ ಇವೆ ಪ್ರಾರಂಭದಲ್ಲಿ ಬಂದ ಬಸ್ ಗಳು ಹೊಸದಾಗಿ ಇದ್ದವು ಸಧ್ಯ ಈಗ ಮೂರು ನಾಲ್ಕು ಲಕ್ಷ ಕಿಲೋ ಮೀಟರ್ ಸಂಚಾರವನ್ನು ಮಾಡಿವೆ ಹೀಗಾಗಿ ಇವುಗಳ ನಿರ್ವಹಣೆ ಮಾತ್ರ ಸರಿ ಯಾಗಿಲ್ಲ.ಏನು ಹೇಳಿದರು ಕೇಳಿದರು ಸಾಮಾ ನುಗಳಿಲ್ಲ ಕೆಲಸ ಮಾಡಿಸಬೇಕು ಎಂದರೆ ಮೆಕ್ಯಾನಿಕಲ್ ಗಳು ನಾವೇನು ಮಾಡಬೇಕು ಸಾಮಾನು ಇಲ್ಲ ಏನು ಮಾಡಬೇಕು ಎಂಬ ಉತ್ತರ
ವೊಲ್ವೊ ಕಂಪನಿಯವರು ಡಿಪೋ ದಲ್ಲಿದ್ದರು ಕೂಡಾ ಅವರಿಂದಲೇ ಒಳ್ಳೇಯ ಗುಟ್ಟಮಟ್ಟದ ವಸ್ತುಗಳನ್ನು ತರಿಸುವ ಬದಲಿಗೆ ಲೋಕಲ್ ಕಂಪನಿಯ ವಸ್ತುಗಳನ್ನು ಆರ್ಡರ್ ಮಾಡಿ ತರಿಸುತ್ತಾರೆ ಎರಡು ಮೂರು ದಿನಗಳಲ್ಲಿ ಮತ್ತೆ ಅದೇ ಕಥೆ ಅದೇ ಪುರಾಣ ಹೀಗಿರುವಾಗ ಬಸ್ ಗಳಲ್ಲಿ ಸಧ್ಯ ನೂರೆಂಟು ಸಮಸ್ಯೆಗಳು ಕಂಡು ಬರುತ್ತಿದ್ದು ಹೀಗಾಗಿ ರಸ್ತೆಗಳಲ್ಲಿ ಪ್ರತಿದಿನ ನಾಲ್ಕೈದು ಬಸ್ ಗಳು ಕೆಟ್ಟು ನಿಲ್ಲುತ್ತಿದ್ದು
ಏನು ಇಲ್ಲದ ವ್ಯವಸ್ಥೆಗಳ ನಡುವೆ ಏನಾದರು ಆದರೆ ಡ್ರೈವರ್ ಗಳಿಗೆ ಅಮಾನತು ಶಿಕ್ಷೆಯನ್ನು ನೀಡಲಾಗುತ್ತದೆ.ಈ ಹಿಂದೆ ಇದ್ದ ಡಿಪೋ ಮ್ಯಾನೇಜರ್ ಮತ್ತು ಡಿಸಿಯವರು ಚನ್ನಾಗಿ ಇದ್ದರು ಸಧ್ಯ ಹೊಸದಾಗಿ ಬಂದಿರುವ ಡಿಸಿ ಸಿದ್ದಲಿಂಗಯ್ಯ ಅವರು ಆರಂಭದಲ್ಲಿ ಬಂದು ನಮ್ಮೊಂದಿಗೆ ಸಭೆಯನ್ನು ಮಾಡಿ ಸಮಸ್ಯೆಗಳನ್ನು ಆಲಿಸಿದ್ದಾರೆ ಆದರೆ ಸಧ್ಯ ಏನಾದರೂ ಹೆಚ್ಚು ಕಡಿಮೆಯಾದರೆ ಅಮಾನತು ಮಾಡುತ್ತಿದ್ದು
ಇವರು ಬಂದ ಮೇಲೆ ಆರೇಳು ಚಾಲಕರು ಅಮಾನತಾಗಿದ್ದು ಹೀಗಾಗಿ ಪ್ರತಿದಿನ ಕರ್ತವ್ಯ ಮಾಡುತ್ತಿರುವ ಚಾಲಕರು ಜೀವವನ್ನು ಕೈಯಲ್ಲಿ ಟ್ಟುಕೊಂಡು ಕರ್ತವ್ಯವನ್ನು ಮಾಡುತ್ತಿದ್ದಾರೆ. ಜನರಲ್ ಡೂಟಿಯವರಿಗೆ ಹೇಗಾದರೂ ಮಾಡಿ ಆರು ಟ್ರೀಪ್ ಮಾಡಬೇಕು ಎಬಿ ಯವರಿಗೆ 9 ಡೂಟಿ ಮಾಡಿ ಮುಗಿಸಬೇಕು ಎಂಬ ಚಿಂತೆಯಲ್ಲಿ ಡಿಸಿಯವರ ಅಮಾನತು ಶಿಕ್ಷೆ ಹುಬ್ಬಳ್ಳಿ ಧಾರವಾಡ ಚಿಗರಿ ಚಾಲಕರಲ್ಲಿ ಭಯವನ್ನುಂಟು ಮಾಡಿದ್ದು
ಮೊದಲು ಸೌಲಭ್ಯ ಕೊಡ್ರಿ ಆ ಮೇಲೆ ಡ್ರೈವರ ತಪ್ಪಿದ್ದರೆ ಅಮಾನತು ಆದರೂ ಮಾಡಿ ಏನಾದರೂ ಮಾಡಿ ಎನ್ನುತ್ತಿದ್ದಾರೆ ಅವಳಿ ನಗರದ ಚಿಗರಿ ಬಸ್ ಚಾಲಕರು ಇನ್ನಾದರೂ ಇಲಾಖೆಗೆ ಹೊಸದಾಗಿ ಬಂದಿರುವ ವ್ಯವಸ್ಥಾಪಕ ನಿರ್ದೇಶಕರು ಡಿಸಿಯವರ ಕಾರ್ಯವೈಖರಿ ನೋಡಿ ಚಿಗರಿ ವ್ಯವಸ್ಥೆ ಹೇಗಿದೆ ಎಂಬೊದನ್ನು ಚಾಲಕರಿಂದ ಸಮಸ್ಯೆ ಆಲಿಸಿ ನೆಮ್ಮದಿಯ ವಾತಾವರಣನ್ನುಂಟು ಮಾಡುತ್ತಾರಾ ಎಂಬೊದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ ಧಾರವಾಡ…..