ಹುಬ್ಬಳ್ಳಿ –
ಬಸ್ ಗಳ ಕೊರತೆ ಡೂಟಿ ಕ್ಯಾನ್ಸಲ್ ಮಾಡಿ ಡ್ರೈವರ್ ಗಳಿಗೆ ರಜೆ ಹಾಕಿಸಿ ಮನೆಗೆ ಕಳುಹಿಸಿದ ಅಧಿಕಾರಿಗಳು – ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಚಿಗರಿ ಯಲ್ಲಿ ಡಿಸಿ ಯವರ ದರ್ಬಾರ್ MD ಮೇಡಂ ಹೇಗಿದೆ ವ್ಯವಸ್ಥೆ ಒಮ್ಮೆ ನೋಡಿ ಡ್ರೈವರ್ ಗೆ ಕೇಳಿ
ಹುಬ್ಬಳ್ಳಿ ಧಾರವಾಡ ಅವಳಿ ನಗರದ ಜನತೆಯ ನಾಡಿ ಮಿಡಿತವಾಗಿರುವ ಚಿಗರಿ ಬಸ್ ನಲ್ಲಿನ ಸಮಸ್ಯೆಗಳು ಒಂದೇ ಎರಡೇ ಲೆಕ್ಕವಿಲ್ಲದಷ್ಟು ಸಮಸ್ಯೆಗಳು ಕಂಡು ಬರುತ್ತಿದ್ದು ಆರಂಭ ಗೊಂಡು ಐದಾರು ವರ್ಷಗಳಾದರೂ ಕೂಡಾ ಈವರೆಗೆ ಚೆನ್ನಾಗಿ ನಡೆದುಕೊಂಡು ಬಂದಿರುವ ಬಸ್ ಗಳು ಸಧ್ಯ ಸರಿಯಾದ ನಿರ್ವಹಣೆ ಇಲ್ಲದ ಪರಿಣಾಮವಾಗಿ ಬಸ್ ಗಳು ಒಂದೊಂದು ಡಿಪೋ ಸೇರುತ್ತಿದ್ದು
ಇದು ಒಂದು ಕಡೆಯಾದರೆ ಇನ್ನೂ ಹಾಳಾ ಗುತ್ತಿರುವ ಬಸ್ ಗಳನ್ನು ಸರಿಯಾಗಿ ದುರಸ್ತಿ ನಿರ್ವಹರಣೆ ಮಾಡಿಸದ ಡಿಸಿ ಯವರು ಡ್ರೈವರ್ ಮೇಲೆ ಅಮಾನತು ಎಂಬ ಶಿಕ್ಷೆಯಿಂದ ದರ್ಪ ವನ್ನು ತೋರುತ್ತಿದ್ದಾರೆ ಹೀಗಿರುವಾಗ ಹೊಸದಾಗಿ ಬಂದಿರುವ ಡಿಸಿ ಸಿದ್ದಲಿಂಗಯ್ಯ ಅವರ ಕಾರ್ಯ ವೈಖರಿ ವಿರುದ್ದ ಹುಬ್ಬಳ್ಳಿ ಧಾರವಾಡ ಚಿಗರಿ ಬಸ್ ಚಾಲಕರು ಅಸಮಾಧಾನಗೊಂಡಿದ್ದು ಒಂದು ಕಡೆಯಾದರೆ
ಅವಳಿ ನಗರದ ಮಧ್ಯ ಸಂಚಾರ ಮಾಡುತ್ತಿದ್ದ 100 ಬಸ್ ಗಳಲ್ಲಿ ಸಧ್ಯ 80 ಬಸ್ ಗಳು ಮಾತ್ರ ಸಂಚಾರ ಮಾಡುತ್ತಿದ್ದು ಇವುಗಳಲ್ಲಿ ಕೆಲವು ಬಸ್ ಗಳು ಕೂಡಾ ಗಡ ಗಡ ಎನ್ನುತ್ತಿದ್ದು ಒಂದೊಂ ದಾಗಿ ಡಿಪೋ ಬಾಗಿಲು ತಟ್ಟುತ್ತಿದ್ದು ಇನ್ನೂ ಇದರಿಂದಾಗಿ ಬಸ್ ಗಳಲ್ಲಿ ವ್ಯತ್ಯಯ ಉಂಟಾ ಗಿದ್ದು ಪ್ರತಿದಿನ ಡೂಟಿ ಮಾಡುವ ಕೆಲ ಡ್ರೈವರ್ ಗಳಿಗೆ ರಜೆಯನ್ನು ನೀಡಲಾಗುತ್ತಿದೆ ಎಂದಿನಂತೆ ಡೂಟಿ ಮುಗಿಸಿ ನಾಳೆ ಡೂಟಿ ಇದೆ ಎಂದುಕೊ ಳ್ಳುವ ಡ್ರೈವರ್ ಗಳಿಗೆ ನೀವು ಒಟ್ಟು ರಜೆ ತಗೆದುಕೊಂಡಿಲ್ಲ
ಹೀಗಾಗಿ ರಜೆ ತಗೆದು ಎಂದು ಸಂದೇಶ ನೀಡಿ ಅವರ ಬಸ್ ಗಳನ್ನು ಬೇರೆ ಯವರಿಗೆ ಬೇರೆ ರೂಟ್ ಗೆ ಕೊಡುವ ವ್ಯವಸ್ಥೆ ಬೆಳಕಿಗೆ ಬಂದಿದೆ ಇದರಿಂದಾಗಿ ಪ್ರತಿದಿನ ತಪ್ಪದೇ ಡೂಟಿ ಮಾಡುವ ಚಾಲಕರಿಗೆ ಅಧಿಕಾರಿಗಳು ಶಾಕ್ ನೀಡುತ್ತಿದ್ದು ಇಲಾಖೆಗೆ ಈಗಷ್ಟೇ ಹೊಸದಾಗಿ ಬಂದು ಏನಾದರು ಹೊಸ ಬದಲಾವಣೆ ಹೊಸದಾಗಿ ಏನಾದರೂ ಮಾಡುತ್ತಾರೆ ಎಂದುಕೊಂಡಿದ್ದ ಡಿಸಿ ಸಿದ್ದಲಿಂಗಯ್ಯ ನವರ ಆಡಳಿತ ವ್ಯವಸ್ಥೆ ಹೇಗಿದೆ
ಹೇಗೆ ಮಾಡ್ತಾ ಇದ್ದಾರೆ ಡ್ರೈವರ್ ಗಳು ಏನಾದರೂ ಹೆಚ್ಚು ಕಡಿಮೆಯಾದರೆ ಅಮಾನತು ಅಮಾನತು ಎಂದು ಹೇಳುತ್ತಿರುವ ಕಾರ್ಯವೈಖ ರಿಯನ್ನು ಇಲಾಖೆಯ ವ್ಯವಸ್ಥಾಪಕ ನಿರ್ದೇಶ ಕರೇ,ಸಾರಿಗೆ ಸಚಿವರೇ ಒಮ್ಮೆ ನೋಡಿ ಡ್ರೈವರ್ ಗಳಿಗೆ ನೆಮ್ಮದಿಯ ವಾತಾರವರಣನ್ನುಂಟು ಮಾಡಿ ಬಸ್ ಗಳನ್ನು ಸರಿಯಾಗಿ ನಿರ್ವಹಣೆ ಮಾಡಿ ಡೂಟಿ ನೀಡಿ ಇಲ್ಲವಾದರೆ ಮುಂದೊಂದು ದಿನ ಸಣ್ಣದಾದ ಸಮಸ್ಯೆ ದೊಡ್ಡದಾಗಲಿದೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……