ಹುಬ್ಬಳ್ಳಿ –
ಹುಟ್ಟು ಹಬ್ಬದ ದಿನದಂದು ಬಿಡುವಿಲ್ಲದೇ ಸಭೆ,ಸಂಚಾರ,ಎನ್ನುತ್ತಾ ಸುತ್ತಾಡಿದ ಪಾಲಿಕೆಯ ಆಯುಕ್ತ ಡಾ ಈಶ್ವರ ಉಳ್ಳಾಗಡ್ಡಿಯವರು ಹುಟ್ಟು ಹಬ್ಬದ ದಿನದಂದು ಬಿಡುವಿಲ್ಲದ ಕಾರ್ಯಕ್ರಮಗಳು ಹೇಗಿದ್ದವು ಶೆಡ್ಯೂಲ್ ಹೇಗಿತ್ತು ನೋಡಿ…..
ಪಾಲಿಕೆಯ ಆಯುಕ್ತ ಡಾ ಈಶ್ವರ ಉಳ್ಳಾಗಡ್ಡಿ ಯವರಿಗೆ ಹುಟ್ಟು ಹಬ್ಬದ ಸಂಭ್ರಮ. ಹುಟ್ಟು ಹಬ್ಬ ಇದೆ ಎಂದುಕೊಂಡು ರಜೆ ಹಾಕಿ ಕುಟುಂಬ ದವರೊಂದಿಗೆ ಅಲ್ಲಿ ಇಲ್ಲಿ ಎನ್ನುತ್ತಾ ಹೊರಗಡೆ ಹೋಗದ ಆಯುಕ್ತರು ತಮ್ಮ ಹುಟ್ಟು ಹಬ್ಬ ದಿನದಂದು ಕೂಡಾ ಬಿಡುವಿಲ್ಲದ ಕಾರ್ಯ ಕ್ರಮಗಳಲ್ಲಿ ಪಾಲ್ಗೊಂಡಿದ್ದು ಕಂಡು ಬಂದಿತು.
ಹೌದು ಬೆಳಿಗ್ಗೆಯಿಂದಲೇ ಬಿಡುವಿಲ್ಲದ ಸಭೆ, ಭೇಟಿ,ಕಾರ್ಯಕ್ರಮ,ವೀಕ್ಷಣೆ ಎನ್ನುತ್ತಾ ಬಿಡುವಿಲ್ಲ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದು ಕಂಡು ಬಂದಿತು.ಮೊದಲು 11 ಗಂಟೆಗೆ ಹುಬ್ಬಳ್ಳಿಯ ಸವಾಯಿ ಗಂಧರ್ವ ಸಭಾಂಗಣದಲ್ಲಿ ಗಣಪತಿ ಪ್ರತಿಷ್ಠಾಪನೆ ಕುರಿತಂತೆ ಮೂರು ಗಂಟೆಗಳ ಈ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಇದನ್ನು ಮುಗಿಸಿಕೊಂಡು ಮತ್ತೆ ಧಾರವಾಡದಲ್ಲಿ ಮಾನವ ಹಕ್ಕುಗಳ ಆಯೋಗದ ಸಭೆಯಲ್ಲಿ ಪಾಲ್ಗೊಂಡರು
ನಾಲ್ಕು ಗಂಟೆಗಳ ಸುಧೀರ್ಘ ಸಭೆಯ ನಂತರ ಇದನ್ನು ಮುಗಿಸಿಕೊಂಡು ಧಾರವಾಡ ಪಾಲಿಕೆಯ ಕಚೇರಿಗೆ ಆಗಮಿಸಿ ಸಾರ್ವಜನಿಕರು ಮತ್ತು ಅಧಿಕಾರಿಗಳೊಂದಿಗೆ ಕುಂದುಕೊರತೆಗಳನ್ನು ಆಲಿಸಿದರು.ನಂತರ ಧಾರವಾಡ ಪ್ರವಾಸಿ ಮಂದಿರದಲ್ಲಿ ಮೇಯರ್ ಮತ್ತು ಸಭಾನಾಯ ಕರು ಕರೆದಿದ್ದ ಸಭೆಯಲ್ಲಿ ಪಾಲ್ಗೊಂಡರು
ಸುಧೀರ್ಘ ಸಭೆಯ ನಂತರ ಇಲ್ಲಿಂದ ಮತ್ತೆ ಧಾರವಾಡ ಪ್ರವಾಸಿ ಮಂದಿರದಲ್ಲಿ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರನ್ನು ಭೇಟಿಯಾಗಿ ಕೆಲ ವಿಚಾರ ಕುರಿತಂತೆ ಚರ್ಚೆಯನ್ನು ಮಾಡಿದರು ಇನ್ನೂ ಇಷ್ಟೇಲ್ಲಾ ಮುಗಿಸಿಕೊಳ್ಳುವಷ್ಟರಲ್ಲಿ ಸಮಯ ರಾತ್ರಿ 7 ಗಂಟೆಯಾಗಿತ್ತು ನಂತರ ಧಾರವಾಡದಿಂದ ಹುಬ್ಬಳ್ಳಿಯತ್ತ ಪ್ರಯಾಣ ಬೆಳಿಸಿದ ಆಯುಕ್ತರು ಮೇಯರ್ ಸೇರಿದಂತೆ ಹಲವರು ಸಭೆಯ ಹಿನ್ನಲೆಯಲ್ಲಿ ಎರಡು ಗಂಟೆಗಳ ಸಭೆ ನಂತರ
ಇದನ್ನೇಲ್ಲವನ್ನು ಮುಗಿಸಿಕೊಂಡು ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಶ್ಯಾಮ್ ಭಟ್ ರನ್ನು ಭೇಟಿಯಾಗುವಷ್ಟರಲ್ಲಿ ಎಂಟು ಗಂಟೆಯಾಗಿತ್ತು ನಂತರ ಧಾರವಾಡದಿಂದ ಹುಬ್ಬಳ್ಳಿಯತ್ತ ಪ್ರಯಾಣ ಬೆಳೆಸಿದರು.ಹುಬ್ಬಳ್ಳಿಗೆ ಹೋಗಿ ನಿವಾಸ ಸೇರುವಷ್ಟರಲ್ಲಿಯೇ ಸಮಯ ರಾತ್ರಿ 8 ಗಂಟೆಯ ಮೇಲಾಗಿತ್ತು ಮನೆಯಲ್ಲೂ ಕೂಡಾ ಕೆಲ ಅಧಿಕಾರಿಗಳೊಂದಿಗೆ ಕೆಲ ವಿಚಾರ ಕುರಿತಂತೆ ಸಭೆಯನ್ನು ಮಾಡಿ ಮಾಹಿತಿಯನ್ನು ಪಡೆದುಕೊಂಡರು.
ಸಾಮಾನ್ಯವಾಗಿ ಹುಟ್ಟು ಹಬ್ಬ ಇದೆ ಎಂದರೆ ಯಾರಾದರೂ ಇವತ್ತು ಏನು ಬೇಡ ಬಿಡಿ ಎನ್ನುವವರೇ ಹೆಚ್ಚಾಗಿರುವಾಗ ಪಾಲಿಕೆಯ ಆಯುಕ್ತ ಡಾ ಈಶ್ವರ ಉಳ್ಳಾಗಡ್ಡಿಯವರು ತಮ್ಮ ಹುಟ್ಟು ಹಬ್ಬದ ದಿನದಂದು ಬಿಡುವಿಲ್ಲದೇ ಕರ್ತವ್ಯವನ್ನು ಮಾಡಿ ಮಾದರಿಯಾಗಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..