ಹುಬ್ಬಳ್ಳಿ ಧಾರವಾಡ –
ಸಿಕ್ಕ ಸಿಕ್ಕಲ್ಲಿ BDಯಾಗಿ ಡ್ರೈವರ್ ಗಳಿಗೆ ಕೈಕೊಡುತ್ತಿವೆ ಚಿಗರಿ ಬಸ್ ಗಳು…..ಸಾಮಾನು ಇಲ್ಲ ನಾವೆಂಗ ರಿಪೇರಿ ಮಾಡಬೇಕು ಎನ್ನುತ್ತಿ ದ್ದಾರೆ ಮೇಕ್ಯಾನಿಕ್…..ಇದ್ಯಾವುದು ನಿಮ್ಮ ಗಮನಕ್ಕೆ ಬರುತ್ತಿಲ್ವಾ DCಯವರೇ….
ಹುಬ್ಬಳ್ಳಿ ಧಾರವಾಡ ಮಧ್ಯದಲ್ಲಿ ಸಂಚಾರ ಮಾಡುತ್ತಿರುವ ಚಿಗರಿ ಬಸ್ ಗಳು ಆರಂಭ ಗೊಂಡು ಐದಾರು ವರ್ಷಗಳು ಕಳೆದಿವೆ.ಸಧ್ಯ ಐದರಿಂದ ಆರು ಲಕ್ಷ ಕಿಲೋ ಮೀಟರ್ ಸಂಚಾರ ವನ್ನು ಮಾಡಿವೆ.ಕಾಂಕ್ರೀಟ್ ರಸ್ತೆಗಳು ಚಿಗರಿ ಬಸ್ ನ್ನು ಮೊದಲು ಗಡ ಗಡ ಎನ್ನುವಂತೆ ಮಾಡಿದ್ದು ಇನ್ನೂ ಇದರೊಂದಿಗೆ ಸರಿಯಾದ ನಿರ್ವಹಣೆ ವ್ಯವಸ್ಥೆ ಇಲ್ಲದ ಪರಿಣಾಮವಾಗಿ ಸಧ್ಯ ಚಿಗರಿ ಬಸ್ ಗಳು ಒಂದೊಂದಾಗಿ ಡಿಪೋ ಸೇರುತ್ತಿವೆ
ಇಲ್ಲವೇ ಡಿಪೋ ಗೆ ಹೋಗಿ ಬರುತ್ತಿವೆ.ಪ್ರತಿದಿನ ಸಧ್ಯ ದಾರಿ ಮಧ್ಯದಲ್ಲಿ ನಾಲ್ಕೈದು ಬಸ್ ಗಳು ಕೆಟ್ಟು ನಿಲ್ಲುತ್ತಿರುವ ದೃಶ್ಯಗಳು ಸರ್ವೆ ಸಾಮಾನ್ಯ ವಾಗಿ ಕಂಡು ಬರುತ್ತಿದೆ.ಈಗಾಗಲೇ ಹುಬ್ಬಳ್ಳಿ ಮತ್ತು ಧಾರವಾಡ ಡಿಪೋ ಗಳಲ್ಲಿ ದುರಸ್ತಿಯಾ ಗದೇ ಹತ್ತಕ್ಕೂ ಹೆಚ್ಚು ಬಸ್ ಗಳು ನಿಂತುಕೊಂಡಿ ದ್ದರೆ ಇದರ ಜೊತೆಯಲ್ಲಿ ಪ್ರತಿದಿನ ದಾರಿಯಲ್ಲಿ ಐದಾರು ಬಸ್ ಗಳು ಬಿಡಿ ಯಾಗಿ ಕೈಕೊಡುತ್ತಿದ್ದು ಡ್ರೈವರ್ ಗಳಿಗೆ ಇದೊಂದು ದೊಡ್ಡ ತಲೆನೋವಿನ ಕೆಲಸವಾಗಿದೆ.
ನೆಮ್ಮದಿಯಿಂದ ಡೂಟಿ ಮಾಡುತ್ತಿರುವ ಸಮಯ ದಲ್ಲಿ ಏಕಾಎಕಿಯಾಗಿ ಬಸ್ ಗಳು ಬಿಡಿ ಯಾಗು ತ್ತಿದ್ದು ಈ ಒಂದು ಕುರಿತಂತೆ ಡಿಪೋ ದಲ್ಲಿ ಹೇಳಿದರು ಕೂಡಾ ಏನು ಪ್ರಯೋಜನವಿಲ್ಲದಂ ತಾಗಿದೆ.ಏನು ಹೇಳಿದರು ಏನು ಕೇಳಿದರು ಸಾಮಾನು ಇಲ್ಲ ನಾವೇನು ಮಾಡಬೇಕು ನಾವು ಹೇಗೆ ರಿಪೇರಿ ಮಾಡಬೇಕು ಎಂಬ ಮಾತುಗಳು ಡಿಪೋ ದಲ್ಲಿ ಕೇಳಿ ಬರುತ್ತಿದ್ದು
ಸಾಮಾನುಗಳನ್ನು ತರಿಸಿಕೊಟ್ಟರೇ ಹಾಕುತ್ತಾರೆ ಹೀಗಾಗಿ ಬಸ್ ಗಳ ಸಾಮಾನುಗಳಿಲ್ಲದೇ ರಿಪೇರಿ ಮಾಡಿ ಎಂದರೆ ಮೇಕ್ಯಾನಿಕ್ ಗಳು ಹೇಗೆ ಮಾಡಬೇಕು ಏನು ಹಾಕಬೇಕು ಹೀಗಾಗಿ ಸಧ್ಯ ಸಿಕ್ಕ ಸಿಕ್ಕಲ್ಲಿ ಬಸ್ ಗಳು ಎಲ್ಲೇಂದರಲ್ಲಿ ಬಿಡಿ ಯಾಗುತ್ತಿದ್ದು ಈಗಷ್ಟೇ ದೂರದ ಬೆಂಗಳೂರಿ ನಿಂದ ಚಿಗರಿ ವಿಭಾಗಕ್ಕೆ ಡಿಸಿಯಾಗಿ ಬಂದಿರುವ ಮಾನ್ಯ ಸಿದ್ದಲಿಂಗಯ್ಯ ಸಾಹೇಬ್ರು ಇನ್ನಾದರು ಬೇರೆ ಬೇರೆ ಕೆಲಸ ಕಾರ್ಯಗಳನ್ನು ಬಿಟ್ಟು ಇತ್ತ ಗಮನಹರಿಸಿ
ಡ್ರೈವರ್ ಗಳಿಗೆ ದೊಡ್ಡ ತಲೆನೋವಿನ ಕೆಲಸ ವಾಗಿರುವ ಬಸ್ ಗಳ ಬಿಡಿ ಸಮಸ್ಯೆಯನ್ನು ಪರಿಹರಿಸಿ ನೆಮ್ಮದಿಯಿಂದ ಕರ್ತವ್ಯವನ್ನು ಮಾಡಿಸುತ್ತಾರೆ ಎಂಬೊದನ್ನು ಕಾದು ನೋಡ ಬೇಕಿದೆ.ಇದ್ಯಾವುದು ನಿಮ್ಮ ಗಮನಕ್ಕೆ ಇಲ್ವಾ ಡಿಸಿ ಸಾಹೇಬ್ರೆ ಎಂಬ ಮಾತುಗಳನ್ನು ಸಾರ್ವಜನಿಕರು ಕೇಳುತ್ತಿದ್ದು ಆದರೆ ಡಿಸಿ ಸಾಹೇಬ್ರೆ ಸಧ್ಯ ಬೇರೆ ಕೆಲಸ ಕಾರ್ಯಗಳಲ್ಲಿ ಬ್ಯೂಜಿಯಾಗಿದ್ದಾರೆ ಏನು ಮಾಡೋದು…..