ಹುಬ್ಬಳ್ಳಿ –
ಮತ್ತೊಂದು ಮಹತ್ವದ ಅಭಿವೃದ್ಧಿ ಯೋಜನೆಯ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ ಶಾಸಕ ಪ್ರಸಾದ ಅಬ್ಬಯ್ಯ – ಇಂಡಿಪಂಪ್ ಸರ್ಕಲ್ ವರೆಗೆ ಶೀಘ್ರದಲ್ಲೇ ಆಗಲಿದೆ ರಸ್ತೆ ಅಗಲಿಕರಣ ಜಿಲ್ಲಾಧಿಕಾರಿಯವರೊಂದಿಗೆ ವೀಕ್ಷಣೆ ಮಾಡಿದ ಶಾಸಕರು
ಈಗಾಗಲೇ ಕ್ಷೇತ್ರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅಭಿವೃದ್ದಿ ಕೆಲಸ ಕಾರ್ಯಗಳನ್ನು ಮಾಡುತ್ತಿರುವ ಶಾಸಕ ಪ್ರಸಾದ ಅಬ್ಬಯ್ಯ ಅವರು ತಮ್ಮದೇ ಯಾದ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಕಾರ್ಯಕ್ಕೆ ಮುಂದಾಗಿದ್ದಾರೆ.ಹೌದು ಪೂರ್ವ ವಿಧಾನಸಭಾ ಕ್ಷೇತ್ರದ ನ್ಯೂ ಇಂಗ್ಲಿಷ್ ಸ್ಕೂಲ್ ನಿಂದ ಇಂಡಿಪಂಪ್ ಸರ್ಕಲ್ ವರೆಗೂ ರಸ್ತೆ ಅಗಲಿಕರಣ ಮಾಡುವ ಹಿನ್ನೆಲೆಯಲ್ಲಿ
ಶಾಸಕ ಪ್ರಸಾದ ಅಬ್ಬಯ್ಯ ಅವರು ಜಿಲ್ಲಾಧಿ ಕಾರಿಯವರೊಂದಿಗೆ ಪರಶೀಲನೆ ಮಾಡಿದರು.ಈ ರಸ್ತೆಯನ್ನು ಸಮಗ್ರ ಸಮೀಕ್ಷೆಯನ್ನು ಮಾಡಿ ಕೂಡಲೇ ವರದಿಯನ್ನು ಸಲ್ಲಿಸಬೇಕು ಒಂದು ರಸ್ತೆ ಒತ್ತುವರಿ ಮಾಡಿಕೊಂಡಿದ್ದರೆ ಕೂಡಲೇ ಒತ್ತುವರಿ ತೆರವಿಗೆ ಕ್ರಮವನ್ನು ವಹಿಸುವಂತೆ ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ದಿವ್ಯಾಪ್ರಭು,ತಹಶಿಲ್ದಾರ ಕೆ ಎಲ್ ಪಾಟೀಲ್ ಅವರೊಂದಿಗೆ ವಿವಿಧ ಇಲಾಖೆಯ ಅಧಿಕಾರಿ ಗಳು ಪಕ್ಷದ ಕಾರ್ಯಕರ್ತರು ಮುಖಂಡರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ …..