ಬೆಂಗಳೂರು –
ಶಿಕ್ಷಕರ ಹೋರಾಟಕ್ಕೆ ಸಿದ್ದಗೊಂಡ ಬೆಂಗಳೂರು ಪ್ರೀಂಡ ಪಾರ್ಕ್ – ಯಾವುದಕ್ಕೂ ವಿಚಲಿತರಾ ಗದೇ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ರಾಜ್ಯದ ಶಿಕ್ಷಕರಿಗೆ KSPSTA ಸಂಘಟನೆ ಕರೆ…..
ಶಿಕ್ಷಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ KSPSTA ಸಂಘಟನೆ ಬೆಂಗಳೂರು ಚಲೋ ಗೆ ಕರೆ ನೀಡಿದೆ.ಆಗಸ್ಟ್ 12 ರಂದು ಈ ಒಂದು ಹೋರಾಟವು ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ನಡೆಯಲಿದ್ದು ರಾಜ್ಯದ ಮೂಲೆ ಮೂಲೆಗಳಿಂದ ಶಿಕ್ಷಕರು ಹೋರಾಟದಲ್ಲಿ ಪಾಲ್ಗೊಳ್ಳಲು ಬೆಂಗಳೂರಿನತ್ತ ಹೊರಟಿದ್ದಾರೆ.
ಇನ್ನೂ ಹೋರಾಟದಲ್ಲಿ ಪಾಲ್ಗೊಳ್ಳುವ ಶಿಕ್ಷಕರಿಗೆ ಶಿಕ್ಷಣ ಇಲಾಖೆ ಎಚ್ಚರಿಕೆಯ ಸಂದೇಶವನ್ನ ನೀಡಿದ್ದು ಇದರ ಬೆನ್ನಲ್ಲೇ ಈ ಒಂದು ಬೆಂಗಳೂರು ಚಲೋ ದಲ್ಲಿ ಭಾಗವಹಿಸಿ ಎಂತಹದ್ದೇ ಸವಾಲು ಗಳನ್ನು ಎದುರಿಸುವ ಸಾಮರ್ಥ್ಯ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸಂಘಟನೆಗೆ ಇದೆ ಎಂದು ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಬೆಂಗಳೂರಿನಲ್ಲಿ ಶಿಕ್ಷಕರ ಹೋರಾಟ ನಡೆದೆ ನಡೆಯುತ್ತದೆ ಎಂದರು.ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ,ಶಿಕ್ಷಕರ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟಕ್ಕೆ ಕರೆ ನೀಡಿದ್ದು ಹೋರಾಟವನ್ನು ಹತ್ತಿಕ್ಕಲು ಇಲಾಖೆ ಯಿಂದ ಸುತ್ತೋಲೆ ಹೊರಡಿಸಿರುವುದು ತಿಳಿದು ಬಂದಿರುತ್ತದೆ
ಹಿಂದಿನಿಂದಲೂ ಕೂಡಾ ನಡೆದ ಅನೇಕ ಹೋರಾಟಗಳಲ್ಲಿಯೂ ಕೂಡ ಇದೇ ರೀತಿ ಚಳುವಳಿ ಹತ್ತಿಕ್ಕುವ ಪ್ರಯತ್ನವನ್ನು ಇಲಾಖೆಯ ಮಾಡುತ್ತಾ ಬಂದಿರುತ್ತದೆ ಪ್ರಸ್ತುತ ಹೊರಡಿಸಿ ರುವ ಸುತ್ತೋಲೆಯಿಂದ ಶಿಕ್ಷಕರ ಚಳುವಳಿಯನ್ನು ಹತ್ತಿಕ್ಕಲಾಗದು.ಈ ಬಗ್ಗೆ ಶಿಕ್ಷಕರು ವಿಚಲಿತರಾ ಗದೇ ಹೋರಾಟದಲ್ಲಿ ಭಾಗವಹಿಸಿ ಎಂತಹದ್ದೇ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ಪ್ರಾಥಮಿಕ ಶಾಲಾ ಶಿಕ್ಷಕರಿದೆ ಎಂದರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..