ರಾಯಚೂರು –
ಶಿಕ್ಷಕಿಯೊಬ್ಬರ ಜೊತೆ ಅನುಚಿತವಾಗಿ ವರ್ತನೆ ಮಾಡಿದ ಶಾಲೆಯ ಮುಖ್ಯಶಿಕ್ಷಕ ರೊಬ್ಬರಿಗೆ ಹಿಗ್ಗಾ ಮುಗ್ಗಾ ಥಳಿಸಿದ ಘಟನೆ ರಾಯಚೂರಿನಲ್ಲಿ ನಡೆದಿದೆ. ಯರಮರಸ್ ಬಳಿಯಿರುವ ಆದರ್ಶ ವಿದ್ಯಾಲಯದಲ್ಲಿ ಈ ಒಂದು ಘಟನೆ ನಡೆದಿದ್ದು ಪ್ರಭಾರ ಪ್ರಾಚಾರ್ಯ ಮೆಹಬೂಬ್ ಅಲಿ ತರಬೇತಿಗೆ ಬಂದಿದ್ದ ಶಿಕ್ಷಕಿ ಜತೆ ಅನುಚಿತವಾಗಿ ವರ್ತಿಸಿದ್ದಾರೆ
ಇದರಿಂದಾಗಿ ಆಕ್ರೋಶ ಗೊಂಡ ಶಿಕ್ಷಕಿಯ ಸಂಬಂಧಿಕರು ಮುಖ್ಯ ಶಿಕ್ಚಕ ನಿಗೆಧರ್ಮದೇಟು ನೀಡಿಧದಾರೆ.ಶಿಕ್ಷಕಿಯ ಮೊಬೈಲ್‌ಗೆ ಅಶ್ಲೀಲ (ಕೆಟ್ಟ) ಮೆಸೇಜ್‌ಗಳನ್ನು ಕಳಿಸುತ್ತಿದ್ದ ಶಿಕ್ಷಕ, ರಾತ್ರಿ ಮಲಗಲು ಬಾ ಎಂದೂ ಕರೆದಿದ್ದ.
ಇದರಿಂದ ಶಿಕ್ಷಕಿ ತಮ್ಮವರಿಗೆ ಮಾಹಿತಿಯನ್ನು ಶಿಕ್ಷಕಿ ತಿಳಿಸಿದ್ದರು. ಶಾಲೆಗೆ ಬಂದ ಶಿಕ್ಷಕಿಯ ಬಂಧುಗಳು, ಸಾರ್ವಜನಿಕರು ಪ್ರಭಾರ ಪ್ರಾಚಾರ್ಯನಿಗೆ ಚೆನ್ನಾಗಿ ಥಳಿಸಿ ಧರ್ಮದೇಟು ಕೊಟ್ಟಿದ್ದಾರೆ.ಇದರಿಂದ ಎಚ್ಚೆತ್ತ ಪ್ರಭಾರ ಪ್ರಾಚಾರ್ಯ ಮೆಹಬೂಬ್ ಅಲಿ, ತಾನು ಮಾಡಿದ್ದು ತಪ್ಪಾಗಿದೆ. ಇನ್ನು ಮುಂದೆ ಹಾಗೆ ಮಾಡುವುದಿಲ್ಲ ಎಂದು ಮುಚ್ಚಳಿಕೆ ಬರೆಸಿ ಕೊಂಡಿದ್ದಾರೆ
ಹಾಗೂ ಶಿಕ್ಷಕಿಯ ಕಾಲಿಗೆ ಬೀಳುವಂತೆ ಮಾಡಿದ್ದಾರೆ. ಆದರೆ, ಈ ಕುರಿತು ಗ್ರಾಮೀಣ ಠಾಣೆ ಅಥವಾ ಮಹಿಳಾ ಠಾಣೆಯಲ್ಲಾಗಲಿ ಪ್ರಕರಣ ದಾಖಲಾಗಿಲ್ಲ
ಸುದ್ದಿ ಸಂತೆ ನ್ಯೂಸ್ ರಾಯಚೂರು…..