ಹುಬ್ಬಳ್ಳಿ –
ಚಿಗರಿಯಲ್ಲಿ ಚಾಲಕರಿಗೆ ಉಸಿರುಗಟ್ಟಿದ ವಾತಾವರಣ ಚಾಲಕರ ಸಮಸ್ಯೆ ಆಲಿಸದ ಮೇಲಾಧಿಕಾರಿಗಳು – ಡಿಸಿ ಸಾಹೇಬ್ರ ದರ್ಬಾರ್ ನಿಂದ ಬೇಸತ್ತ ಚಾಲಕರು…..ಇದೇನಿದು ಉಸಿರುಗಟ್ಟಿದ ವಾತಾವರಣ ಸಿದ್ದಲಿಂಗಯ್ಯ ಸಾಹೇಬ್ರೆ…..
ಹುಬ್ಬಳ್ಳಿ ಧಾರವಾಡ ಚಿಗರಿ ಸಾರಿಗೆ ಸಂಸ್ಥೆಯಲ್ಲಿ ಸಧ್ಯ ಎಲ್ಲವೂ ಸರಿಯಾಗಿಲ್ಲ ಎಂಬ ಮಾತು ಎರಡು ಡಿಪೋ ಗಳಲ್ಲಿ ಕೇಳಿ ಬರುತ್ತಿದೆ. ಮೇಲ್ನೋಟಕ್ಕೆ ಎಲ್ಲವೂ ತುಂಬಾ ಅಂದ ಚೆಂದವಾಗಿ ಕಂಡು ಬಂದರು ಕೂಡಾ ಯಾವುದು ಸರಿಯಾಗಿಲ್ಲ ಎಂಬೊದಕ್ಕೆ ಸಧ್ಯ ಡಿಸಿ ಯವ ರಿಂದ ನಡೆಯುತ್ತಿರುವ ಆಡಳಿತದ ಕಾರ್ಯ. ವೈಖರಿ ಸಾಕ್ಷಿ.ನಾವು ಹೇಳೊದಕ್ಕಿಂತ ಎರಡು ಡಿಪೋ ಗಳಲ್ಲಿ ಹೋದರೆ ಸಾಕು ಬೆಂಗಳೂರಿ ನಿಂದ ಹುಬ್ಬಳ್ಳಿಗೆ ಡಿಸಿ ಯಾಗಿ ವರ್ಗಾವಣೆಯಾಗಿ ಬಂದಿರುವ ಸಿದ್ದಲಿಂಗಯ್ಯ ಅವರ ಕಾರ್ಯ ಹೇಗಿದೆ ಎಂಬೊದು ತಿಳಿದು ಬರುತ್ತದೆ.
ಇಲ್ಲಿಗೆ ಬಂದ ಮೇಲೆ ಚಾಲಕರಿಗೆ ಒಂದಲ್ಲ ಒಂದು ರೀತಿಯಲ್ಲಿ ಉಸಿರುಗಟ್ಟಿದ ವಾತಾವರಣ ನಿರ್ಮಾಣವಾಗಿದೆ ಏನಾದರು ಹೆಚ್ಚು ಕಡಿಮೆ ಯಾದರೆ ಪದೇ ಪದೇ ಅಮಾನತು ಎಂದು ಶಿಕ್ಷೆ ನೀಡುತ್ತಿರುವ ಇವರ ಕಾರ್ಯವೈಖರಿಗೆ ಎರಡು ಡಿಪೋ ಗಳ ಚಾಲಕರು ಬೇಸತ್ತಿದ್ದಾರೆ.ಇವರು ಬಂದ ಮೇಲೆ ಎಷ್ಟೋ ಚಾಲಕರು ತಾವು ಮಾಡಲಾರದ ತಪ್ಪಿಗೆ ಅಮಾನತು ಶಿಕ್ಷೆಯನ್ನು ಅನುಭವಿಸಿದ್ದು ಕೆಲವರು ಬೇರೆ ಕಡೆಗೆ ವರ್ಗಾವಣೆಯಾಗಿದ್ದು
ಹೀಗಾಗಿ ಏನು ಮಾತನಾಡಿದರು ತಪ್ಪು,ಏನು ಹೇಳಿದರು ಇನ್ನು ತಪ್ಪು ಎಂಬ ಪರಸ್ಥಿತಿ ಕಂಡು ಬರುತ್ತಿದ್ದು ಡಿಸಿಯವರ ದರ್ಬಾರ್ ನಿಂದಾಗಿ ಬೇಸತ್ತಿರುವ ಚಾಲಕರ ನೋವು ಸಮಸ್ಯೆ ಯನ್ನು ಯಾರು ಕೇಳೊರಿಲ್ಲ ಆಲಿಸುವವರು ಇಲ್ಲ ಎಂಬ ಪರಸ್ಥಿತಿ ಕಂಡು ಬರುತ್ತಿದ್ದು ಇನ್ನಾದರು ಇದನ್ನು ಗಂಭೀರವಾಗಿ ತಗೆದುಕೊಂಡು ಉಸಿರುಗಟ್ಟಿದ ವಾತಾವರಣವನ್ನು ನಿರ್ಮಾಣ ಮಾಡಿರುವ ಡಿಸಿಯವರ ಆಟೋಟಕ್ಕೆ ಮೇಲಾಧಿಕಾರಿಗಳು ಬ್ರೇಕ್ ಹಾಕಿ ಒಳ್ಳೇಯ ವಾತವಾರಣವನ್ನ ನಿರ್ಮಾಣ ಮಾಡುತ್ತಾರೆಯಾ ಎಂಬೊದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..