ಹುಬ್ಬಳ್ಳಿ –
BRTS ಚಾಲಕರಿಗೆ ಹೆಚ್ಟಳವಾಯಿತು ಇನ್ಸೆಂಟಿವ್ -ಸುದ್ದಿ ಸಂತೆಯ ವರದಿ ಬೆನ್ನಲ್ಲೇ ಎಚ್ಚೇತ್ತುಕೊಂಡ ಅಧಿಕಾರಿಗಳು ಹೊರಬಿತ್ತು ಅಧಿಕೃತವಾದ ಆದೇಶ…..ಆರು ವರ್ಷದ ನಂತರ ದುಬಾರಿ ದುನಿಯಾದಲ್ಲಿ ಕೇವಲ 25 ರೂಪಾಯಿ ಹೆಚ್ಚಳ ಮಾಡಿದ್ರೆ ಯಾವುದಕ್ಕೆ ಸಾಲುತ್ತೆ DC ಸಾಹೇಬ್ರೆ
ಹುಬ್ಬಳ್ಳಿ ಧಾರವಾಡ ಮಧ್ಯೆ ಸಂಚಾರ ಮಾಡುತ್ತಿ ರುವ ಚಿಗರಿ ಬಸ್ ಚಾಲಕರಿಗೆ ದಿನ ನೀಡುತ್ತಿದ್ದ ಇನ್ಸೆಂಟಿವ್ ಹಣವನ್ನು ಹೆಚ್ಚಳ ಮಾಡಲಾಗಿದೆ. ಹೌದು ಬೆಲೆ ಏರಿಕೆಯ ನಡುವೆಯೂ ಚಾಲಕರಿಗೆ ಈ ಒಂದು ಪ್ರೋತ್ಸಾಹದ ಹಣವನ್ನು ತುಂಬಾ ಕಡಿಮೆ ರೂಪದಲ್ಲಿ ನೀಡುತ್ತಿದ್ದರು ಈ ಒಂದು ವಿಚಾರ ಕುರಿತಂತೆ ಸುದ್ದಿ ಸಂತೆ ವರದಿಯನ್ನು ಪ್ರಸಾರ ಮಾಡಿತ್ತು ಚಿಗರಿ ಬಸ್ ಆರಂಭಗೊಂಡ ದಿನದಿಂದ ಈವರೆಗೆ ಇದ್ದ ಮತ್ತು ಪ್ರಸ್ತುತ ದರ ಏರಿಕೆಯ ನಡುವೆಯೂ ಸಧ್ಯ ನೀಡುತ್ತಿರುವ ಈ ಒಂದು ಇನ್ಸೆಂಟಿವ್ ಹಣದಿಂದಲೂ ಒಂದು ಚಹಾ ಮತ್ತು ಉಪಹಾರ ಕೂಡಾ ಬರೋದಿಲ್ಲ ಎಂಬ ವಿಚಾರವನ್ನು ವರದಿ ರೂಪದಲ್ಲಿ ಬೆಳಕು ಚೆಲ್ಲಲಾಗಿತ್ತು.
ಅಧಿಕಾರಿಗಳ ಗಮನವನ್ನು ಕೂಡಾ ಸೆಳೆಯಲಾ ಗಿತ್ತು ನಿರಂತರವಾದ ಫಾಲೋ ಆಫ್ ಮತ್ತು ವರದಿ ಬೆನ್ನಲ್ಲೇ ಸಧ್ಯ ಈ ಒಂದು ಇನ್ಸೆಂಟಿವ್ ದರವನ್ನು ಪರಿಷ್ಕ್ರತವಾಗಿ ಹೆಚ್ಚಳ ಮಾಡಿ ಆದೇಶವನ್ನು ಮಾಡಲಾಗಿದೆ.ಇನ್ಸೆಂಟಿವ್ ದರ ತುಂಬಾ ಕಡಿಮೆಯಾಗಿತ್ತು ಚಾಲಕರು ಈ ಒಂದು ಸಮಸ್ಯೆ ಕುರಿತಂತೆ ನೋವನ್ನು ಕೂಡಾ ಹಂಚಿ ಕೊಂಡಿದ್ದರು ಸಧ್ಯ ಎಲ್ಲವನ್ನು ಕುರಿತಂತೆ ಸುದ್ದಿ ಸಂತೆ ಟೀಮ್ ಚಾಲಕರ ಧ್ವನಿಯಾಗಿ ವರದಿ ಯನ್ನು ಪ್ರಸಾರ ಮಾಡಿತ್ತು ವರದಿಯಿಂದ ಎಚ್ಚೇತ್ತುಕೊಂಡ ಇಲಾಖೆಯ ಅಧಿಕಾರಿಗಳು ಪ್ರೋತ್ಸಾಹದ ಹಣವನ್ನು ಆರು ವರ್ಷಗಳ ನಂತರ ಕೇವಲ 25 ರೂಪಾಯಿಂದ 50 ರೂಪಾಯಿ ವರೆಗೆ ಹೆಚ್ಚಳ ಮಾಡಿ ಆದೇಶವನ್ನು ಮಾಡಿದ್ದಾರೆ.
ಇದರಿಂದಾಗಿ ಚಾಲಕರ ಮೊಗದಲ್ಲಿ ಒಂದಿಷ್ಟು ಸಂತಸ ಮನೆ ಮಾಡಿದ್ದು ಆದರೆ ಇವತ್ತಿನ ದುಬಾರಿಯಾದ ಜೀವನದಲ್ಲಿ ಅಲ್ಪ ಸ್ವಲ್ಪ ಪ್ರಮಾಣದಲ್ಲಿ ಕೊಡುವ ಈ ಒಂದು ಹಣ ಯಾವುದಕ್ಕೂ ಸಾಲೊದಿಲ್ಲ ಹೀಗಾಗಿ 200 ರೂಪಾಯಿಯಿಂದ 300 ರೂಪಾಯಿ ನೀಡು ವಂತೆ ಚಾಲಕರು ಬೇಡಿಕೆಯನ್ನು ಇಟ್ಟಿದ್ದರು.
ಆದರೆ ಸಧ್ಯ 25 ರೂಪಾಯಿ ಹೆಚ್ಚಳ ಮಾಡಿದ್ದು ಚಾಲಕರ ಮೂಗಿಗೆ ತುಪ್ಪಿ ಒರೆಸಿದಂತಾಗಿದ್ದು ಯಾವುದಕ್ಕೆ ಸಾಲುತ್ತೆ ಡಿಸಿ ಸಾಹೇಬ್ರೆ ಈ ಹಿಂದೆ ಚಾಲಕರೊಂದಿಗೆ ಸಭೆಯಲ್ಲಿ ಈ ವಿಚಾರವನ್ನು ಮೇಲಾಧಿಕಾರಿಗಳ ಗಮನಕ್ಕೆ ತಗೆದುಕೊಂಡು ಬರೋದಾಗಿ ಹೇಳಿದ್ದರಿ ನೀವು ಹೇಳಿದಂತೆ ಕೊಟ್ಟ ಮಾತಿನಂತೆ ವ್ಯವಸ್ಥಾಪಕ ನಿರ್ದೇಶಕರ ಗಮನಕ್ಕೆ ತಗೆದುಕೊಂಡು ಬಂದು ಹೆಚ್ಚಳ ಮಾಡಿ ಚಾಲಕರ ಹಿತ ಕಾಪಾಡಿ ಈ ಒಂದು ನಿರೀಕ್ಷೆಯಲ್ಲಿ ಹುಬ್ಬಳ್ಳಿ ಧಾರವಾಡ ಚಿಗರಿ ಬಸ್ ಚಾಲಕರಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..