ಹುಬ್ಬಳ್ಳಿ –
ರಸ್ತೆಯಲ್ಲಿಯೇ ಚಿಗರಿ ಬಸ್ ಹೇಗೆ BD ಯಾಗುತ್ತಿವೆ ನೋಡಿ DCಯವರೇ – ಕದ್ದು ಮುಚ್ಚಿ ಬಸ್ ನಲ್ಲಿ ಹೋಗುವಾಗ ರಸ್ತೆಯಲ್ಲಿ ನಿಂತುಕೊಂ ಡಿರುವ ಬಸ್ ಗಳು ಕಾಣುತ್ತಿಲ್ಲವೇ…..
ಹೌದು ಹುಬ್ಬಳ್ಳಿ ಧಾರವಾಡ ಮಧ್ಯೆ ಸಂಚಾರ ಮಾಡುತ್ತಿರುವ ಚಿಗರಿ ಬಸ್ ಗಳಲ್ಲಿ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ.ಈಗಷ್ಟೇ ಡಿಸಿ ಯಾಗಿ ಬಂದಿರುವ ಸಿದ್ದಲಿಂಗಯ್ಯ ಅವರು ಬಂದ ಮೇಲಂತೂ ಹೆಚ್ಚಾಗಿ ಸಮಸ್ಯೆಗಳು ಹೆಚ್ಚಾಗಿದ್ದು ಇವರ ಕಾರ್ಯವೈಖರಿ ವಿರುದ್ದ ಚಾಲಕರು ಆಕ್ರೋಶಗೊಂಡಿದ್ದು ಅಸಮಾಧಾನಗೊಂಡಿ ದ್ದಾರೆ.
ಸಧ್ಯ ಹುಬ್ಬಳ್ಳಿ ಧಾರವಾಡ ಎರಡು ಡಿಪೋ ಗಳಲ್ಲಿ ಉಸಿರುಗಟ್ಟಿದ ವಾತಾವರಣ ನಿರ್ಮಾಣವಾ ಗಿದ್ದು ಯಾರು ಕೂಡಾ ಚಾಲಕರೊಂದಿಗೆ ಸಧ್ಯದ ಪರಸ್ಥಿತಿಯನ್ನು ತಿಳಿದುಕೊಳ್ಳುತ್ತಿಲ್ಲಇದರ ನಡುವೆ ಬಸ್ ಗಳು ರಸ್ತೆಯಲ್ಲಿಯೇ ಬಿಡಿ ಯಾಗಿ ನಿಂತು ಕೊಳ್ಳುತ್ತಿದ್ದು ಇದನ್ನು ಕೂಡಾ ಯಾರು ಗಂಭೀರ ವಾಗಿ ತಗೆದುಕೊಳ್ಳುತ್ತಿಲ್ಲ
100 ಬಸ್ ಗಳಲ್ಲಿ ಹತ್ತಕ್ಕೂ ಹೆಚ್ಚು ಬಸ್ ಗಳು ಡಿಪೋ ಗಳಲ್ಲಿ ದರಸ್ತಿಗಾಗಿ ನಿಂತುಕೊಂಡಿದ್ದು ನಿಂತಲ್ಲೆೇ ನಿಂತುಕೊಂಡಿವೆ ಇಧರ ನಡುವೆ ಇನ್ನೂ ಇತ್ತ ರಸ್ತೆಗಳಲ್ಲಿ ಪ್ರತಿದಿನ ಐದಾರು ಬಸ್ ಗಳು ಕೂಡಾ ಬಿಡಿ ಯಾಗುತ್ತಿದ್ದು ಇದರಿಂದಾಗಿ ಚಾಲಕ ರಿಗೆ ದೊಡ್ಡ ತಲೆನೋವಾಗಿದ್ದು ಈಗಷ್ಟೇ ಡಿಸಿ ಯಾಗಿ ಬಂದಿರುವ ಸಿದ್ದಲಿಂಗಯ್ಯ ಅವರು ಬಂದ ಕೂಡಲೇ ಚಾಲಕರೊಂದಿಗೆ ಸಮಸ್ಯೆಯನ್ನು ಆಲಿಸಿ ಈಡೇರಿಸುವ ಭರವಸೆಯನ್ನು ನೀಡಿದ್ದರು
ಆದರೆ ತಿಂಗಳುಗಳು ಕಳೆದರು ಕೂಡಾ ಈವರೆಗೆ ಭರವಸೆ ಮೂಡುತ್ತಿಲ್ಲ ಆದರೆ ದಿನದಿಂದ ದಿನಕ್ಕೆ ಉಸಿರುಗಟ್ಟಿದ ವಾತಾವರಣ ಹೆಚ್ಚಾಗುತ್ತಿದ್ದು ಡ್ರೈವರ್ ಗಳ ಕಾರ್ಯವೈಖರಿಯನ್ನು ಕದ್ದು ಮುಚ್ಚಿ ಬಸ್ ನಲ್ಲಿ ತಿರುಗಾಡುತ್ತಾ ನೋಡುವ ಡಿಸಿ ಸಾಹೇಬ್ರೆ ರಸ್ತೆಯಲ್ಲಿ ನಿಂತುಕೊಳ್ಳುವ ಬಸ್ ಗಳನ್ನು ಒಮ್ಮೆ ನೋಡಿ ವ್ಯವಸ್ಥೆಯನ್ನು ಸುಧಾರಣೆ ಮಾಡಿ
ಡ್ರೈವರ್ ಗಳಿಗೆ ನೆಮ್ಮದಿಯಿಂದ ಡೂಟಿ ಮಾಡುವ ವಾತಾವರಣ ನಿರ್ಮಾಣ ಮಾಡಿ ಈ ಒಂದು ನಿರೀಕ್ಷೆಯಲ್ಲಿ ಎರಡು ಡಿಪೋ ಗಳ ಚಾಲಕರಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..