ಬೆಂಗಳೂರು –
ಅಮಾನತುಗೊಂಡ ಪೊಲೀಸಪ್ಪನಿಗೆ CM ಪದಕ ಅಪರಾಧ ಆರೋಪಿಗಳೊಂದಿಗೆ ಸಂಪರ್ಕ ಹೊಂದಿದ್ದ ಹೆಡ್ ಕಾನ್ಸಟೇಬಲ್ ಸಲೀಂ ಪಾಷಾಗೆ ಮುಖ್ಯಮಂತ್ರಿ ಪದಕ
ಇಂದು ಸರ್ಕಾರಗಳಿಂದ ಸಿಗುವ ಪ್ರಶಸ್ತಿಗಳು ಯಾರಿಗೆ ಯಾರಿಗೆ ಹೇಗೆ ಸಿಗುತ್ತವೆ ಎಂಬೊದಕ್ಕೆ ಹೆಡ್ ಕಾನ್ಸಟೇಬಲ್ ರೊಬ್ಬರಿಗೆ ಸಿಕ್ಕ ಮುಖ್ಯಮಂತ್ರಿ ಪದಕವೇ ಸಾಕ್ಷಿ. ಹೌದು 78ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಉತ್ತಮ ಕರ್ತವ್ಯ ನಿರ್ವಹಣೆ ಮಾಡಿದ ರಾಜ್ಯದ 126 ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ 2023ನೇ ಸಾಲಿನ ಮುಖ್ಯಮಂತ್ರಿ ಪದಕ ನೀಡಲಾಗಿದ್ದು ಇದರಲ್ಲಿ ಕರ್ತವ್ಯ ಲೋಪದಿಂದ ಅಮಾನತುಗೊಂಡಿದ್ದ ಹೆಡ್ ಕಾನ್ಸ್ಟೇಬಲ್ ರೊಬ್ಬರಿಗೆ ಸಿಎಂ ಪದಕ ನೀಡಲಾಗಿದೆ.
ಸಧ್ಯ ಈ ಒಂದು ವಿಚಾರವು ದೊಡ್ಡ ಪ್ರಮಾಣ ದಲ್ಲಿ ಚರ್ಚೆಗೆ ಗ್ರಾಸವಾಗಿದೆ.ಕಳೆದ ಒಂದು ತಿಂಗಳ ಹಿಂದೆ ಮೈಸೂರು ಸಿಸಿಬಿ ಘಟಕದ ಹೆಡ್ ಕಾನ್ಸಟೇಬಲ್ ಸಲೀಂ ಪಾಷಾ ಎಂಬಾತ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳ ಜೊತೆ ಸಂಪರ್ಕ ಸೇರಿದಂತೆ ಸಾರ್ವಜನಿಕರ ಆಸ್ತಿ ಕಳುವಿಗೆ ಸಹಾಯ ಹಾಗೂ ದಾಖಲೆಗಳ ಸೋರಿಕೆ ಆರೋಪದ ಮೇಲೆ ಆತನನ್ನು ಕೆಲಸ ದಿಂದ ಅಮಾನತು ಮಾಡಲಾಗಿತ್ತು.
ಆದರೆ ಇದೀಗ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಉತ್ತಮ ಕರ್ತವ್ಯ ನಿರ್ವಹಣೆ ಮಾಡಿದ ಪೊಲೀಸ್ ಅಧಿಕಾರಿಗಳಿಗೆ ನೀಡುವ 2024ನೇ ಸಿಎಂ ಪದಕದ ಪಟ್ಟಿಯಲ್ಲಿ ಸಲೀಂ ಪಾಷಾ ಹೆಸರು ಬಂದಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು ಹೇಗೆ ಆಯ್ಕೆ ಮಾಡಲಾಗಿದೆ ಆಯ್ಕೆಗೆ ಮಾನದಂಡಗಳು ಹೇಗೆ ಎಂಬೊದು ದೊಡ್ಡ ಪ್ರಮಾಣದಲ್ಲಿ ಚರ್ಚೆಯಾಗುತ್ತಿದ್ದು ಈ ಎಲ್ಲಾ ಪ್ರಶ್ನೆಗಳಿಗೆ ಇವರನ್ನು ಆಯ್ಕೆ ಮಾಡಿದವರೇ ಉತ್ತರಿಸಬೇಕಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..