This is the title of the web page
This is the title of the web page

Live Stream

[ytplayer id=’1198′]

December 2024
T F S S M T W
 1234
567891011
12131415161718
19202122232425
262728293031  

| Latest Version 8.0.1 |

State News

2016 ರಲ್ಲಿ ನೇಮಕವಾದ ಜಿ.ಪಿ.ಟಿ ವರ್ಗಾವಣಾ ಆಕಾಂಕ್ಷಿತ ಮಿತ್ರರಿಗೆ ಸಿಹಿಸುದ್ದಿ – ಹಿನ್ನಡೆಯಾದರು ಛಲ ಬಿಡದೇ ಹೋರಾಟ ಭಗೀರಥನಂತೆ ಹೋರಾಡಿ 2016 ರಲ್ಲಿ ನೇಮಕವಾದ ನಮ್ಮ GPT ಶಿಕ್ಷಕರಿಗೆ ಸಿಹಿ ಸುದ್ದಿಯನ್ನು ನೀಡಿದ ಸಂಘಟನೆಯ ಮುಖಂಡರು…..

2016 ರಲ್ಲಿ ನೇಮಕವಾದ ಜಿ.ಪಿ.ಟಿ ವರ್ಗಾವಣಾ ಆಕಾಂಕ್ಷಿತ ಮಿತ್ರರಿಗೆ ಸಿಹಿಸುದ್ದಿ  – ಹಿನ್ನಡೆಯಾದರು ಛಲ ಬಿಡದೇ ಹೋರಾಟ ಭಗೀರಥನಂತೆ ಹೋರಾಡಿ 2016 ರಲ್ಲಿ ನೇಮಕವಾದ ನಮ್ಮ GPT ಶಿಕ್ಷಕರಿಗೆ ಸಿಹಿ ಸುದ್ದಿಯನ್ನು ನೀಡಿದ ಸಂಘಟನೆಯ ಮುಖಂಡರು…..
WhatsApp Group Join Now
Telegram Group Join Now

ಬೆಂಗಳೂರು

ಕರ್ನಾಟಕ ರಾಜ್ಯ (೬-೮) ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘವು 2016 ರಲ್ಲಿ ನೇಮಕವಾದ ಜಿ.ಪಿ.ಟಿ ವರ್ಗಾವಣಾ ಆಕಾಂಕ್ಷಿತ ಮಿತ್ರರಿಗೆ ಸಿಹಿಸುದ್ದಿ ಯನ್ನು ನೀಡಿದೆ ಹೌದು ಎಷ್ಟೇ ಹಿನ್ನಡೆಯಾದರೂ ಛಲ ಬಿಡದ ಭಗೀರಥನಂತೆ ಹೋರಾಡಿ 2016 ರಲ್ಲಿ ನೇಮಕವಾದ ನಮ್ಮ GPT ಶಿಕ್ಷಕರಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ.

2016 ರಲ್ಲಿ ನೇಮಕವಾದ ಜಿ.ಪಿ.ಟಿ ಶಿಕ್ಷಕರ ನೇಮಕಾತಿ ಆದೇಶಗಳಲ್ಲಿ ವಿಧಿಸಿರುವ ನಿಬಂಧನೆಗಳ ದ್ವಂದ್ವತೆ ಹಿನ್ನಲೆಯಲ್ಲಿ 2023 ನೇ ಸಾಲಿನ ವರ್ಗಾವಣೆ ಹಾಗೂ ಪ್ರಸಕ್ತ ಸಾಲಿನ ವರ್ಗಾವಣೆಯಲ್ಲಿ ವರ್ಗಾವಣಾ ಕಾಯ್ದೆ ಅನ್ವಯ ವರ್ಗವಾಗಲು ಅವಕಾಶವಿದ್ದರೂ ಶ್ರೀಮತಿ ಕವಿತಾ KAT ಪ್ರಕರಣ ಅರ್ಜಿ ಸಂಖ್ಯೆ 5957/2021 ರ ತೀರ್ಪಿನ ( ನೇಮಕಾತಿ ಆದೇಶಗಳ ನಿಬಂಧನೆಗಳನ್ನು ಪಾಲಿಸಬೇಕೆಂಬ ಆದೇಶ) ಹಿನ್ನೆಲೆಯಲ್ಲಿ

ಕಳೆದ ಮತ್ತು ಪ್ರಸಕ್ತ ಸಾಲಿನಲ್ಲಿ ರಾಜ್ಯದ ಬಹುತೇಕ ಜಿ.ಪಿ.ಟಿ ಶಿಕ್ಷಕರು ವರ್ಗವಾಗಲು ಕಾನೂನಾತ್ಮಕ ತೊಡಕು ಉಂಟಾಗಿದ್ದು ತಮಗೆಲ್ಲಾ ತಿಳಿದಿರುತ್ತದೆ,
ಈ ಹಿನ್ನಲೆಯಲ್ಲಿ ಜಿ.ಪಿ.ಟಿ ವರ್ಗಾವಣಾ ಆಕಾಂಕ್ಷಿತ ಶಿಕ್ಷಕರ ನೋವನ್ನು ನೀಗಿಸುವ ದೃಷ್ಟಿಯಿಂದ ಎಲ್ಲರಂತೆ ಅವರೂ ತಮ್ಮ ಕುಟುಂಬವನ್ನು ಸೇರಲಿ ಎಂಬ ಮಹತ್ವಾಕಾಂಕ್ಷೆಯ ಹಿನ್ನಲೆಯಲ್ಲಿ 2023 ರಲ್ಲಿ ಶ್ರೀಮತಿ ಕವಿತಾ ಪ್ರಕರಣದ ವಿರುದ್ದ ಘನ ಉಚ್ಚ ನ್ಯಾಯಾಲಯ ದಲ್ಲಿ ನಮ್ಮ ರಾಜ್ಯ ಘಟಕದ ಮಾರ್ಗದರ್ಶನದಲ್ಲಿ ದಾವೆ ಹೂಡಲಾಯಿತು.

ಘನ ಉಚ್ಚ ನ್ಯಾಯಾಲಯ ನೀಡಿದ ನಿರ್ದೇಶನದಂತೆ KAT ಯಲ್ಲಿ ಪ್ರಶ್ನಿಸಲಾಯಿತು,ಸದರಿ ಕೇಸ್ ವಜಾ ಗೊಂಡ ಕಾರಣ ಛಲ ಬಿಡದ ನೇತಾರ ನಮ್ಮ ಅಧ್ಯಕ್ಷರ ಮಾರ್ಗದರ್ಶನದಲ್ಲಿ ಪುನಃ ಉಚ್ಚನ್ಯಾಯಾಲಯದಲ್ಲಿ ದಿನಾಂಕ 23.07.2024 ರಂದು ಪುನಃ ರಿಟ್ ಅರ್ಜಿ ಸಲ್ಲಿಸಲಾಯಿತು.

ಪ್ರಕರಣದ ವಾಸ್ತವವನ್ನು ಆಲಿಸಿದ ಘನ ನ್ಯಾಯಾಲಯ ದಿನಾಂಕ 08.08.2024 ರಂದು ಈ ಕೆಳಗಿನಂತೆ ಆದೇಶ ಹೊರಡಿಸಿದೆ.
*In the light of the provisions of Section 2(d) of the Karnataka Civil Services (Regulation of Transfers of Teachers) Act, 2020* *and the*
*Karnataka State Civil* *Services (Regulation of Transfers of Teachers)*
*Rules, 2020, there will be an interim direction to the competent among*
*The Respondents to permit the petitioners to participate in the counseling*
*for transfer bèing held in terms of the said Act and Rules without*
*insisting on commpletion of ten years from the date of their appointment*,
*provisionally, súbject ( ಹತ್ತು ವರ್ಷ ಕಡ್ಡಾಯ ಸೇವೆ ಸಲ್ಲಿಸಬೇಕು ಎಂದು ಒತ್ತಾಯಿಸದೇ ವರ್ಗಾವಣಾ ಕಾಯ್ದೆಯ ನಿಯಮಗಳಂತೆ) further orders in this writ petition*

ಹಾಗೂ ವಿಚಾರಣೆ ಕಾಯ್ದಿರಿಸಿ ದಿನಾಂಕ 28.08.2024 ರಂದು ವಿಚಾರಣೆ ನಡೆಸಿ ಅಂತಿಮ ಆದೇಶ ಹೊರಡಿ ಸುವ ಸಾಧ್ಯತೆಯಿದೆ.

ವರ್ಗಾವಣಾ ಆಕಾಂಕ್ಷಿತರ ನೋವಿನ ಹಿನ್ನಲೆಯಲ್ಲಿ ಅವರ ಪರವಾಗಿ ಗಟ್ಟಿ ದನಿಯಾಗಿ ನಿಂತು ನಮ್ಮ ಸಂಘದ ಮಾನ್ಯ ಅಧ್ಯಕ್ಷರ ಮಾರ್ಗದರ್ಶನದಲ್ಲಿ ಘನ KAT ನ್ಯಾಯಾಲಯದಲ್ಲಿ 2 ಕೇಸ್ ಉಚ್ಚ ನ್ಯಾಯಾಲ ಯದಲ್ಲಿ 2 ಕೇಸ್ ದಾಖಲಿಸಿ ಅಂತಿಮವಾಗಿ ವರ್ಗಾವಣಾ ಕಾಯ್ದೆಯ ನಿಯಮ 2D ಪ್ರಕಾರ ಬಾಧಿತರಿಗೆ ವರ್ಗಾವಣೆ ಹೊಂದಲು ಘನ ನ್ಯಾಯಾಲಯ ಅವಕಾಶ ಕಲ್ಪಿಸಿರುತ್ತದೆ.

ಸದರಿ ಆದೇಶವನ್ನು ಇಲಾಖಾ ಉನ್ನತ ಅಧಿಕಾರಿಗಳಾದ ಮಾನ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಮಾನ್ಯ ಆಯುಕ್ತರು ಮತ್ತು ಮಾನ್ಯ ನಿರ್ದೇಶಕರ ಗಮನಕ್ಕೆ ತಂದಿದ್ದು ನಾಳೆಯಿಂದ ನಡೆಯುವ ಅಂತರ್ ಘಟಕದ ವಿಭಾಗಿಯ ಕೌನ್ಸಲಿಂಗ್ ನಲ್ಲಿ ಜಿ.ಪಿ.ಟಿ ಶಿಕ್ಷಕರಿಗೆ ಅವಕಾಶ ನೀಡಬೇಕಾಗಿ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.*

ಹಾಗೂ ವರ್ಗಾವಣಾ ನೋಡಲ್ ಆಧಿಕಾರಿಗಳ ಬಳಿ ಮಾತನಾಡಲಾಗಿ ಶ್ರೀಯುತರು ಕಾನೂನು ಸಮಾಲೋ ಚಕರ ಅಭಿಪ್ರಾಯ ಪಡೆದು ಕ್ರಮವಹಿಸುವುದಾಗಿ ತಿಳಿಸಿರುತ್ತಾರೆ.ಮುಂದುವರೆದು ಈ ಆದೇಶವು ವರ್ಗಾವಣೆ ಆಕಾಂಕ್ಷಿತರ ಪಾಲಿಗೆ ಸಂಜೀವಿನಿ ಆಗಲಿದ್ದು ವರ್ಗಾವಣೆ ಕಾಯ್ದೆ ಪ್ರಕಾರ ಮುಂದಿನ ವರ್ಗಾವಣೆಗಳು ನಡೆಯುವ ಸಾಧ್ಯತೆಗಳಿವೆ.

ಇಂತಹ ಐತಿಹಾಸಿಕ ಕಾರ್ಯವನ್ನು ಸಾಧಿಸಿದ ಸಂಘ ಮತ್ತು ಸತತ ಹೋರಾಟ ಮಾಡಿದ ಶಿಕ್ಷಕರಿಗೆ ಸಂಘಟನೆಯ ನಾಯಕರಿಗೆಈ ಸಂಬಂಧ ರಾಜ್ಯ ಘಟಕ ಜಿ.ಪಿ.ಟಿ ಶಿಕ್ಷಕರ ವರ್ಗಾವಣೆ ನಿಮಿತ್ತ ಕಳೆದ ಎರಡು ವರ್ಷಗಳಿಂದ ಕಾನೂನಾತ್ಮಕ ಹೋರಾಟ ಮಾಡುತ್ತಿದ್ದು ಈಗ ಅದಕ್ಕೆ ಪ್ರತಿಫಲ ದೊರೆತಂತಾಗಿದೆ ಏನೇ ಆದರೂ ಜಿ.ಪಿ.ಟಿ ಶಿಕ್ಷಕರ ಹಿತಕ್ಕಾಗಿ ಸಂಘಟನೆ ಸದಾ ಸಿದ್ಧವಿದೆ ಹಾಗೂ ಇರಲಿದೆ ಎಂಬುದನ್ನು ನಾಯಕರು ತೋರಿಸಿ ಕೊಟ್ಟಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು …..


Google News

 

 

WhatsApp Group Join Now
Telegram Group Join Now
Suddi Sante Desk