ಹುಬ್ಬಳ್ಳಿ –
ಹುಬ್ಬಳ್ಳಿ ಧಾರವಾಡ ಅವಳಿ ನಗರದ ಮಧ್ಯೆ ಸಂಚಾರ ಮಾಡುತ್ತಿರುವ ಚಿಗರಿ ಬಸ್ ನಲ್ಲಿ ದಿನದಿಂದ ದಿನಕ್ಕೆ ಸಮಸ್ಯೆ ತೊಂದರೆ ಹೆಚ್ಚಾಗುತ್ತಿವೆ.ಎಂಟು ವರ್ಷಗಳ ಹಿಂದೆ ಬಂದಿರುವ ಈ ಒಂದು ಬಸ್ ಗಳಲ್ಲಿ ಪ್ರತಿದಿನ ಒಂದಲ್ಲ ಒಂದು ಪ್ರಮುಖ ಸಮಸ್ಯೆ ಗಳು ಕಂಡು ಬರುತ್ತಿದ್ದು ಹೆಚ್ಚಾಗುತ್ತಿವೆ
ಸರಿಯಾದ ರೀತಿಯಲ್ಲಿ ನಿರ್ವಹಣೆ ವ್ಯವಸ್ಥೆ ಇಲ್ಲದ ಪರಿಣಾಮವಾಗಿ ಅವಳಿ ನಗರದ ಮಧ್ಯೆ ಸಂಚಾರ ಮಾಡುತ್ತಿರುವ ಈ ಒಂದು ಬಸ್ ಗಳು ಈಗ ಎಲ್ಲೆಂದರಲ್ಲಿ ನಿಂತುಕೊಳ್ಳುತ್ತಿದ್ದು ಹೀಗಿರುವಾಗ ಇದರ ಬಗ್ಗೆ ಗಮನ ಹರಿಸಿದ ಡಿಸಿ ಸಿದ್ದಲಿಂಗಯ್ಯ ಅವರು ಚಾಲಕರ ಕಾರ್ಯವೈಖರಿ ಕುರಿತು ಅಷ್ಟೇ ನೋಡತಾ ಇದ್ದಾರೆ
ಹೀಗಾಗಿ ಸಧ್ಯ ಒಂದು ಕಡೆ ಉಸಿರುಗಟ್ಟಿದ ವಾತಾವರಣ ಇನ್ನೊಂದು ಕಡೆಗೆ ಬಸ್ ಗಳಲ್ಲಿ ಸಮಸ್ಯೆ ಗಳ ಮಹಾಪೂರವೇ ಕಂಡುಬರುತ್ತಿದ್ದು ಇದನ್ಬು ಸರಿ ಮಾಡಬೇಕಾದ ಡಿಸಿ ಯವರು ಸುಮ್ಮ ಸುಮ್ಮನೆ ಡ್ರೈವರ್ ಗಳ ಮೇಲೆ ತಮ್ಮ ಸಿಟ್ಟು ತೋರಿಸುತ್ತಿದ್ದಾರೆ ಮೊದಲು ಬಸ್ ಗಳಲ್ಲಿನ ಸಮಸ್ಯೆ ಸರಿ ಮಾಡಿ ಆ ಮೇಲೆ ಸರಿಯಾಗಿ ಚಾಲಕರು ಕರ್ತವ್ಯ ಮಾಡದಿದ್ದರೆ ಅವರ ಮೇಲೆ ನಿಮ್ಮ ಕೋಪ ತೋರಿಸುವಿರಂತೆ
ಈಗಷ್ಟೇ ಇಲಾಖೆಗೆ ವ್ಯವಸ್ಥಾಪಕ ನಿರ್ದೇಶಕ ರಾಗಿ ಅಧಿಕಾರ ವಹಿಸಿಕೊಂಡಿರುವ ಪ್ರೀಯಾಂಗ ಅವರು ಈ ಒಂದು ಕುರಿತು ಅವಲೋಕಿಸುತ್ತಾರೆ ಡ್ರೈವರ್ ಗಳಿಗೆ ನೆಮ್ಮದಿ ಯಿಂದ ಕೆಲಸ ಮಾಡುವ ವಾತಾವರಣ ನಿರ್ಮಾಣ ಮಾಡ್ತಾರೆ ಎಂಬೊಂದನ್ನು ನೋಡಬೇಕಿದೆ ಈ ಒಂದು ನಿರೀಕ್ಷೆ ಯಲ್ಲಿ ಹುಬ್ಬಳ್ಳಿ ಧಾರವಾಡ ಚಾಲಕರಿದ್ದಾರೆ
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..