ಧಾರವಾಡ –
ಧಾರವಾಡ ಜಿಲ್ಲಾ ನಿವೃತ್ತ ನೌಕರರ ಸಭೆ – ನೌಕರರ ಬೇಡಿಕೆ ಗಳ ಕುರಿತು DC ಯವರ ಮೂಲಕ CM ಗೆ ಮನವಿ ಸಲ್ಲಿಕೆ ಹೌದು ಧಾರವಾಡ ಜಿಲ್ಲಾ ನಿವೃತ್ತರ ಸಂಘ ಧಾರವಾಡ ಇದರ ಸಭಾಭವನದಲ್ಲಿ “ಧಾರವಾಡ ಜಿಲ್ಲಾ ನೌಕರರ ಸಭೆ ಜರುಗಿತು.
ಸಭೆಯ ಅಧ್ಯಕ್ಷತೆಯನ್ನು ಧಾರವಾಡ ಜಿಲ್ಲಾ ನಿವೃತ್ತರ ಸಂಘದ ಗೌರವಾಧ್ಯಕ್ಷರಾದ ಕಣವಿ ಯವರು ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘದ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಬಿ.ಪಾಟೀಲ,ವಿಭಾಗೀಯ ಉಪಾಧ್ಯಕ್ಷರಾದ ಬಿ.ಎಂ.ಸೂರಗೊಂಡ, ನಿವೃತ್ತ ನೌಕರರ ವೇದಿಕೆಯ ರಾಜ್ಯ ಸಂಚಾಲಕರಾದ ಗುರು ತಿಗಡಿ, ಅಶೋಕ ಸಜ್ಜನ ಶಂಕ್ರಯ್ಯ ಸುಬ್ಬಾಪೂರಮಠ, ಎಸ್.ಜಿ.ಬಿಸೇರೊಟ್ಟಿ,ಪದಾಧಿಕಾರಿಗಳಾದ
ಕಣಕಾಪೂರ, ಬಿರಾದಾರ ಕೆ.ಎಂ.ತದ್ದೇವಾಡಿ ಮುಂತಾದವರು ವೇದಿಕೆ ಮೇಲೆ ಉಪಸ್ಥಿತರಿದ್ದು ಮಾತನಾಡಿದರು.
ಸಭೆಯಲ್ಲಿ ದಿನಾಂಕ 1-7-22 ರಿಂದ 31-8-24ರ ಅವಧಿಯಲ್ಲಿ ನಿವೃತ್ತಾಗಿರುವ ನೌಕರರಿಗೆ ಏಳನೇ ವೇತನ ಆಯೋಗ ವರದಿ ಅನುಷ್ಟಾನ ಜಾರಿ ಆದೇಶ ದಿಂದ ಆಗಿರುವ ಆರ್ಥಿಕ ನಷ್ಟ,ಅನ್ಯಾಯದ ಬಗ್ಗೆ ಮತ್ತು ನೌಕರರ ವಿವಿಧ ಬೇಡಿಕೆಗಳ ಬಗ್ಗೆ ಮನವಿ ಅರ್ಪಣೆ, ಕಾನೂನು ಹೋರಾಟ,ಸಂಘಟನೆ ಬಲವರ್ಧನೆ, ಸಮಾವೇಶ ಸಂಘಟಿಸುವ ಕುರಿತು ಚರ್ಚಿಸಿಲಾಯಿತು.
ಮತ್ತು ಇವುಗಳ ಈಡೇರಿಕೆಗಾಗಿ ಎಲ್ಲರೂ ಒಗ್ಗಟ್ಟಿನಿಂದ ಭಾಗವಹಿಸಿ ಯಶಸ್ವಿಯಾಗಿ ಹೋರಾಡಲು ನಿರ್ಣಯ ತೆಗೆದುಕೊಳ್ಳಲಾಯಿತು .ಸಭೆಯನ್ನು ಧಾರವಾಡ ಜಿಲ್ಲಾ ನಿವೃತ್ತರ ಸಂಘ ಮತ್ತು ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘ ಜಿಲ್ಲಾ ಘಟಕ ಧಾರವಾಡ ಮತ್ತು ಕರ್ನಾಟಕ ನಿವೃತ್ತ ನೌಕರರ ವೇದಿಕೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಸಂಘಟಿಸಲಾಗಿತ್ತು. ತಾಲೂಕು ಘಟಕಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸೇರಿದಂತೆ ನೂರಾರು ಜನ ನಿವೃತ್ತ ನೌಕರರು ಸಭೆಯಲ್ಲಿ ಭಾಗವ ಹಿಸಿ ಯಶಸ್ವಿಗೊಳಿಸಿದರು.
ಸಭೆಯ ನಂತರ ಎಲ್ಲರೂ ಸೇರಿ ಮಾನ್ಯ ಜಿಲ್ಲಾಧಿಕಾ ರಿಗಳು ಧಾರವಾಡ ಕಛೇರಿಗೆ ತೆರಳಿ, ಮಾನ್ಯ ಜಿಲ್ಲಾಧಿ ಕಾರಿಗಳು ಧಾರವಾಡ ಯವರ ಮೂಲಕ ಕರ್ನಾಟಕ ಘನ ಸರಕಾರದ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ,ನಿವೃತ್ತ ನೌಕರರ ನ್ಯಾಯಯುತ ಬೇಡಿಕೆಗಳ ಈಡೇರಿಸಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಲಾ ಯಿತು.
ಇದೆ ರೀತಿ ಜಿಲ್ಲಾ ಸಚಿವರಿಗೆ,ಶಾಸಕರುಗಳಿಗೆ ಹಾಗೂ ತಾಲೂಕ ತಹಶೀಲ್ದಾರರಿಗೆ ದಿನಾಂಕ 24-8-24 ರೊಳಗಾಗಿ ಮನವಿ ಸಲ್ಲಿಸಲು ವಿವಿಧ ಘಟಕಗಳ ವಿವಿಧ ಹಂತದ ಪದಾಧಿಕಾರಿಗಳಿಗೆ ಜವಾಬ್ದಾರಿ ನೀಡಲಾಯಿತು.
ಸುದ್ದಿ ಸಂತೆ ನ್ಯೂಸ್ ಧಾರವಾಡ…..