ಹುಬ್ಬಳ್ಳಿ –
ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ BRTS ಅಖಾಡಕ್ಕಿಳಿದ MD ಪ್ರಿಯಾಂಗಾ – ಚಿಗರಿ ಬಸ್ ವ್ಯವಸ್ಥೆ ಕುರಿತಂತೆ ಅಧಿಕಾರಿಗಳೊಂದಿಗೆ ವೀಕ್ಷಣೆ…..ಇದು ಸುದ್ದಿ ಸಂತೆಯ ವರದಿ ಫಲಶೃತಿ
ಹುಬ್ಬಳ್ಳಿ ಧಾರವಾಡ ಮಧ್ಯೆ ಸಂಚಾರ ಮಾಡುತ್ತಿರುವ ಚಿಗರಿ ಬಸ್ ಅವ್ಯವಸ್ಥೆ ಕುರಿತಂತೆ ಸುದ್ದಿ ಸಂತೆಯ ವರದಿಗೆ ಅಧಿಕಾರಿಗಳು ಸ್ಪಂದಿಸಿದ್ದಾರೆ.ಹೌದು ಕಳೆದ ಹತ್ತು ದಿನಗಳಿಂದ ಸುದ್ದಿ ಸಂತೆ ಚಿಗರಿ ಬಸ್ ಸಮಸ್ಯೆ ಅವ್ಯವಸ್ಥೆ ಕುರಿತಂತೆ ನಿರಂತರವಾಗಿ ವರದಿಯನ್ನು ಪ್ರಕಟಣೆ ಮಾಡುತ್ತಾ ಬೆಳಕು ಚೆಲ್ಲುತ್ತಿದ್ದು ಇದರ ಬೆನ್ನಲ್ಲೇ ಸಧ್ಯ ಈ ಒಂದು ಇಲಾಖೆಗೆ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಪ್ರಿಯಾಂಗ ಅವರು ಅಧಿಕಾರವನ್ನು ವಹಿಸಿಕೊಂಡಿದ್ದಾರೆ.
ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ MD ಯವರು ಚಿಗರಿ ಬಸ್ ಅವ್ಯವಸ್ಥೆ ಸಮಸ್ಯೆ ಗಳನ್ನು ವೀಕ್ಷಣೆ ಮಾಡಿದರು. ಹೌದು ಸಧ್ಯ ಹುಬ್ಬಳ್ಳಿ ಧಾರವಾಡ ಅವಳಿ ನಗರದ ಮಧ್ಯೆ ಜನತೆಗೆ ತುಂಬಾ ಅನುಕೂಲಕರ ಸಾರಿಗೆ ವ್ಯವಸ್ಥೆಯಾಗಿದ್ದು ಹೀಗಿರುವಾಗ ಸರಿಯಾಗಿ ನಿರ್ವಹಣೆ ಯಾಗುತ್ತಿಲ್ಲ ಹೀಗಾಗಿ ಎಲ್ಲಾ ವ್ಯವಸ್ಥೆ ಕುರಿತಂತೆ ವ್ಯವಸ್ಥಾಪಕ ನಿರ್ದೇಶಕರು ಚಿಗರಿ ಅಖಾಡಕ್ಕಿಳಿದು ಅಧಿಕಾರಿಗಳೊಂದಿಗೆ ವೀಕ್ಷಣೆಯನ್ನು ಮಾಡಿದರು
ಬಸ್ ಗಳ ಸಂಚಾರ ಸೇರಿದಂತೆ ಎಲ್ಲೇಲ್ಲಿ ಏನೇನು ಸಮಸ್ಯೆ ಗಳಿಗೆ ಬೇಕಾಗಿರುವ ಸೌಲಭ್ಯಗಳು ಹೀಗೆ ಎಲ್ಲವನ್ನು ವೀಕ್ಷಣೆ ಮಾಡಿದರು.ಸ್ಧಳದಲ್ಲೇ ಅಧಿಕಾರಿ ಗಳೊಂದಿಗೆ ಅವ್ಯವಸ್ಥೆ ಸೇರಿದಂತೆ ಎಲ್ಲವುದರ ಮಾಹಿತಿಯನ್ನು ಪಡೆದುಕೊಂಡರು.ಇದು ಮೊದಲ ಹಂತವಾಗಿದ್ದು ಇನ್ನು ಸಮಸ್ಯೆ ಕಂಡು ಕಾಣದಂತೆ ಇರುವ ಚಾಲಕರನ್ನೇ ಟಾರ್ಗೆಟ್ ಮಾಡಿಕೊಂಡಿರುವ ಕೆಲ ಅಧಿಕಾರಿಗಳ ಕಾರ್ಯವೈಖರಿ ಕುರಿತಂತೆ ವ್ಯವಸ್ಥಾಪಕ ನಿರ್ದೇಶಕರು ಕೂಡಾ ಎಲ್ಲಾ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..