ಉಡುಪಿ –
ಮೊಬೈಲ್ ನೋಡಬೇಡ ಎಂದಿದಕ್ಕೆ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ – ಕಾಣೆಯಾಗಿದ್ದ ವಿದ್ಯಾರ್ಥಿಯ ಶವ ಬಾವಿಯಲ್ಲಿ ಪತ್ತೆ ಹೌದು ಇಂತಹ ದೊಂದು ಘಟನೆ ಉಡುಪಿ ಯಲ್ಲಿ ನಡೆದಿದೆ.ಪ್ರಥಮೇಶ್ (16) ಮೃತ ದುರ್ದೈವಿಯಾಗಿದ್ದು.ಉಡುಪಿಯ ಹಿರಿಯಡ್ಕದಲ್ಲಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ.
ಪ್ರಥಮೇಶ್ ಸದಾ ಮೊಬೈಲ್‌ನಲ್ಲಿ ಕಾಲ ಕಳೆಯುತ್ತಿದ್ದ ಹೀಗಾಗಿ ಪೋಷಕರು ಆತನಿಗೆ ಓದುವಂತೆ ಬುದ್ಧಿ ಹೇಳಿದ್ದರು.ಪೋಷಕರು ಬುದ್ಧಿ ಹೇಳಿದ್ದಕ್ಕೆ ಪ್ರಥಮೇಶ್ ಬೇಸರ ಮಾಡಿಕೊಂಡು ಮನೆ ಬಿಟ್ಟು ಹೋಗಿದ್ದ. ಇದರಿಂದಾಗಿ ಆತನ ಪೋಷಕರು ತೀವ್ರ ಹುಡುಕಾಟ ನಡೆಸಿದ್ದಾರೆ. ಆದರೆ ಪ್ರಥಮೇಶ್ ಮೃತ ದೇಹ ಬಾವಿಯಲ್ಲಿ ಪತ್ತೆಯಾಗಿದೆ.
ಸುದ್ದಿ ಸಂತೆ ನ್ಯೂಸ್ ಉಡುಪಿ…..