ಧಾರವಾಡ –
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಕೇವಲ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಮೀಸಲು ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದ್ದಾರೆ ಟೂರಿಸಂ ಅಂದ್ರೇನೇ ನಮ್ಮ ಜನರಿಗೆ ದೇವಾಲಯ, ತೀರ್ಥಕ್ಷೇತ್ರ ಗಳ ಯಾತ್ರೆ ಆದಾಗ್ಯೂ ಯಾವುದೇ ದೇವಾಲಯಗ ಳಿಗೂ ಪ್ರವಾಸೋದ್ಯಮ ಇಲಾಖೆಯಿಂದ ಹಣ ಹೋಗಬಾರದು ಎಂಬುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡಿದರು
HK Patil ಅವರೇ, ಹಾಗಾದ್ರೆ ತೀರ್ಥ ಕ್ಷೇತ್ರಗಳ ಅಭಿವೃದ್ಧಿ ಆಗುವುದಾದರೂ ಹೇಗೆ ಮುಜರಾಯಿ ಫಂಡ್ ಕೂಡ ಕಡಿತಗೊಳಿಸಿದ್ದೀರಿ.ಹಿಂದೂ ದೇವಾಲಯಗಳ ದುಡ್ಡನ್ನು ಯಥೇಚ್ಛವಾಗಿ ಅಲ್ಪ ಸಂಖ್ಯಾತರ ಕಲ್ಯಾಣ ನಿಧಿಗೆ ಸುರಿಯುವ ನಿಮಗೆ ಪ್ರವಾಸೋದ್ಯಮದ ಹಣವನ್ನು ಹಿಂದೂ ದೇವಾಲಯ ಪ್ರದೇಶಗಳ ಅಭಿವೃದ್ಧಿಗೆ ಬಳಸಬಾರದು ಎಂಬುದು ನಿಮ್ಮ ಹಿಂದೂ ವಿರೋಧಿ ನೀತಿಯನ್ನು ಎತ್ತಿ ತೋರಿಸುತ್ತದೆ
ನಿಮ್ಮ ಆಡಳಿತದಲ್ಲಿ ಎಲ್ಲಾ ಇಲಾಖೆಗಳ ಹಣ ಕೇವಲ ಅಲ್ಪಸಂಖ್ಯಾತರಿಗಷ್ಟೇ ಸೇರಬೇಕೇ ಇನ್ನೆಷ್ಟು ದಿನ ನಿಮ್ಮ ಈ ಮುಸ್ಲಿಂ ತುಷ್ಟೀಕರಣ.ನಿಮ್ಮ ಕಾಂಗ್ರೆಸ್ ಸರ್ಕಾರ ವನ್ನು ನೀವು ನಡೆಸುತ್ತಿದ್ದೀರೋ ಅಥವಾ ಇಸ್ಲಾಂ ಮೂಲಭೂತವಾದಿ ಮೌಲ್ವಿಗಳು ನಡೆಸುತ್ತಿದ್ದಾರೋ ಎಂಬುದನ್ನು ಸ್ಪಷ್ಟಪಡಿಸಿ ಎಂದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..