ಧಾರವಾಡ –
ಧಾರವಾಡ ದ ಧರಣಿ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ನಿ 9 ನೇ ವಾರ್ಷಿಕ ಸರ್ವಸಾಧಾರಣ ಸಭೆ – ಸಂಸ್ಥೆಯ ಸರ್ವಾಂಗೀಣ ಅಭಿವೃದ್ಧಿ ಬಗ್ಗೆ ವಿಸ್ತೃತ ಚರ್ಚೆ
ಸಂಸ್ಥೆಯ ನಿರ್ದೇಶಕರಾದ ಈರೇಶ ಅಂಚಟಗೇರಿ ಸರ್ವಸದಸ್ಯರ ಸಾಮಾನ್ಯ ಸಭೆ ಉದ್ದೇಶಿಸಿ ಮಾತನಾಡಿ, ಸಂಸ್ಥೆಯ ಅಧ್ಯಕ್ಷರು ಮಹೇಶ ಶೆಟ್ಟಿಯವರ ನೇತೃತ್ವದಲ್ಲಿ ಆಡಳಿತ ಮಂಡಳಿ ಸಹಕಾರದೊಂದಿಗೆ 9 ವರ್ಷಗಳಲ್ಲಿ ಸಂಸ್ಥೆಯ ಸಾಧನೆ ಅಪಾರ ಮುಂಬರುವ ದಿನಮಾನ ಗಳಲ್ಲಿ ಇನ್ನು ಗಣನೀಯ ಸಾಧನೆಗೈಯಲು
ಸಹಕಾರ ಅವಶ್ಯ ಎಂದರು
ಸಂಸ್ಥೆಯ ಸಂಸ್ಥಾಪಕ ನಿರ್ದೇಶಕರು ದಿವಂಗತ ಪ್ರಕಾಶ ಗೋಡಬೊಲೆ ಅವರ ಕೊಡುಗೆ ಸಂಸ್ಥೆಗೆ ಅಪಾರ ಇಂದು ಸಂಸ್ಥೆ ಉನ್ನತ ಮಟ್ಟಕ್ಕೆ ಬೆಳೆಯಲು ಅವರು ಮೂಲ ಕಾರಣಿಭೂತರಾಗಿದ್ದು ಅವರಿಗೂ ಕೃತಜ್ಞತೆ ಅರ್ಪಿಸಿ ಮುಂಬರುವ ವರ್ಷ ಸಂಸ್ಥೆಯ ದಶಮಾನೋತ್ಸವ ಜರುಗಲಿದ್ದು ವಿಜೃಂಭಣೆಯಿಂದ ಆಚರಿಸೋಣ ಹಾಗೂ ಸಂಸ್ಥೆಯ ಏಳ್ಗೆಗಾಗಿ ಶ್ರಮಿಸೋಣ ಎಂದರು.
ಸಂಸ್ಥೆಯ ಅಧ್ಯಕ್ಷರು ಮಹೇಶ ಶೆಟ್ಟಿ ಮಾತನಾಡಿ ಸಂಸ್ಥೆಯ ಗ್ರಾಹಕರು ಹಾಗು ಠೇವಣಿದಾರರಿಗೆ ಅಭಿನಂದಿಸಿದರು. ಸಂಸ್ಥೆಯ ಏಳ್ಗೆಗಾಗಿ ಶ್ರಮಿಸುತ್ತಿರುವ ಆಡಳಿತ ಮಂಡಳಿಯ ಸದಸ್ಯರು ಹಾಗೂ ಸಲಹಾ ಸಮಿತಿ ಸದಸ್ಯರಿಗೆ ಕೃತಜ್ಞತೆ ಅರ್ಪಿಸಿದರು. ಅಲ್ಪಾವಧಿ ಯಲ್ಲಿ ಅಭಿವೃದ್ಧಿ ಹೊಂದಲು ಸುವ್ಯವಸ್ಥಿತ ರೀತಿಯಲ್ಲಿ ನಡೆಸಿಕೊಂಡು ಹೋಗಲು ಸಹಕರಿಸಿದ ಸಮಸ್ತ ಸಿಬ್ಬಂದಿ ವರ್ಗ, ಪಿಗ್ಮಿ ಸಂಗ್ರಹಕರು, ಪ್ರತ್ಯಕ್ಷ ಪರೋಕ್ಷ ವಾಗಿ ಸಹಾಯ ಮಾಡಿದ ಸಮಸ್ತರಿಗೂ ಧನ್ಯವಾದಗಳು ಅರ್ಪಿಸಿದರು.
ಸಭೆಯಲ್ಲಿ ಅಧ್ಯಕ್ಷರು ಮಹೇಶ ಶೆಟ್ಟಿ, ನಿರ್ದೇಶಕರು, ವಿ ಬಿ ಯಳಲ್ಲಿ , ಈರೇಶ ಅಂಚಟಗೇರಿ, ಭರತ ಎಂ ಭಂಡಾರಿ,ವಾಯ ಬಿ ಪಾಟೀಲ, ಎಸ್ ಕೆ ಸವಡಿ , ರವಿಂದ್ರ ಶೆಟ್ಟಿ ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಧಾರವಾಡ…..