ಧಾರವಾಡ –
BRTS ತೊಲಗಿಸಿ. ಹುಬ್ಬಳ್ಳಿ ಧಾರವಾಡ ಜನರನ್ನು ರಕ್ಷಿಸಿ ಆರಂಭಗೊಂಡ ಜನಾಂದೋಲನ – ಸಾಮಾಜಿಕ ಜಾಲ ತಾಣಗಳಲ್ಲಿ BRTS ಅವ್ಯವಸ್ಥೆ ಸಿಡಿದೆದ್ದ ಹುಬ್ಬಳ್ಳಿ ಧಾರವಾಡ ಜನತೆ
ಹುಬ್ಬಳ್ಳಿ ಧಾರವಾಡ ಅವಳಿ ನಗರದ ಮಧ್ಯೆ ತ್ವರಿತ ಸಾರಿಗೆ ಸೇವೆಯಾಗಿ ಆರಂಭಗೊಂಡಿರುವ BRTS ವ್ಯವಸ್ಥೆ ವಿರುದ್ದ ಆಕ್ರೋಶ ಅಸಮಾಧಾನ ಜೋರಾಗುತ್ತಿದೆ .ಬಸ್ ಗಳು ಆರಂಭಗೊಂಡು ಐದಾರು ವರ್ಷಗಳು ಕಳೆದಿದ್ದು ಸರಿಯಾದ ನಿರ್ವಹಣೆ ವ್ಯವಸ್ಥೆ ಇಲ್ಲದ ಪರಿಣಾಮವಾಗಿ ಬಸ್ ಗಳು ಹಾಳಾಗುತ್ತಿದ್ದು ಹೀಗಾಗಿ ಚಾಲಕರು ಇದರಿಂದಾಗಿ ಬೇಸತ್ತಿದ್ದು ಇದರ ಜೊತೆಯಲ್ಲಿ ವ್ಯವಸ್ಥೆಯನ್ನು ಸರಿ ಮಾಡುವ ಬದಲಿಗೆ ಈಗಷ್ಟೇ ವಿಭಾಗಕ್ಕೆ ಡಿಸಿಯಾಗಿ ಬಂದಿರುವ ಸಿದ್ದಲಿಂಗಯ್ಯ ಅವರು ಚಾಲಕರ ಮೇಲೆಯೆ ದರ್ಪವನ್ನು ತೋರುತ್ತಿದ್ದು ಇದರಿಂದಾಗಿ ಚಾಲಕರು ಕೂಡಾ ಡೂಟಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ
ಈ ನಡುವೆ ಇತ್ತ ಈ ಒಂದು ಸಾರಿಗೆ ವ್ಯವಸ್ಥೆಯ ವಿರುದ್ದ ಆಕ್ರೋಶಗೊಂಡಿದ್ದು ಅಸಮಾಧಾನ ಗೊಂಡಿದ್ದಾರೆ.ಬಿಆರ್ ಟಿಎಸ್ ತೊಲಗಿಸಿ ಹುಬ್ಬಳ್ಳಿ ಧಾರವಾಡ ಜನತೆಯನ್ನು ರಕ್ಷಿಸಿ ಎಂಬ ದೊಡ್ಡ ಆಂದೋಲವನ್ನು ಆರಂಭ ಮಾಡಿದ್ದಾರೆ ಈ ಒಂದು ಕುರಿತಂತೆ ಈಗಾಗಲೇ ಹಲವು ಬಾರಿ ಹೋರಾಟವನ್ನು ಮಾಡಿರುವ ಅವಳಿ ನಗರದ ಜನತೆ ಸಧ್ಯ ಸಾಮಾಜಿಕ ಜಾಲ ತಾಣಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹೋರಾಟದ ಆಂದೋ ಲನವನ್ನು ಹುಟ್ಟು ಹಾಕಿದ್ದಾರೆ.
ಈ ಒಂದು ಅವೈಜ್ಞಾನಿಕವಾಗಿರುವ ಬಿಆರ್ ಟಿಎಸ್ ನಿಂದಾಗಿ ಅವಳಿ ನಗರದ ಜನತೆ ಸಾಕಷ್ಟು ತೊಂದರೆಯನ್ನು ಅನುಭವಿಸುತ್ತಿದ್ದು ಅಲ್ಲದೇ ಕೋಟಿ ಕೋಟಿ ರೂಪಾಯಿ ಅನುಧಾನವನ್ನು ಹಾಕಿದರು ಕೂಡಾ ಇದರಿಂದಾಗಿ ಲಾಭವಾಗಿಲ್ಲ ಬದಲಿಗೆ ಸಾರ್ವಜನಿಕರು ಪರದಾಡುತ್ತಿದ್ದು ಈ ಒಂದು ವ್ಯವಸ್ಥೆಯ ವಿರುದ್ದ ಜನತೆ ಹೋರಾಟದ ರೂಪದಲ್ಲಿ ದೊಡ್ಡ ಆಂದೋಲನ ಆರಂಭಗೊಂ ಡಿದೆ.ಸಾಮಾಜಿಕ ಜಾಲ ತಾಣಗಳಲ್ಲಿ ಈ ಒಂದು ಕುರಿತಂತೆ ಜನಾಂದೋಲನ ವನ್ನು ಹುಟ್ಟು ಹಾಕಿರುವ ಪ್ರಗತಿಪರ ಹೋರಾಟಗಾರರು ಯುವಕರು BRTS ತೊಲಗಿಸಿ.
ಹುಬ್ಬಳ್ಳಿ ಧಾರವಾಡ ಜನರನ್ನು ರಕ್ಷಿಸಿ ಎಂಬ ಸಂದೇಶದೊಂದಿಗೆ ಹೋರಾಟಕ್ಕೆ ಕರೆ ಕೊಡುತ್ತಾ ಸಧ್ಯ ಸಾಮಾಜಿಕ ಜಾಲ ತಾಣಗಳಲ್ಲಿ ಹೋರಾಟವು ಆರಂಭಗೊಂಡಿದ್ದು ಸಾಕಷ್ಟು ಪ್ರಮಾಣದಲ್ಲಿ ಜನಾಂದೋಲನ ರೂಪದಲ್ಲಿ ಎಲ್ಲರೂ ಕೈಜೊಡಿಸುತ್ತಿದ್ದಾರೆ.ಇನ್ನಾದರೂ ದೊಡ್ಡ ಪ್ರಮಾಣದಲ್ಲಿ ಜನರು ಹೋರಾಟಕ್ಕೆ ಮುಂದಾ ಗುವ ಮುನ್ನವೇ ಈ ಒಂದು ಅವೈಜ್ಞಾನಿಕವಾದ ಯೋಜನೆಯನ್ನು ಸರಿಪಡಿಸಿ ಇಲ್ಲವಾದರೆ ಬರುವ ದಿನಗಳಲ್ಲಿ ಸಿಡಿದೆಳಲಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ…..