ಹುಬ್ಬಳ್ಳಿ –
ರಸ್ತೆ ಮಧ್ಯದಲ್ಲಿ ನಿಂತುಕೊಂಡಿದ್ದ ಯುವಕನಿಗೆ ಸೈಡ್ ನಿಂತುಕೊಳ್ಳಿ ಎಂದು ಹೇಳಿದ ಚಿಗರಿ ಬಸ್ ಚಾಲಕ ಮಹಾಂತೇಶ ಗುರಿಕಾರ ಮೇಲೆ ಯುವಕ ಮಣಿಕಂಠ ಹಲ್ಲೆ ಮಾಡಿದ್ದನು.ಹಿಗ್ಗಾ ಮುಗ್ಗಾ ಹಲ್ಲೆ ಮಾಡಲಾಗಿತ್ತು ನಗರದ ಬೈರಿದೇವರಕೊಪ್ಪದಲ್ಲಿ ಈ ಒಂದು ಘಟನೆ ನಡೆದಿತ್ತು ಇದರ ಬೆನ್ನಲ್ಲೇ ಡ್ರೈವರ್ ಮಹಾಂತೇಶ ಕೂಡಾ ಹಲ್ಲೆ ಮಾಡಿದ ಯುವಕನನ್ನು ಕರೆದೊಯ್ದು ನವನಗರ ಪೊಲೀಸ್ ಠಾಣೆ ಗೆ ಕರೆದೊಯ್ದಿದ್ದನು
ಪೊಲೀಸರು ಕೂಡಾ ದೂರು ತೆಗೆದುಕೊಳ್ಳಲು ಹಿಂದೆ ಮುಂದೆ ನೋಡಿದ್ದರು ಬೇಸತ್ತು ಡ್ರೈವರ್ ಮನೆಯತ್ತ ಹೋಗಿದ್ದು ಇದೆಲ್ಲ ಒಂದು ವಿಚಾರ ವಾದರೆ ಇನ್ನೂ ಇಷ್ಷೇಲ್ಲಾ ನಡೆದರು ಕೂಡಾ ಮಾನವೀಯತೆಗಾಗಿ ಡಿಸಿ ಸಿದ್ದಲಿಂಗಯ್ಯ ಸೇರಿದಂತೆ ಯಾರೊಬ್ಬರೂ ಕೂಡಾ ಹಲ್ಲೆಗೊಳಗಾದ ಡ್ರೈವರ್ ಸಪೋರ್ಟ್ ಮಾಡಿಲ್ಲ ಪೊನ್ ಮಾಡಿ ಸಮಸ್ಯೆ ಆಲಿಸಿಲ್ಲ
ಅಪ್ಪಿತಪ್ಪಿ ಡ್ರೈವರ್ ನಿಂದಾಗಿ ಏನಾದರೂ ತಪ್ಪು ಆಗಿದ್ದರೆ ಡಿಸಿ ಮೊದಲು ಚಾಲಕನಿಗೆ ಅಮಾನತು ಮಾಡುತ್ತಿದ್ದರು ಮುಖದ ತುಂಬೆಲ್ಲಾ ರಕ್ತ ಬರುವ ಹಾಗೆ ಹೊಡೆಸಿ ಕೊಂಡು ಸುದ್ದಿ ಯಾಗಿದ್ದರು ಕೂಡಾ ಪೊನ್ ಮಾಡಿ ಸಮಸ್ಯೆ ಆಲಿಸದ ಅಧಿಕಾರಿಗಳಿಗೆ ಡ್ರೈವರ್ ಸಮಸ್ಯೆ ಮೊದಲು ಅರ್ಥವಾಗಬೇಕು ಇಂತಹ ಅಧಿಕಾರಿ ಗಳನ್ನು ಮೊದಲು ಜನಪ್ರತಿನಿಧಿಗಳು ಎತ್ತಂಗಡಿ ಮಾಡಬೇಕು ಇನ್ನೂ ಡೂಟಿ ಡೂಟಿ ಎನ್ನುತ್ತಾ ತಿರುಗಾಡುವ ಚಾಲಕರು ಇಂತಹ ಸಮಸ್ಯೆ ಆದಾಗ ನೊಂದವರ ಧ್ವನಿ ಯಾಗಿ ನಿಂತುಕೊಳ್ಳಬೇಕು.ಅಂದಾಗ ಆತ್ಮ ಸ್ಥೈರ್ಯ ಬರುತ್ತದೆ
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..